Advertisement

16ಸಾವಿರ ಕೋಟಿ ರೂ. ಬಾಕಿ ವೇತನ ಕೊಡದ ಮಸ್ಕ್ ವಿರುದ್ಧ ಪರಾಗ್‌ ಅಗರ್ವಾಲ್‌ ದಾವೆ

09:48 PM Mar 05, 2024 | Team Udayavani |

ನವದೆಹಲಿ: ಟ್ವೀಟರ್‌ ಮುಖ್ಯಸ್ಥ ಎಲಾನ್‌ ಮಸ್ಕ್ ಅವರ ವಿರುದ್ಧ ಟ್ವೀಟರ್‌ನ ಮಾಜಿ ಸಿಇಒ ಪರಾಗ್‌ ಅಗರ್‌ವಾಲ್‌ ಸೇರಿ ಸಂಸ್ಥೆಯ ನಾಲ್ವರು ಮಾಜಿ ಕಾರ್ಯನಿವಾರ್ಹಕರು ಪಾವತಿ ಬಾಕಿ ಸಂಬಂಧಿಸಿದಂತೆ ಮೊಕದ್ದಮೆ ದಾಖಲಿಸಿದ್ದಾರೆ.

Advertisement

2022ರಲ್ಲಿ ಟ್ವೀಟರ್‌ ಅನ್ನು ಖರೀದಿಸುವ ಸಂದರ್ಭದಲ್ಲಿ ಪರಾಗ್‌ ಅಗರ್ವಾಲ್‌, ಟ್ವೀಟರ್‌ನ ಮಾಜಿ ಹಣಕಾಸು ಅಧಿಕಾರಿ ನೆಡ್‌ ಸೇಗಲ್‌, ಕಾನೂನು ಮತ್ತು ನೀತಿ ವಿಭಾಗದ ಮಾಜಿ ಅಧಿಕಾರಿ ವಿಜಯ್‌ ಗದ್ದೆ, ಮಾಜಿ ಜನರಲ್‌ ಕೌನ್ಸಿಲ್‌ ಸೀನ್‌ ಎಡೆjಟ್‌ ಅವರಿಗೆ ಒಟ್ಟು 200 ದಶಲಕ್ಷ ಡಾಲರ್‌ (16 ಸಾವಿರ ಕೋಟಿ ರೂ.)ಗಳ ಕರಾರು ಸಮಾಪ್ತಿ ವೇತನ ನೀಡುವುದಾಗಿ ಮಸ್ಕ್ ಒಪ್ಪಂದ ಮಾಡಿಕೊಂಡಿದ್ದರು.

ಆದರೆ, ಆ ಪಾವತಿಯನ್ನು ಮಾಡಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದ ಉತ್ತರ ಜಿಲ್ಲಾ ಕೋರ್ಟಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next