Advertisement

ಭ್ರಷ್ಟಾಚಾರ ಹಗರಣ:ಮಾಜಿ ಎಂಪಿ ಮದನಿಗೆ ಜಾಮೀನು ನೀಡಿದ ಸಿಬಿಐ ಕೋರ್ಟ್‌

12:23 PM Feb 21, 2017 | udayavani editorial |

ಹೊಸದಿಲ್ಲಿ : ಖೋಟಾ ದಾಖಲೆ ಪತ್ರಗಳನ್ನು ಸೃಷ್ಟಿಸಿ ಸರಕಾರದ ಬೊಕ್ಕಸಕ್ಕೆ 5.75 ಲಕ್ಷ ರೂ.ಗಳನ್ನು ವಂಚಿಸುವ ಮೂಲಕ ಎಲ್‌ಟಿಸಿ ಸ್ಕ್ಯಾಮ್‌ ನಡೆಸಿದ್ದ ಮಾಜಿ ರಾಜ್ಯಸಭಾ ಸಂಸದ ಮಹಮೂದ್‌ ಎ ಮದನಿ ಅವರಿಗೆ ವಿಶೇಷ ಸಿಬಿಐ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

Advertisement

ವೈಯಕ್ತಿಕ 50,000 ರೂ.ಗಳ ಬಾಂಡ್‌ ಆಧಾರದ ಮೇಲೆ ಮದನಿಗೆ ವಿಶೇಷ ಸಿಬಿಐ ನ್ಯಾಯಾಧೀಶ ಅಂಜು ಬಜಾಜ್‌ ಚಂದ್ನಾ ಅವರು ಜಾಮೀನು ಮಂಜೂರು ಮಾಡಿದರು. ಇದೇ ವೇಳೆ ನ್ಯಾಯಾಧೀಶರು ಮದನಿಯ ಮಾಜಿ ಖಾಸಗಿ ಸಹಾಯಕ ಮೊಹಮ್ಮದ್‌ ಮುಬಾಶಿರ್‌ಗೆ ಕೂಡ ಇದೇ ಪ್ರಕರಣಲ್ಲಿ, ಇಷ್ಟೇ ಮೊತ್ತದ ಬಾಂಡ್‌ ಮೇಲೆ ಜಾಮೀನು ಮಂಜೂರು ಮಾಡಿದರು. 

ಪ್ರಕರಣದ ವಿಚಾರಣೆ ಸಂಬಂಧ ದಾಖಲೆ ಪತ್ರಗಳ ಪರಾಮರ್ಶೆಗಾಗಿ ನ್ಯಾಯಾಲಯವು ಮುಂದಿನ ವಿಚಾರಣೆ ದಿನವನ್ನು ಮಾರ್ಚ್‌ 29ಕ್ಕೆ ನಿಗದಿಪಡಿಸಿದೆ.

ಅಂದು ಕೋರ್ಟಿಗೆ ಹಾಜರಾಗುವಂತೆ, ಉತ್ತರ ಪ್ರದೇಶದ ಆರ್‌ಎಲ್‌ಡಿ ನಾಯಕನೂ ಆಗಿರುವ ಮದನಿಗೆ ಹಾಗೂ ಮುಬಾಶಿರ್‌ಗೆ ನ್ಯಾಯಾಲಯ ಸೂಚಿಸಿದೆ.  ಸಿಬಿಐ ಸಲ್ಲಿಸಿದ್ದ ಚಾರ್ಜ್‌ ಶೀಟ್‌ ಮೇಲೆ ವಿಚಾರಣೆ ನಡೆಯುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next