Advertisement

ಪಾಕಿಸ್ಥಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಭಾಷಣ ಪ್ರಸಾರಕ್ಕೆ ತಡೆ

11:57 PM Nov 05, 2022 | Team Udayavani |

ಇಸ್ಲಾಮಾಬಾದ್‌: ಪಾಕಿಸ್ಥಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಕೊಲೆ ಯತ್ನ ವಿಫ‌ಲಗೊಂಡ ಬೆನ್ನಲ್ಲೇ ಅವರು ಪ್ರಚಾರ ಪಡೆಯದಂತೆ ತಡೆಯಲು ಅಲ್ಲಿನ ಸರಕಾರ ಹರಸಾಹಸ ಆರಂಭಿಸಿದೆ.

Advertisement

ಇಮ್ರಾನ್‌ ಖಾನ್‌ ಅವರ ಭಾಷಣಗಳು ಮತ್ತು ಪತ್ರಿಕಾಗೋಷ್ಠಿಗಳನ್ನು ಪ್ರಸಾರ ಮಾಡದಂತೆ ಎಲ್ಲ ಟಿವಿ ಚಾನೆಲ್‌ಗ‌ಳಿಗೆ ಪಾಕಿಸ್ಥಾನದ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ಶನಿವಾರ ಕಟ್ಟಪ್ಪಣೆ ನೀಡಿದೆ.

ಅಷ್ಟೇ ಅಲ್ಲ, ಅವರ ಭಾಷಣಗಳ ಮರುಪ್ರಸಾರಕ್ಕೆ ಪ್ರಾಧಿಕಾರ ತಡೆ ತಂದಿದೆ. ಇದೇ ವೇಳೆ ಗುರುವಾರದ ಮೆರವಣಿಗೆ ವೇಳೆ ದಾಳಿಕೋರ ಗುಂಡು ಹಾರಿಸುತ್ತಿದ್ದಂತೆ, ಆತನನ್ನು ಹಿಡಿದು ಗುರಿ ತಪ್ಪುವಂತೆ ಮಾಡಿದ ಯುವಕನನ್ನು ಇಮ್ರಾನ್‌ ಖಾನ್‌ “ನೀನು ಪಾಕಿಸ್ಥಾನದ ಹೀರೋ’ ಎಂದು ಹೊಗಳಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಮ್ರಾನ್‌ ಖಾನ್‌ ಶನಿವಾರ ಆ ಯುವಕ ಇಬಿ¤ಸಾಮ್‌ನನ್ನು ಭೇಟಿಯಾಗಿ ಧನ್ಯವಾದ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next