Advertisement

ಏರ್‌ ಇಂಡಿಯಾ ವಿರುದ್ಧ ಪೈಲಟ್‌ ಕೇಸು

10:15 AM Mar 30, 2018 | Team Udayavani |

ಹೊಸದಿಲ್ಲಿ: ಏರ್‌ಇಂಡಿಯಾಕ್ಕೆ ಸಂಕಷ್ಟವೊಂದು ಎದುರಾಗಿದ್ದು, ಮಾಜಿ ಪೈಲಟ್‌ ಒಬ್ಬರು ತಮಗೆ ಕೊಡಬೇಕಾದ ಹಣವನ್ನು ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಂಸ್ಥೆ ವಿರುದ್ಧ ರಾಷ್ಟ್ರೀಯ ಕಂಪನಿಗಳ ನ್ಯಾಯಾಧಿಕರಣದ ಮೊರೆ ಹೋಗಿದ್ದಾರೆ.

Advertisement

ಕ್ಯಾ. ಸುಬೋಧ್‌ ಕುಮಾರ್‌ ಏರ್‌ಇಂಡಿಯಾದ ನಿವೃತ್ತ ಪೈಲಟ್‌ ಆಗಿದ್ದು, 28 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ದೂರಿನ ಪ್ರಕಾರ, ಏರ್‌ಇಂಡಿಯಾ 2012ರಿಂದ 2016ರ ಅವಧಿಯಲ್ಲಿ ತಮ್ಮ ಸಂಬಳ ಹಾಗೂ ಭತ್ಯೆಗಳ ಒಟ್ಟು ಮೊತ್ತ 67.84 ಲಕ್ಷ ರೂ. ಬಾಕಿ ಉಳಿಸಿಕೊಂಡಿದೆ. 2016 ಜನವರಿಯಲ್ಲಿ ಹಣವನ್ನು ನೀಡಬೇಕಿತ್ತು. ಅಂದಿನಿಂದಲೂ ಹಣ ಕೊಡದೇ ಸತಾಯಿಸುತ್ತಲೇ ಬಂದಿದೆ. 1988ರಲ್ಲಿ ಏರ್‌ಇಂಡಿಯಾ ಸೇರಿಕೊಂಡಿದ್ದಾಗಿ ತಿಳಿಸಿದ್ದು, ಮಾಹಿತಿ ಇಲ್ಲದೇ ತಮ್ಮ ಖಾತೆಗೆ 29,39,000 ರೂ. ಜಮೆ ಮಾಡಿದ್ದಾಗಿ ತಿಳಿಸಿದ್ದಾರೆ.

ಬಿಸಿನೆಸ್‌ ಸರಕಾರ: ಏರ್‌ಇಂಡಿಯಾ ಖಾಸಗೀಕರಣಕ್ಕೆ ಸಂಬಂಧಿಸಿದಂತೆ ಎಐಟಿಯುಸಿ ಆಕ್ರೋಶ ವ್ಯಕ್ತಪಡಿಸಿ, ಸರಕಾರ ಈ ಮೂಲಕ ಬಿಸನೆಸ್‌ಗೆ ಇಳಿದಿದೆ ಎಂದು ಆರೋಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next