Advertisement

ಈ ಆಟಗಾರ ಇರುವಾಗ ಏಕದಿನ ತಂಡದ ನಾಯಕತ್ವ ಹಾರ್ದಿಕ್ ಗೆ ಸಿಗುವುದು ಕಷ್ಟ: ಆಕಾಶ್ ಚೋಪ್ರಾ

10:43 AM Jan 29, 2023 | Team Udayavani |

ಮುಂಬೈ: ಸದ್ಯ ಭಾರತ ಕ್ರಿಕೆಟ್ ತಂಡದ ಮುಂದಿನ ನಾಯಕ ಯಾರಾಗಬಹುದು ಎಂಬ ಚರ್ಚೆ ನಡೆಯುತ್ತಿದೆ. 2023ರ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ವರೆಗೆ ರೋಹಿತ್ ಶರ್ಮಾ ನಾಯಕತ್ವ ವಹಿಸುವ ನಿರೀಕ್ಷೆಯಿದೆ ಆದರೆ ಈ ವರ್ಷದ ವಿಶ್ವಕಪ್ ನಂತರ ಏಕದಿನ ನಾಯಕತ್ವದಲ್ಲಿ ಬದಲಾವಣೆಯನ್ನು ನಿರೀಕ್ಷಿಸಬಹುದು ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಶುಕ್ರವಾರ ಹೇಳಿದ್ದಾರೆ.

Advertisement

2024 ರ ಐಸಿಸಿ ಟಿ 20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಭಾರತವನ್ನು ಮುನ್ನಡೆಸುವ ಸಾಧ್ಯತೆಯಿದೆ, ಆದರೆ ಅವರಿಗೆ ಏಕದಿನ ತಂಡದ ನಾಯಕತ್ವವನ್ನು ನೀಡುವುದು ಕಷ್ಟ ಎಂದು ಚೋಪ್ರಾ ಹೇಳಿದರು.

ಭಾರತದ ಭವಿಷ್ಯದ ಏಕದಿನ ನಾಯಕನ ಆಯ್ಕೆಯ ಬಗ್ಗೆ ಕೇಳಿದಾಗ, ರೋಹಿತ್ ಉತ್ತರಾಧಿಕಾರಿಯಾಗಿ ಶುಭ್ಮನ್ ಗಿಲ್ ಅಥವಾ ರಿಷಭ್ ಪಂತ್ ಪ್ರಮುಖ ಅಭ್ಯರ್ಥಿಗಳಾಗಿರಬಹುದು ಎಂದು ಚೋಪ್ರಾ ಹೇಳಿದರು.

ಇದನ್ನೂ ಓದಿ:ಸ್ಯಾಂಡಲ್ ವುಡ್ ಹಿರಿಯ ನಟ ಮಂದೀಪ್ ರಾಯ್ ಇನ್ನಿಲ್ಲ

“ನಾವು ಇನ್ನೂ ಎಲ್ಲಾ ಸ್ವರೂಪಗಳಿಗೆ ಒಬ್ಬ ನಾಯಕನನ್ನು ಹುಡುಕುತ್ತಿದ್ದೇವೆ ಎಂದು ನನಗನಿಸುವುದಿಲ್ಲ. ಆ ದಿನಗಳು ಮುಗಿದಿವೆ ಎಂದು ನಾನು ಭಾವಿಸುತ್ತೇನೆ. ರೋಹಿತ್ ಶರ್ಮಾ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ತನಕ ಟೆಸ್ಟ್ ತಂಡದ ನಾಯಕರಾಗಿರುತ್ತಾರೆ” ಎಂದು ಚೋಪ್ರಾ ಜಿಯೋ ಸಿನಿಮಾದಲ್ಲಿ ಹೇಳಿದರು.

Advertisement

“ಹಾರ್ದಿಕ್ ಪಾಂಡ್ಯ ಪ್ರಸ್ತುತ ಟಿ20 ಸ್ವರೂಪದಲ್ಲಿ ನಾಯಕರಾಗಿದ್ದಾರೆ ಅವರು 2024ರ ಐಸಿಸಿ ಟಿ20 ವಿಶ್ವಕಪ್ ರಲ್ಲಿಯೂ ಭಾರತ ತಂಡದ ನಾಯಕರಾಗಿರಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ವಿಶ್ವಕಪ್ ವರೆಗೆ ನಾಯಕನಾಗಿ ಮುಂದುವರಿಯುತ್ತಾರೆ. ಆದರೆ ದೀರ್ಘಾವಧಿಯಲ್ಲಿ ಭಾರತದ ನಾಯಕತ್ವದ ವಿಷಯದಲ್ಲಿ ಶುಭಮನ್ ಗಿಲ್ ಮತ್ತು ರಿಷಭ್ ಪಂತ್ ಅವರೇ ಪ್ರಮುಖ ಅಭ್ಯರ್ಥಿಯಾಗಿರುತ್ತಾರೆ. ಮುಂದೆ ಭಾರತ ತಂಡದ ನಾಯಕತ್ವಕ್ಕೆ ಇವರೇ ನನ್ನ ಇಬ್ಬರು ಅಭ್ಯರ್ಥಿಗಳು ಎಂದು ಆಕಾಶ್ ಚೋಪ್ರಾ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next