Advertisement

ಕಲ್ಲಿದ್ದಲು ಹಗರಣ: ಗುಪ್ತಾಗೆ ಏಳು ವರ್ಷ ಶಿಕ್ಷೆಗೆ ಮನವಿ

10:49 AM May 22, 2017 | Team Udayavani |

ಹೊಸದಿಲ್ಲಿ: ಬಹುಕೋಟಿ ಮೊತ್ತದ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ, ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ಕೇಂದ್ರ ಕಲ್ಲಿದ್ದಲು ಇಲಾಖೆ ಮಾಜಿ ಕಾರ್ಯದರ್ಶಿ ಎಚ್‌.ಸಿ.ಗುಪ್ತಾ ಅವರಿಗೆ 7 ವರ್ಷದ ಶಿಕ್ಷೆ ನೀಡಬೇಕೆಂದು ವಿಶೇಷ ಕೋರ್ಟ್‌ಗೆ ಆಗ್ರಹಿಸಿದೆ. 

Advertisement

ಪ್ರಕರಣದಲ್ಲಿ ಖಾಸಗಿ ಕಂಪನಿಗೆ ಕಲ್ಲಿದ್ದಲು ಬ್ಲಾಕ್‌ ಹಂಚಿಕೆಧಿಯಲ್ಲಿ ಗುಪ್ತಾ ಕ್ರಿಮಿನಲ್‌ ಸಂಚು ರೂಪಿಸಿದ ಆರೋಪ ಹೊಂದಿದ್ದು, ಈಗಾಗಲೇ ವಿಶೇಷ ಕೋರ್ಟ್‌ ಗುಪ್ತಾರನ್ನು ದೋಷಿ ಎಂದು ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣ ಸೋಮಧಿವಾರ ಪ್ರಕಟವಾಗಲಿದೆ. ಗುಪ್ತಾ ವಿರುದ್ಧ ಇನ್ನೂ 10 ಪ್ರಕರ ಣಗಳು ಪ್ರತ್ಯೇಕ ಕೋರ್ಟ್‌ಗಳಲ್ಲಿ ವಿಚಾರಣೆ ಹಂತದಲ್ಲಿವೆ.

ತಪ್ಪು ನಿರೂಪಣೆ: ಕಲ್ಲಿದ್ದಲು ಹಗರಣದಲ್ಲಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ವಿರುದ್ಧ ಅಪ್ರಾಮಾಣಿಕ ಎಂಬ ತಪ್ಪು ನಿರೂಪಣೆ ಇದೆ ಎಂದು ವಿಶೇಷ ಕೋರ್ಟ್‌ ಅಭಿಪ್ರಾಯ ಪಟ್ಟಿದೆ. ಮಾಜಿ ಕಾರ್ಯದರ್ಶಿ ಗುಪ್ತಾ, ಖಾಸಗಿ ಸಂಸ್ಥೆಗೆ ಕಲ್ಲಿ ದ್ದಲು ಬ್ಲಾಕ್‌ ನೀಡಲು ಅಕ್ರಮವಾಗಿ ಶಿಫಾರಸು ಮಾಡಿದ್ದು ಸಿಂಗ್‌ ವಿರುದ್ಧ ಕೆಟ್ಟ ಅಭಿಪ್ರಾಯ ಬರಲು ಕಾರಣವಾಗಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next