Advertisement
ಏನಿದು ಆರೋಪ?ಕಳೆದ 7 ತಿಂಗಳ ಹಿಂದೆ ಸಿಎಂ ಇಬ್ರಾಹಿಂ ಪುತ್ರಿ ಇಫಾ(ಇಬ್ರಾಹಿಂ ಸಹೋದರನ ಪುತ್ರನ ಜೊತೆ) ಅಪ್ಪನ ವಿರೋಧ ಕಟ್ಟಿಕೊಂಡು ಪ್ರೇಮ ವಿವಾಹವಾಗಿದ್ದರು. ಈಗ ನಾಲ್ಕುವರೆ ತಿಂಗಳ ಗರ್ಭಿಣಿಯಾಗಿರುವ ಮಗಳು(ಇಫಾ) ತವರು ಮನೆಗೆ ಬಂದಿದ್ದಾಗ, ಸಿಎಂ ಇಬ್ರಾಹಿಂ ಅವರು ಮಗಳಿಗೆ ಕುಡಿಯುವ ಜ್ಯೂಸ್ ನಲ್ಲಿ ಗರ್ಭಪಾತದ ಮಾತ್ರೆ ಬೆರೆಸಿ ಕೊಟ್ಟಿರುವುದಾಗಿ ಸ್ವತಃ ಮಗಳೇ ಆರೋಪಿಸಿದ್ದಾರೆಂದು ವರದಿ ವಿವರಿಸಿದೆ.
Related Articles
ಸಿಎಂ ಇಬ್ರಾಹಿಂ ಪುತ್ರಿ ಇಫಾ ಗರ್ಭಪಾತಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರಕಟಣೆ ನೀಡಿರುವ ವಿಕ್ರಮ್ ಆಸ್ಪತ್ರೆ, ನಿನ್ನೆ ರಾತ್ರಿ ಇಫಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಪರೀಕ್ಷೆ ನಡೆಸಿದಾಗ ತೀವ್ರ ರಕ್ತಸ್ರಾವದಿಂದ ಬಳಲುತ್ತಿರುವುದು ಪತ್ತೆಯಾಗಿತ್ತು. ಅಪೂರ್ಣ ಗರ್ಭಪಾತದ ವಿಚಾರ ತಿಳಿದು ಬಂದಿತ್ತು. ಆಕೆ 15 ವಾರಗಳ ಗರ್ಭಿಣಿಯಾಗಿದ್ದಳು. ಜೀವ ಉಳಿಸುವ ಸಲುವಾಗಿ ಗರ್ಭಪಾತ ಮಾಡಿಸಬೇಕಾಯಿತು. ಗರ್ಭಪಾತ ಮಾಡಿಸುವ ತುರ್ತು ಸಂದರ್ಭದಲ್ಲಿ ಪತಿಯ ಅನುಮತಿಯ ಅಗತ್ಯವಿಲ್ಲ. ಇಫಾ ತಾಯಿ ಅವರ ಸಹಿ ಪಡೆದು ಗರ್ಭಪಾತ ಮಾಡಿದ್ದೇವೆ. ರಕ್ತಸ್ರಾವಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ತಿಳಿಸಿದೆ. ಸದ್ಯ ಇಫಾ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪ್ರಕಟಣೆ ವಿವರಿಸಿದೆ.
Advertisement