Advertisement

ವಿಪಕ್ಷಗಳ ಸೋಲಿಗೆ ಇವಿಎಂಗಳನ್ನು ದೂಷಿಸಲ್ಲ: ಪವಾರ್‌

04:17 PM May 24, 2019 | Vishnu Das |

ಮುಂಬಯಿ: ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳ ಸೋಲಿಗೆ ತಾನು ಎಲೆಕ್ಟ್ರಾನಿಕ್‌ಮತ ಯಂತ್ರಗಳನ್ನು (ಇವಿಎಂ) ದೂಷಿಸುವುದಿಲ್ಲ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ನುಡಿದಿ
ದ್ದಾರೆ. ಅಲ್ಲದೆ, ಈ ಜನಾದೇಶವನ್ನು ತಾನು ಹೃದಯ ಪೂರ್ವಕವಾಗಿ ಒಪ್ಪಿಕೊಂಡಿದ್ದೇನೆ ಎಂದಿದ್ದಾರೆ.

Advertisement

ಗಮನಾರ್ಹ ಅಂಶವೆಂದರೆ, ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಮೊದಲು ಎ®ಸಿಪಿ ಇತರ ವಿಪಕ್ಷಗಳೊಂದಿಗೆ ಸೇರಿಕೊಂಡು ಇವಿಎಂ ತಿರುಚು ವಿಕೆಯ ಸಾಧ್ಯತೆಗಳ ಬಗ್ಗೆ ಪದೇ ಪದೇ ಕಳವಳ ವ್ಯಕ್ತಪಡಿ ಸಿತ್ತು. ಬಿಜೆಪಿ ಕೆಲವು ರಾಜ್ಯಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಬಹುದೆಂದು ವಿಪಕ್ಷಗಳು ಮೊದಲೇ ನಿರೀಕ್ಷಿಸಿದ್ದವು, ಆದರೆ ದೇಶದಾದ್ಯಂತ ಇಷ್ಟು ದೊಡ್ಡ ಗೆಲುವನ್ನು ನಿರೀಕ್ಷಿಸಿರಲಿಲ್ಲ ಎಂದು ಪವಾರ್‌ ಹೇಳಿದರು.

ಇವಿಎಂಗಳ ಕಾರ್ಯನಿರ್ವಹಣೆ ಬಗ್ಗೆ ಸಂದೇಹಗಳು ಬೆಳೆದಿರುವುದು ಮಾತ್ರ ನಿಜ. ಆದರೆ ಫಲಿತಾಂಶಗಳು ಹೊರಬಿದ್ದಿರುವುದರಿಂದ ತಾನು ಈಗ ಯಂತ್ರಗಳನ್ನು ದೂಷಿಸಲು ಇಷ್ಟಪಡುವುದಿಲ್ಲ, ತೀರ್ಪು ಹೊರಬಿದ್ದ  ಬಳಿಕ ಅದನ್ನು ಹೃತೂ³ರ್ವಕವಾಗಿ ಒಪ್ಪಿಕೊಳ್ಳಬೇಕು ಮತ್ತು ನಾನು ಅದನ್ನು ಹೃತೂ³ರ್ವಕವಾಗಿ ಒಪ್ಪುತ್ತೇನೆ ಎಂದವರು ಇಲ್ಲಿ ಸುದ್ದಿಗಾರರೊಂದಿಗೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next