Advertisement

ಜೀವ ಜನ್ಮ ರಹಸ್ಯಕ್ಕೆ ಕುರುಹು?

07:00 AM Oct 08, 2017 | |

ವಾಷಿಂಗ್ಟನ್‌: ಮಂಗಳ ಗ್ರಹದ ಪುರಾತನ ಸಮುದ್ರ ತಳದಲ್ಲಿ ಹೈಡ್ರೋಥರ್ಮಲ್‌ ಶೇಖರಣೆ ಪತ್ತೆಯಾಗಿದ್ದು, ಇದರಿಂದ ಭೂಮಿಯಲ್ಲಿ ಜೀವಿಗಳ ವಿಕಾಸದ ಮೂಲದ ಬಗ್ಗೆ ಸುಳಿವು ಸಿಗಬಹುದು ಎನ್ನಲಾಗಿದೆ. ನಾಸಾದ ಮಾರ್ಸ್‌ ರಿಕೊನಯಸನ್ಸ್‌ ಆರ್ಬಿಟರ್‌ (ಎಂಆರ್‌ಒ) ಮಂಗಳನ ದಕ್ಷಿಣ ಭಾಗದಲ್ಲಿ ಭಾರಿ ಪ್ರಮಾಣದ ಶೇಖರಣೆ ಇರುವುದನ್ನು ಗುರುತಿಸಿದೆ. ಜ್ವಾಲಾಮುಖೀಯಿಂದಾಗಿ ಅತಿಯಾದ ಉಷ್ಣ  ಜಲ, ಬೃಹತ್‌ ಸಮುದ್ರದ ಅಡಿಭಾಗವನ್ನು ತಲುಪಿತ್ತು. ಹೀಗಾಗಿ ಈ ಶೇಖರಣೆ ಉಂಟಾಗಿದೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

Advertisement

ಒಂದು ವೇಳೆ ಮಂಗಳನಲ್ಲಿ ಜೀವಿ ವಿಕಾಸದ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕಲೆಹಾ ಕಲು ಇದರಿಂದ ಸಾಧ್ಯವಾಗಿಲ್ಲದಿದ್ದರೂ, ಯಾವ ರೀತಿಯ ಜೀವಿಗಳು ಇದ್ದವು ಎಂಬುದನ್ನು ಕಂಡುಕೊಳ್ಳಬಹುದು ಎಂದು ನಾಸಾ ಸಂಶೋಧನಾ ಕೇಂದ್ರದ ಪಾಲ್‌ ನೈಲ್ಸ್‌ ಹೇಳಿದ್ದಾರೆ. 

ಭೂಮಿಯ ಮೇಲೆ ನೀರು ಅಸ್ತಿತ್ವದಲ್ಲಿದ್ದ ಸಮಯದಲ್ಲಿ ಅದೇ ರೀತಿಯ ನೀರು ಮಂಗಳನಲ್ಲೂ ಇತ್ತು. ಈ ಸಂದರ್ಭದಲ್ಲಿ ಜೀವ ವಿಕಾಸ ಭೂಮಿಯ ಮೇಲೆ ಆಗುತ್ತಿತ್ತು. ಸುಮಾರು 370 ಕೋಟಿ ವರ್ಷಗಳ ಹಿಂದೆ ಮಂಗಳನಲ್ಲಿ ಈ ಪ್ರಕ್ರಿಯೆ ನಡೆದಿದೆ ಎಂದು ಅವರು ಹೇಳಿದ್ದಾರೆ. ನಾಸಾದ ಎಂಆರ್‌ಒ, ಮಂಗಳನ ಪದರಗಳಲ್ಲಿ ಸಂಗ್ರಹವಾಗಿರುವ ಖನಿಜಗಳ ವಿವರಗಳನ್ನು ಒದಗಿಸಿದ್ದು, ಇದು ವಿಜ್ಞಾನಿಗಳ ಸಂಶೋಧ ನೆಗೆ ಪೂರಕವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next