Advertisement

ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ‌ ಮಾಡಬೇಕು

06:39 AM Jun 06, 2020 | Lakshmi GovindaRaj |

ತುಮಕೂರು: ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಹೆಚ್ಚಾದರೆ ಉತ್ತಮ ಮಳೆಯಾಗುವುದರಿಂದ ರೈತರ ಬವಣೆ ತಪ್ಪಿಸಬಹುದು. ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡಬೇಕು ಎಂದು ಎಂದು ಉಸ್ತುವಾರಿ ಸಚಿವ ಜೆ.ಸಿ.  ಮಾಧುಸ್ವಾಮಿ ಹೇಳಿದರು.

Advertisement

ಜಿಲ್ಲೆಯ ಪಾವಗಡ ತಾಲೂಕು ಕೊಡುಮಡಗು ಗ್ರಾಪಂ ವ್ಯಾಪ್ತಿ ಕೊಡಮಡಗು ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಗಿಡ  ನೆಡುವ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿದರು.

ಪ್ರಸಕ್ತ ವರ್ಷದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಡಿ 10,59,710 ಗಿಡ, ಟೆರಿಟೋರಿಯಲ್‌ ಅರಣ್ಯದವರು 13,97,000 ಗಿಡ ರೈತರಿಗೆ ನೀಡುವರು ಅಲ್ಲದೇ 17,32,000  ಗಿಡಗಳನ್ನು ನೆಡುವರು ಒಟ್ಟಾರೆಯಾಗಿ ಜಿಲ್ಲೆಯಲ್ಲಿ 42 ಲಕ್ಷ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದರು. ಇಲಾಖೆಗಳನ್ನು ವಿಲೀನಗೊಳಿಸಬೇಕೆಂದು ಚಿಂತಿಸಲಾಗಿದೆ.

ಕೆಲವು ಇಲಾಖೆ ಗಳಲ್ಲಿ ನೌಕರರು ಇದ್ದರೆ ಕೆಲಸವಿಲ್ಲ, ಕೆಲಸವಿರುವ ಕಡೆ ನೌಕರರಿಲ್ಲ ಆದರೂ ಸರ್ಕಾರ ಸುಮಾರು 85 ಸಾವಿರ ಕೋಟಿ ರೂ.ಗಳನ್ನು ವೇತನ, ವ್ಯವಸ್ಥೆ ನಿರ್ವಹಣೆಗೆ ಖರ್ಚು ಮಾಡುವ ಪರಿಸ್ಥಿತಿ ನಿರ್ಮಾಣ  ವಾಗಿದೆ ಎಂದು ತಿಳಿಸಿದರು. ಸೋಷಿಯಲ್‌ ಸೆಕ್ಯುರಿಟಿಯಲ್ಲಿ ಅಷ್ಟೇ  ಹಣ ನಾವು ನೀಡುತ್ತಿದ್ದೇವೆ.

ತಾಲೂಕು ಮಟ್ಟದಲ್ಲಿರುವ ಸಣ್ಣ-ಪುಟ್ಟ ಇಲಾಖೆ  ಗಳನ್ನು ಜಿಲ್ಲಾ, ರಾಜ್ಯ ಮಟ್ಟದಲ್ಲಿ ಮಾತ್ರ ತರಬೇಕೆ ಸಣ್ಣ ಪುಟ್ಟ 2-3 ಇಲಾಖೆಗಳಿಗೆ  ವಿಲೀನಗೊಳಿಸಿ ಒಬ್ಬ ಅಧಿಕಾರಿ ನೇಮಿಸ ಚಿಂತಿಸಬೇಕೆ ಎಂದು  ಆಲೋಚಿಸಲಾಗುತ್ತಿದೆ ಎಂದರು. ಆಡಳಿತಾತ್ಮಕ ವ್ಯವಸ್ಥೆ ಸುಧಾ ರಣೆ  ಮಾಡಲು ಕಾಲಕಾಲಕ್ಕೆ ಸಮಿತಿ ಗಳನ್ನುನೇಮಕ ಮಾಡಿ, ಅವುಗಳ ಶಿಫಾರಸಿನಂತೆ  ನಾವು ಕ್ರಮ ಕೈಗೊಳ್ಳಬೇಕು ಎಂದರು.

Advertisement

ಇಲಾಖೆಗಳ ವಿಲೀನ ದಿಂದ ಸಚಿವ ಸಂಪುಟದ ಗಾತ್ರದಲ್ಲಿ ಬದಲಾವಣೆ ಯಾಗುವುದಿಲ್ಲ ಎಂದು ಸಚಿವರು ಕೃಷಿ ಇಲಾಖೆಯಲ್ಲಿರುವ ಜಿಲ್ಲೆಯಲ್ಲಿ ಜಂಟಿ ನಿರ್ದೇಶಕರು ಇರುವ ಕುರಿತು ಉದಾಹರಣೆಯನ್ನು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next