Advertisement

ಎಲ್ಲರಿಗೂ ಪ್ರಥಮ ಚಿಕಿತ್ಸೆ ಮಾಹಿತಿ ಅಗತ್ಯ

05:30 PM Nov 30, 2021 | Team Udayavani |

ಬಾಗಲಕೋಟೆ: ಪ್ರಥಮ ಚಿಕಿತ್ಸೆ ಮಾಹಿತಿ ಹೊಂದುವುದು ಪ್ರತಿಯೊಬ್ಬರಿಗೂ ಅವಶ್ಯ. ಇದರಿಂದ ತುರ್ತು ಸಂದರ್ಭದಲ್ಲಿ ತಾವು ಎಚ್ಚರಿಕೆಯಿಂದ ಇರುವುದರೊಂದಿಗೆ ಮತ್ತೂಬ್ಬರನ್ನು ಪ್ರಾಣಾಪಾಯದಿಂದ ರಕ್ಷಿಸಬಹುದು ಎಂದು ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯ ಜಿಲ್ಲಾ ಚೇರಮನ್‌ ಆನಂದ ಜಿಗಜಿನ್ನಿ ಹೇಳಿದರು.

Advertisement

ಬೀಳಗಿ ತಾಪಂ ಸಭಾಭವನದಲ್ಲಿ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯ ಶತಮಾನೋತ್ಸವದ ನಿಮಿತ್ತ ಆಶಾ ಕಾರ್ಯಕರ್ತರಿಗೆ ಪ್ರಥಮ ಚಿಕಿತ್ಸೆ ತರಬೇತಿ ಹಾಗೂ ಬೇಸಿಕ್‌ ಲೈಫ್‌ ಸಪೋರ್ಟ್‌ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಥಮ ಚಿಕಿತ್ಸೆಯ ಸಂಪೂರ್ಣ ಮಾಹಿತಿ ಪಡೆದಾಗ ಸಂದಿಗ್ಧ ಸ್ಥಿತಿಯಲ್ಲಿ ಜೀವ ಉಳಿಸುವ ಕಾರ್ಯ ಮಾಡಬಹುದು. ಬೀಳಗಿ ತಾಲೂಕಿನಲ್ಲಿ ಇದು ಎರಡನೆಯ ಶಿಬಿರಾಗಿದ್ದು ಇನ್ನು ಹೆಚ್ಚು-ಹೆಚ್ಚು ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದರು.

ಮಾನವೀಯತೆ, ಭಾತೃತ್ವ, ಸೇವಾ ಮನೋಭಾವ ಹೊಂದಿದ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯು ವಿಶ್ವದ 168 ದೇಶಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಅರೋಗ್ಯ ಸೇವೆಗಳೊಂದಿಗೆ ಪ್ರಕೃತಿ ವಿಕೋಪ, ಸ್ವತ್ಛತೆ, ಅಪೌಷ್ಟಿಕತೆ ಜನಜಾಗೃತಿ ಮೂಡಿಸುವಲ್ಲಿ ಹಾಗೂ ಮತ್ತಿತರ ತುರ್ತು ಸಂದರ್ಭಗಳಲ್ಲಿ ಜನರ ಸೇವೆಗೆ ರೆಡ್‌ ಕ್ರಾಸ್‌ ಸ್ವಯಂಸೇವಕರು ಸಿದ್ಧ ಎಂದು ಹೇಳಿದರು.

ತಾಲೂಕ ಆರೋಗ್ಯಾ ಧಿಕಾರಿ ಡಾ| ದಯಾನಂದ ಕರಿಯಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೂಲ ಹಂತದಲ್ಲಿ ಕಾರ್ಯ ಮಾಡುವ ಆಶಾ ಕಾರ್ಯಕರ್ತೆಯರು ತರಬೇತಿ ಪಡೆದು ಸಾರ್ವಜನಿಕರಿಗೆ ಆಪತ್ತು ಕಾಲದಲ್ಲಿ ಮನುಷ್ಯನ ಜೀವ ಉಳಿಸುವ, ತಿಳಿಸುವ ಕಾರ್ಯವಾಗಬೇಕು ಎಂದರು. ರಾಜ್ಯಮಟ್ಟದ ಪ್ರಥಮ ಚಿಕಿತ್ಸೆ ತರಬೇತುದಾರ ಸಚೇತ ಸುವರ್ಣ ಪ್ರಥಮ ಚಿಕಿತ್ಸೆ ಎಲ್ಲ ವಿಧಾನ ಮನಮುಟ್ಟುವಂತೆ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿದರು.

Advertisement

ತಾಲೂಕು ಆಸ್ಪತ್ರೆ ಮುಖ್ಯ ವೈದ್ಯಾಧಿ ಕಾರಿ ಡಾ| ಸಂಜಯ ಎಡಹಳ್ಳಿ, ಪಪಂ ಮಾಜಿ ಅಧ್ಯಕ್ಷ ಸಿದ್ದಲಿಂಗೇಶ ನಾಗರಾಳ, ಸಿದ್ದು ಬಾಗಶೆಟ್ಟಿ, ವೀರಣ್ಣ ಅಥಣಿ, ಪ್ರವೀಣ ಹಿರೇಕುಂಬಿ, ಡಾ| ಅಶ್ವಿ‌ನಿ ಪಾದರಾ, ಶ್ರೀನಿವಾಸ ಪೂಜಾರಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next