ಧಾರವಾಡ: ಆರೋಗ್ಯವಂತ, ಸ್ವಾಭಿಮಾನಿ ಬದುಕಿಗಾಗಿ ಪ್ರತಿಯೊಂದು ಕುಟುಂಬ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಜನಪ್ರತಿನಿ ಧಿಗಳು, ಅ ಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳು ಸಹಕಾರ ನೀಡಬೇಕು. ಇದರಿಂದ ಮಹಾತ್ಮಾ ಗಾಂಧೀಜಿ ಕಂಡ ಕನಸು ಸ್ವಚ್ಛ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.
ಕೇಂದ್ರ ಸರ್ಕಾರದ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಧಾರವಾಡ ಮತ್ತು ವಿಜಯಪುರ ಘಟಕಗಳು ತಾಲೂಕಿನ ತಿರ್ಲಾಪುರ ಗ್ರಾಮದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛ ಭಾರತ ಅಭಿಯಾನ, ಹೆಣ್ಣು ಮಗು ರಕ್ಷಿಸಿ ಶಿಕ್ಷಣ ಕೋಡಿಸಿ, ಜನಧನ ಯೋಜನೆ ಹಾಗೂ ಯೋಗ ಕುರಿತ ವಿಶೇಷ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶೌಚಾಲಯ ನಿರ್ಮಾಣ ವಿಷಯದಲ್ಲಿ ಸಾರ್ವಜನಿಕರಿಗೂ ಹೆಚ್ಚಿನ ಜವಾಬ್ದಾರಿಯಿದೆ. ಹಣಕಾಸಿನ ಸಮಸ್ಯೆ ಮುಂದಿಟ್ಟುಕೊಂಡು ಶೌಚಾಲಯ ನಿರ್ಮಾಣ ಮಾಡದಿರುವುದು ಸಮರ್ಥನೀಯವಲ್ಲ ಎಂದರು. ನವಲಗುಂದ ತಾಪಂ ಇಒ ಬಿ.ಎಸ್. ಮೂಗನೂರಮಠ ಮಾತನಾಡಿ, ಜನರ ಬೇಜವಾಬ್ದಾರಿಯಿಂದ ಬಯಲು ಮಲ ವಿಸರ್ಜನೆ ತಾಲೂಕಿನಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರೂಢಿಯಲ್ಲಿದೆ.
ಇದನ್ನು ಹತೋಟಿಗೆ ತರಲು ಮತ್ತು ಶೌಚಾಲಯ ನಿರ್ಮಿಸಲು ಪ್ರೇರೇಪಿಸಿದವರಿಗೆ 150 ರೂ. ಪ್ರೇರಣಾ ಧನ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಕ್ಷೇತ್ರ ಪ್ರಚಾರ ಅ ಧಿಕಾರಿ ಜಿ. ತುಕಾರಾಮ ಗೌಡ ಮಾತನಾಡಿ, ಶೌಚಾಲಯ ನಿರ್ಮಾಣಕ್ಕೆ ಬಿಪಿಎಲ್ ಕಾರ್ಡ್ ಹೊಂದಿರುವ ದಲಿತ ಕುಟುಂಬಕ್ಕೆ 15 ಸಾವಿರ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ಪ್ರಧಾನ ಮತ್ತು ಮಹಿಳಾ ಅಂಗವಿಕಲ ಕುಟುಂಬಗಳಿಗೆ 12 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು ಎಂದರು.
ನವಲಗುಂದ ತಾಪಂ ಅಧ್ಯಕ್ಷೆ ವೆಂಕಮ್ಮ ಚಾಕಲಬ್ಬಿ ಮಾತನಾಡಿದರು. ಆಯುಷ್ ವೈದ್ಯಾ ಧಿಕಾರಿ ಡಾ| ಹೇಮಂತ, ಶಿಶು ಅಭಿವೃದ್ಧಿ ಯೋಜನೆ ಇಲಾಖೆಯ ಮೇಲ್ವಿಚಾರಕರಾದ ಗಾಯತ್ರಿ ಉಪನ್ಯಾಸ ನೀಡಿದರು. ಗ್ರಾಮದ ಕೆವಿಜಿ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಎಸ್.ಜಿ. ಕುಲಕರ್ಣಿ ಜನಧನ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ತಿರ್ಲಾಪುರ ಗ್ರಾಪಂ ಅಧ್ಯಕ್ಷ ಬಸಪ್ಪ ಅಣ್ಣಗೇರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಶಾಲಾ ವಿದ್ಯಾರ್ಥಿಗಳು ನಡೆಸಿದ ಜಾಗೃತಿ ಜಾಥಾಕ್ಕೆ ಗ್ರಾಪಂ ಅಧ್ಯಕ್ಷ ಬಸಪ್ಪ ಅಣ್ಣಗೇರಿ ಚಾಲನೆ ನೀಡಿದರು. ಮುರಳೀಧರ ಕಾರಬಾರಿ ನಿರೂಪಿಸಿದರು. ನಾಗಲಿಂಗ ಗುಳೇದ ಸ್ವಾಗತಿಸಿದರು. ಪಿಡಿಒ ವಿಜಯಲಕ್ಷ್ಮೀ ಕೂರವರ ವಂದಿಸಿದರು.