Advertisement

ಎಲ್ಲರೂ ಲೆಫ್ಟ್

06:01 PM Sep 16, 2019 | Team Udayavani |

ನನ್ನ ಗೆಳೆಯರೊಬ್ಬರು ಸಾಹಿತ್ಯದ ಅಭಿರುಚಿ ಹೊಂದಿದ್ದವರು. ಕತೆ, ಕವನ-ಲೇಖನಗಳನ್ನು ಓದುವ, ಬರೆಯುವ ಆಸಕ್ತಿಯನ್ನು ಎಲ್ಲರಲ್ಲೂ ಬೆಳೆಸಬೇಕೆಂದು ಒಂದು ವಾಟ್ಸಾಪ್‌ ಗ್ರೂಪ್‌ ರಚಿಸಿದ್ದರು. ಇದರಲ್ಲಿ ಪದವಿ ಕಾಲೇಜಿನಲ್ಲಿ ಐಚ್ಛಿಕ ವಿಷಯವಾಗಿ ಕನ್ನಡ ಓದಿದ ಗೆಳೆಯರನ್ನು ಸೇರಿಸಲಾಗಿತ್ತು. ಪ್ರತಿದಿನ ಅವರೇ ಸ್ವರಚಿತ ಕವನಗಳನ್ನು ಹಾಕುವುದು, ಅದರ ಮೇಲೆ ವಿಮರ್ಶೆ ಮಾಡುವುದು ನಡೆಯುತ್ತಿತ್ತು. ಗುಂಪಿನಲ್ಲಿ ಅನುಭವಿ ಬರಹಗಾರರು ಹೊಸ ಬರಹಗಾರರಿಗೆ ಸಲಹೆಗಳನ್ನು ನೀಡುತ್ತಿದ್ದರು. ಕೆಲವರು ಸಂಘಸಂಸ್ಥೆಗಳು ತಮಗೆ ನೀಡಿರುವ ಪ್ರಶಸ್ತಿಗಳನ್ನು ಅಭಿಮಾನಪೂರ್ವಕವಾಗಿ ಹಾಗೂ ಪ್ರಚಾರ ಮಾಡಲು ಗ್ರೂಪ್‌ನಲ್ಲಿ ಹಾಕುತ್ತಿದ್ದರು. ಒಂದಷ್ಟು ಜನ ಅದಕ್ಕೆ ಲೈಕುಗಳನ್ನು ಒತ್ತಿ ಅವರ ಮನಸ್ಸನ್ನು ಮತ್ತಷ್ಟು ಮುದ ಗೊಳಿಸುತ್ತಿದ್ದರು. ಈ ಲೈಕುಗಳು ಹೆಚ್ಚುತ್ತಿದ್ದಂತೆ, ಸಾಹಿತ್ಯ ವಿಮರ್ಶೆ ಹಿಂದಕ್ಕೆ ಹೋಯಿತು. ಪ್ರಶಸ್ತಿಯ ಪ್ರಚಾರ ಮುಂದಕ್ಕೆ ಬಂತು. ಗ್ರೂಪಿನ ಅಡ್ಮಿನ್‌ ಮಧ್ಯ ಪ್ರವೇಶಿಸಿ, ನಿಯಮಗಳನ್ನು ಪಾಲಿಸಿರೆಂದು ಎಲ್ಲರಿಗೂ ಎಚ್ಚರಿಕೆ ನೀಡಿದರು. ಹೀಗೆ ಎಚ್ಚರಿಕೆ ನೀಡಿದ ಮೇಲೆ ಎಲ್ಲರೂ ವೈಯಕ್ತಿಕ ಸಂದೇಶ ಅಥವಾ ಪ್ರಶಸ್ತಿಗಳ ಕುರಿತು ಸಂದೇಶವನ್ನು ಹಾಕುವುದನ್ನೇ ಬಿಟ್ಟು ಬಿಟ್ಟರು. ಹೀಗೇ ಹಲವು ತಿಂಗಳುಗಳ ಕಾಲ ನಡೆಯಿತು. ಆ ನಂತರದಲ್ಲಿ ನಿಯಮಿತವಾಗಿ ಕತೆ-ಕವನಗಳು ಚರ್ಚೆಯಾಗುತ್ತಿದ್ದವು. ಈ ಮಧ್ಯೆ ಇದ್ದಕ್ಕಿದ್ದಂತೆ ಅಡ್ಮಿನ್‌ಗೆ ಒಂದು ಪ್ರಶಸ್ತಿ ಬಂತು. ಆ ವಿಚಾರವನ್ನು ವಾಟ್ಸಾಪ್‌ ಗ್ರೂಪ್‌ಗೆ ಹಾಕಿಯೇ ಬಿಟ್ಟರು.

Advertisement

ತಕ್ಷಣ ಕೆಲವರು, ಹಿಂದೆ ಗ್ರೂಪ್‌ ನಿಯಮ ಪಾಲಿಸಿ ಎಂದು ಹೇಳಿದ್ದ ಅಡ್ಮಿನ್‌ಗೆà- ನಿಯಮ ಅಂದ ಮೇಲೆ ಎಲ್ಲರಿಗೂ ಒಂದೇ. ನೀವೂ ಪ್ರಶಸ್ತಿ ವಿವರ ಹಾಸುವಂತಿಲ್ಲ ಎಂದರು ! ಹೀಗೆ ಮಾಡಿದವರನ್ನು ಒಬ್ಬೊಬ್ಬರಾಗಿ, ಯಾವ ಮುಲಾಜೂ ಇಲ್ಲದೆ ಗ್ರೂಪ್‌ನಿಂದ ಹೊರ ಹಾಕುತ್ತಾ ಹೋದರು ಅಡ್ಮಿನ್‌.

ಇದು ಬರು ಬರುತ್ತಾ ಹೆಚ್ಚಾಗುತ್ತಾ ಹೋಯಿತು. ಎಂಭತ್ತು ಸದಸ್ಯರಿದ್ದ ಗ್ರೂಪ್‌ ಐದೂ ಜನರಿಗೆ ಇಳಿಯಿತು. ಕೊನೆಗೆ ನಾನೂ ಒಳಗೊಂಡಂತೆ ಈ ಐದೂ ಜನರೂ ಅಡ್ಮಿನ್‌ಗೆ ನಮ್ಮ ವಾಟ್ಸಾéಪ್‌ ಗ್ರೂಪ್‌ ಎಲ್ಲರ ವಿಶ್ವಾಸ ಕಳೆದುಕೊಂಡಿರುವುದರಿಂದ ವಿಸರ್ಜನೆ ಮಾಡಿ ಎಂದು ವಿನಂತಿಸಿದೆವು. ಇದಕ್ಕೂ ಬಗ್ಗದ ಅಡ್ಮಿನ್‌, ಮತ್ತೆ ತಮಗೆ ಸಂಘ ಸಂಸ್ಥೆಗಳಿಂದ ಸಂದ ಪ್ರಶಸ್ತಿಗಳನ್ನು ಗ್ರೂಪಿನಲ್ಲಿ ಸುರಿಯಲು ಪ್ರಾರಂಭಿಸಿದರು. ಕೊನೆಗೆ ಉಳಿದ ಐದಾರು ಸ್ನೇಹಿತರು ಒಟ್ಟಿಗೆ ಲೆಫ್ಟ್ ಆದೆವು.

ಮಲ್ಲಪ್ಪ ಫ‌ ಕರೇಣ್ಣನವರ

Advertisement

Udayavani is now on Telegram. Click here to join our channel and stay updated with the latest news.

Next