Advertisement

ಪ್ರತಿ ವ್ಯಕ್ತಿಗೂ ಗ್ರಾಹಕರ ಹಕ್ಕುಗಳ ಅರಿವು ಅವಶ್ಯ

04:49 PM Dec 25, 2021 | Team Udayavani |

ಹುಬ್ಬಳ್ಳಿ: ಪ್ರತಿ ವ್ಯಕ್ತಿಗೂ ಗ್ರಾಹಕರ ಹಕ್ಕುಗಳ ಬಗ್ಗೆ ಅರಿವು ಅವಶ್ಯಕತೆಯಿದೆ. ನಗರ, ಹಳ್ಳಿ ಹಾಗೂ ಸಮಾಜದ ಅಭಿವೃದ್ಧಿಗೆ ಜಾಗೃತ ಗ್ರಾಹಕನ ಪಾತ್ರ ಪ್ರಮುಖವಾಗಿದ್ದು, ಗ್ರಾಹಕರು ಪ್ರತಿ ವಿಷಯಗಳಲ್ಲೂ ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ರವೀಂದ್ರ ಆರಿ ಹೇಳಿದರು.

Advertisement

ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಅಂಗವಾಗಿ ಇಲ್ಲಿನ ಜೆಎಸ್‌ಎಸ್‌ ಸಕ್ರಿ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ ಸಿ.ಆರ್‌.ಪಾಟೀಲ ಮಾತನಾಡಿ, ಗ್ರಾಹಕರ ಹಿತರಕ್ಷಣೆಗಾಗಿ ಈ ಕಾನೂನು ಜಾರಿಗೆ ತರಲಾಯಿತು. ಗ್ರಾಹಕರ ಹಿತರಕ್ಷಣೆ ಅಮೆರಿಕಾದಲ್ಲಿ ತುಂಬಾ ಮಹತ್ವ ಪಡೆದಿದೆ. ಗ್ರಾಹಕ ನಿಯಮ ಉಲ್ಲಂಘನೆಗೆ ತುಂಬಾ ಕಠಿಣ ಕ್ರಮಗಳಿವೆ. ಅವುಗಳನ್ನು ಭಾರತದಲ್ಲಿ ತರುವ ಅವಶ್ಯಕತೆಯಿದೆ.

ಗ್ರಾಹಕ ಸೇವಾ ಪ್ರಾಧಿಕಾರವು ತಾಲೂಕು ಜಿಲ್ಲಾ ಹಾಗೂ ರಾಷ್ಟ್ರೀಯ ಪ್ರಾಧಿಕಾರಗಳು ತುಂಬಾ ಮುಖ್ಯ ಪಾತ್ರ ವಹಿಸುತ್ತವೆ. ಸೇವಾ ನ್ಯೂನತೆಗೆ ಪರಿಹಾರ ಪಡೆದ ಅನೇಕ ಗ್ರಾಹಕರಿದ್ದಾರೆ. ಆದರೆ, ಸಾಮಾನ್ಯ ಜನತೆಗೆ ಅದರ ಅರಿವು ಕಡಿಮೆಯಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ| ರೂಪಾ ಇಂಗಳಹಳ್ಳಿ ಮಾತನಾಡಿದರು. ಪ್ರೊ|ಬಾಬೂಲಾಲ ದರಗದ, ಪ್ರೊ| ದೀಪಾ ಪಾಟೀಲ, ಸುರೇಶ ಲಿಂಬಿಕಾಯಿ , ಆರ್‌.ಎಸ್‌. ಅವಧಾನಿ, ಸಿ.ವಿ.ಸತೀಶ, ಬಿ. ಭರತ ಇನ್ನಿತರರಿದ್ದರು. ಪ್ರೊ| ಶ್ರೀಶೈಲ ಮೂಧೋಳ ಸ್ವಾಗತಿಸಿದರು, ಗೀತಾಂಜಲಿ ಕಾಮತ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next