Advertisement
ಬಾತ್‌ರೂಮಿನಲ್ಲಿ ಕೈ ಕಾಲು ಮುಖ ತೊಳೆದು, ಕೆಳಗೆ ಬಂದು, ಹೆಂಡತಿ ಹೆಚ್ಚಾಗಿ ಇನ್ನೂ ಏಳದಿರುವುದರಿಂದ ದೇವರ ಕೋಣೆ ಒರಸಿ, ರಂಗೋಲಿ ಹಾಕಿ ದೀಪ ಹಚ್ಚಿ, ವಾಕಿಂಗ್ ಪ್ಯಾಂಟು-ಶರ್ಟು ತೊಟ್ಟು ಮನೆ ಬಾಗಿಲು ಹಾಕಿ ಗೇಟಿನ ಬಾಗಿಲು ತೆಗೆದು ಹೊರಡುವುದು. ತಿರುಗಿ ಬರುವಾಗ ಸುಮಾರು ಒಂದು ಗಂಟೆಯಾಗುತ್ತದೆ. ಬಂದವನೇ ಹೂ ಕೊಯ್ದು, ಹಿಂದೆ ತೆಗೆದುಕೊಂಡು ಹೋಗಿ ಇಡುವ ಪಾತ್ರೆ ಇದ್ದರೆ ಇಟ್ಟು, ಮೀಯಲು ಹೋಗುವುದು. ಅವಳು ಅಡುಗೆ ಮಾಡುತ್ತಿರುತ್ತಾಳೆ. ಮಿಂದು ಬಂದ ಅವನು ಪೂಜೆ ಮಾಡಿ ಮುಗಿಯುವಾಗ ಚಪಾತಿಯೋ ದೋಸೆಯೋ ಎರೆಯಲು ಸಿದ್ಧವಾಗುತ್ತದೆ. ಅಷ್ಟರಲ್ಲೇ ಪಾತ್ರೆ ತೊಳೆಯುವವಳು ಬಂದು ಕೊಣಕುಟ್ಟು ಮಾಡುತ್ತಿರುತ್ತಾಳೆ. ಮಗಳು ಹೊರಗಡೆ ಓದಲು ಹೋಗಿದ್ದಳು. ಇದ್ದರೂ ಏಳುವುದು ಲೇಟು. ಒಮ್ಮೆ, ಅವಧಿಗಿಂತ ಮುಂಚೆ ಏಳಿಸಿದರೆ ಬೇರೆ ರಾಮಾಯಣವೇ ಶುರುವಾಗುತ್ತದೆಯೆಂದು ಏಳಿಸಲು ಹೋಗುವುದಿಲ್ಲ.
ಹೀಗೆ ಹೀಗೇ ಎದ್ದು ಹೆಂಡತಿಯನ್ನು ನಿಲ್ದಾಣದವರೆಗೆ ಬಿಟ್ಟು ಬರಲು ಸಿದ್ಧವಾಗುವವರೆಗೆ ಸಣ್ಣ ಹಿಡಿದು ಮಳೆ ಶುರುವಾಯಿತು. “ಹತ್ತೇರಿ!’ ಎಂದು ಬೈಕನ್ನು ಬಿಟ್ಟು ಕಾರನ್ನು ಹೊರ ಹಾಕಿದ. ಬಿಡಲು ಬೇಕಾಗುವ ವೇಳೆ ಐದು ನಿಮಿಷವಾದರೂ ಅರ್ಧ ಗಂಟೆ ಬೇಕಾಗುತ್ತಿತ್ತು. ಅವಳು ಕೂದಲು ಬಾಚಿ, ಸೀರೆ ಉಟ್ಟು, ಅದೂ ಉಟ್ಟಿದ್ದು ಹೆಚ್ಚು ಕಡಿಮೆಯಾದರೆ ಪುನಃ ಬುಡದಿಂದ ಶುರುವಾಗಬೇಕು! ಆ ದಿನ ಹಾಗೇನೂ ಆಗಲಿಲ್ಲ. ಅವಳು ರೆಡಿಯಾಗಿ, ಮಗಳು ಇಲ್ಲದ್ದರಿಂದ ಬಾಗಿಲಿಗೆ ಚಾವಿ ಹಾಕಿ, ಗೇಟು ತೆಗೆದು ಕಾರಿನ ಮೇಲೆ ಕುಳಿತಳು. ಹೊಂಡಗಿಂಡ ಎಲ್ಲ ಇರುವ ಸುಂದರವಾದ ಮಣ್ಣು ರಸ್ತೆಯಾದ್ದರಿಂದ ಸೆಕೆಂಡ್ ಗೇರಿನ ಮೇಲೇ ಹೋಗಬೇಕು. ಈ ರಸ್ತೆ ಮುಗಿದು ಟಾರ್ ರೋಡ್ ಹಿಡಿಯುವಾಗ, ಮುಖ್ಯ ರಸ್ತೆಯಲ್ಲಿ ಅವಳು ಹತ್ತುವ ಬಸ್ಸು ನಿಂತಿದ್ದು ಕಾಣಿಸಿತು. ಆ ಇಕ್ಕಟ್ಟಿನ ರೋಡಿನಲ್ಲಿ ಫಾಸ್ಟ್ ಬಿಡಲು ಅವನ ಹತ್ತಿರ ಆಗಿಲ್ಲ. “”ಹೋದರೆ ಹೋಗ್ಲಿ, ಮತ್ತೂಂದು ಬಸ್ ಇದ್ದು” ಎಂದು ಅವಳು ಹೇಳಿದರೂ, ಸಿಕ್ಕಿದರೆ ಚಲೊ ಆಗಿತ್ತು ಎಂಬುದು ಅವಳ ಮುಖದ ಮೇಲೆ ಇದ್ದುದು ಕಾಣುತ್ತಿತ್ತು. ಇನ್ನೇನು, ಬಸ್ಸಿನ ಹತ್ತಿರ ಬಂದಿದ್ದೇವೆ ಎನ್ನುವಾಗ ಡ್ರೈವರ್ ಸ್ಟಾರ್ಟ್ ಮಾಡಿ ಬಿಟ್ಟಾಗಿತ್ತು. “”ಮುಂದಿನ ಸ್ಟ್ಯಾಂಡಿನಲ್ಲಿ ಹತ್ತುವವರು ಇರುತ್ತಾರೆ, ಅಲ್ಲಿ ನಿಲು¤” ಎಂದಳು. “”ಸರಿ” ಎಂದು ಅವನು ಅದನ್ನು ಫಾಲೋ ಮಾಡಿದ. ಅಲ್ಲಿಯೂ ಹಾಗೆಯೇ ಆಯಿತು, ಕಾರ್ ನಿಲ್ಲಿಸುತ್ತಿರುವಂತೆ ಬಸ್ಸನ್ನು ಬಿಟ್ಟಾಯಿತು. ಆದರೆ, ಆಗ ಅದರ ಹಿಂದಿರುವ ಬೋರ್ಡ್ ಕಂಡಿತು. “”ಹೋ… ಇದು ನಮ್ಮ ಬಸ್ ಅಲ್ಲ, ಬೇರೆ ಬದಿಗೆ ಹೋಗುವುದು!” ಎಂದು ಪುಟ್ಟ ಖುಷಿಯಾಯಿತು.ಅಲ್ಲೇ ಕಾರು ನಿಲ್ಲಿಸಿ, ಅವಳನ್ನು ಇಳಿಸಿ, ದೊಡ್ಡ ನಿಟ್ಟುಸಿರು ಬಿಟ್ಟು ಮನೆ ಕಡೆಗೆ ತಿರುಗಿಸಿದ.
ಗೇಟಿನ ಎದುರು ಕಾರು ನಿಲ್ಲಿಸಿ ಇಳಿಯುವಾಗ ಫಕ್ಕನೆ ನೆನಪಾಯಿತು, ಓ! ಅವಳು ಗಡಿಬಿಡಿಯಲ್ಲಿ ಮನೆ ಛಾವಿ ಕೊಡುವುದನ್ನು ಮರೆತಿದ್ದಾಳೆ, ಅವಳ ಬ್ಯಾಗನಲ್ಲೇ ಹಾಕಿಕೊಂಡಳು ಎಂದು.
Related Articles
Advertisement
ಅಷ್ಟರಲ್ಲಾಗಲೇ ಅವನ ಉದ್ವೇಗ ಕಡಿಮೆಯಾದಂತಿತ್ತು. “”ಇದೂ ಒಂದು ನಮೂನೆ ಮಜಾವೆಯಾ” ಎಂದು ಅನಿಸಲು ಹತ್ತಿತ್ತು! ವಿನಾಕಾರಣ ಹಗುರಾಗಿ ಕಾರಿನ ಒಳಗೆ ನಿಧಾನವಾಗಿ ನೋಡಿದ. ಅವಳು ಕೂತ ಸೀಟಿನ ಮೂಲೆಯಲ್ಲಿ ಒಂದು ಬದಿಗೆ, ಛಾವಿ ಮಗಳ ಹಾಗೆ ಮಲಗಿತ್ತು.
– ರಾಜು ಹೆಗಡೆ