ಕೋಲ್ಕತಾ: ನನ್ನ ತಲೆ ಕತ್ತರಿಸಿದರೂ, ತುಟ್ಟಿ ಭತ್ತೆ ಹೆಚ್ಚಳ ಅಸಾಧ್ಯವೆಂದು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೇಂದ್ರ ಸರಕಾರದ ನೌಕರರಿಗೆ ಸಮಾನವಾಗಿ, ರಾಜ್ಯ ಸರಕಾರದ ನೌಕರರಿಗೂ ತುಟ್ಟಿ ಭತ್ತೆ ಹೆಚ್ಚಳವಾಗಬೇಕೆಂದು ಆಗ್ರಹಿಸಿ, ರಾಜ್ಯದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಬಿಜೆಪಿ, ಸಿಪಿಎಂ ಸಹಿತ ಹಲವು ಪಕ್ಷಗಳು ಪ್ರತಿಭಟನೆ ಬೆಂಬಲಿಸಿವೆ ಎಂದು ದೂರಿದರು.
ಕೇಂದ್ರ ಹಾಗೂ ರಾಜ್ಯ ಸರಕಾರದ ವೇತನ ನೀತಿಗಳು ಬೇರೆ ಬೇರೆ. ಈಗಾಗಲೇ ನಾವು ಹೆಚ್ಚುವರಿ ಶೇ.3 ತುಟ್ಟಿ ಭತ್ತೆ ನೀಡಿದ್ದೇವೆ. ಇದಕ್ಕಿಂತ ಹೆಚ್ಚಿಗೆ ಭರಿಸಲು ಸರಕಾರಕ್ಕೆ ಸಾಧ್ಯವಿಲ್ಲ. ನಿಮಗೆ ತೃಪ್ತಿಯಾಗಿಲ್ಲವೆಂದರೆ ನೀವು ನನ್ನ ತಲೆ ಕತ್ತರಿಸಬಹುದು. ಆದರೆ ತುಟ್ಟಿ ಭತ್ತೆ ಹೆಚ್ಚಳವಂತೂ ಸಾಧ್ಯವಿಲ್ಲ ಎಂದಿದ್ದಾರೆ.