Advertisement
ನಗರದಲ್ಲಿ ಶನಿವಾರ ಜಸ್ಟ್ ಆಸ್ಕಿಂಗ್ ಅಭಿಯಾನದ ಭಾಗವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಎಡ-ಬಲ ಪಂಥಗಳಲ್ಲಿ ನಂಬಿಕೆ ಇಲ್ಲ. ನಾನೊಬ್ಬ ಕಲಾವಿದ, ಈ ದೇಶದ ಪ್ರಜೆ, ಜನಸಾಮಾನ್ಯನಾಗಿ ಯಾರ ಪರ-ವಿರುದ್ಧವು ಇಲ್ಲದೆ, ಜಸ್ಟ್ ಆಸ್ಕಿಂಗ್ ಅಭಿಯಾನದ ಮೂಲಕ ಅಭಿಪ್ರಾಯ ಮಂಡಿಸುತ್ತಿರುವೆ. ಇದರಿಂದ ಕೆಲವರಾದರೂ ಬದಲಾಗಬಹುದು ಎಂಬ ವಿಶ್ವಾಸ ನನ್ನದು ಎಂದರು.
Related Articles
Advertisement
ನನ್ನ ಈ ಜಸ್ಟ್ ಆಸ್ಕಿಂಗ್ ಜಾಗೃತಿ ಕಾರ್ಯಕ್ರಮಕ್ಕೆ ಸಮಾಜ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಸಮಾಜದಲ್ಲಿ ಧ್ವನಿ ಇಲ್ಲದ ಹಲವರ ಧ್ವನಿಯಾಗಿ ನಾನು ಕೆಲಸ ಮಾಡುತ್ತಿರುವೆ ಎಂದು ಹೇಳಿಕೊಂಡರು.ಯಾವುದಾದರೂ ರಾಜಕೀಯ ಪಕ್ಷ ಸೇರುವುದಾ? ಇಲ್ಲ ನಾನೇ ಹೊಸ ಪಕ್ಷ ಕಟ್ಟುವುದಾ? ಎಂಬ ಚಿಂತನೆ ಶುರು ಆಯಿತು.
ಆದರೆ, ಸ್ವಾತಂತ್ರ್ಯಾ ನಂತರ ಎಲ್ಲ ರಾಜಕೀಯ ಪಕ್ಷಗಳೂ ನಂಬಿಕೆ ದ್ರೋಹ ಮಾಡುತ್ತಲೇ ಬಂದಿವೆ, ಹೀಗಾಗಿ ಜನರ ಧ್ವನಿಯಾದರೆ ಯಾರೇ ಅಧಿಕಾರಕ್ಕೆ ಬಂದರೂ ಜನರ ಕೆಲಸ ಮಾಡಿಸಬಹುದು ಎಂಬ ಕಾರಣದಿಂದ ಜಸ್ಟ್ ಆಸ್ಕಿಂಗ್ ಅಭಿಯಾನ ಆರಂಭಿಸಿದೆ ಎಂದು ಹೇಳಿದರು.
ಬೇರೊಂದು ಧರ್ಮದ ಮೇಲಿನ ದ್ವೇಷದಿಂದ ಕೆಲವರು ನನ್ನನ್ನು ಪಾಕಿಸ್ಥಾನಕ್ಕೆ ಹೋಗು ಎನ್ನುತ್ತಾರೆ, ನಾನೇಕೆ ಹೋಗಲಿ. ನನ್ನ ಪ್ರಶ್ನೆಗಳಿಗೆ ಮೊದಲು ಉತ್ತರ ಕೊಡಿ? ಪ್ರಾಣಿಗಳಿಗೆ ಎಲ್ಲವೂ ಪ್ರಾಣಿಗಳಂತೆಯೇ ಕಾಣುತ್ತವೆ, ನಾನು ಕಾಗೆ ಕೂಗುತ್ತಿದ್ದೇನೆ, ಈಗ ವಿಷಯವಿಲ್ಲ ಅದಕ್ಕೇ ಘರ್ಜಿಸುತ್ತಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದರು.
ಕಾವೇರಿಯನ್ನು ರಾಜಕೀಯದಿಂದ ಹೊರಗಿಡಬೇಕು. ರಾಜಕಾರಣಿಗಳಿಗೆ ಸಮಸ್ಯೆ ಜೀವಂತವಾಗಿರಿಸುವುದರಲ್ಲೇ ಆಸಕ್ತಿ, ಕಮಲ್ ಹಾಸನ್, ರಜನೀಕಾಂತ್ ಮಾತನಾಡಿದಾಕ್ಷಣ ನಾನೂ ಕಾವೇರಿ ಬಗ್ಗೆ ಮಾತನಾಡಬೇಕು ಎಂದು ಯಾಕೆ ಬಯಸುತ್ತೀರಿ ಎಂದು ಪ್ರಶ್ನಿಸಿದರು.