Advertisement

ಸಿದ್ಧರಾಮಯ್ಯ ಜೀವಂತ ಬಂದರೂ ಬಿಜೆಪಿಗೆ ಸೇರಿಸಿಕೊಳ್ಳಲ್ಲ: ಯತ್ನಾಳ

06:34 PM Sep 12, 2023 | keerthan |

ವಿಜಯಪುರ: ಸಿದ್ಧರಾಮಯ್ಯರನ್ನು ಜೀವಂತವಾಗಿಯೇ ಬಿಜೆಪಿ ಪಕ್ಷಕ್ಕೆ ಕರೆದುಕೊಳ್ಳುವುದಿಲ್ಲ. ಬಿಜೆಪಿ ಸೇರಲು ಅಂಗಲಾಚಿದರೂ ಸೇರಿಸಿಕೊಳ್ಳಲು ಬಿಜೆಪಿ ಸಿದ್ಧವಿಲ್ಲ. ಹೀಗಾಗಿ ಸಿದ್ಧರಾಮಯ್ಯ ಅವರು ಸತ್ತ ಮೇಲೆ ಬಿಜೆಪಿ ಸೇರಲು ಅವಕಾಶವೇ ಇಲ್ಲ ವಿಜಯಪುರ ನಗರದ ಕ್ಷೇತ್ರದ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಕಿಸಿದ್ದಾರೆ.

Advertisement

ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ ಬಿಜೆಪಿ ಅಧಿಕಾರದಲ್ಲಿದ್ದಾಗ ಮೀಸಲು ಘೋಷಿಸಿದೆ. ಹೀಗಾಗಿ ಇದೀಗ ಮತ್ತೆ ಆರಂಭವಾಗಿರುವ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಳ್ಳುವ ಅಗತ್ಯವಿಲ್ಲ. ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳ ಶಿಷ್ಯರೇ ಅಧಿಕಾರದಲ್ಲಿದ್ದು, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಲಿ ಎಂದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ಪಂಚಮಸಲಿ ಸಮುದಾಯ ಸೇರಿದಂತೆ ಎಲ್ಲ ಹಿಂದುಳಿದ ವರ್ಗಗಳಿಗೆ ರಾಜ್ಯಪಾಲರ ಸುಗ್ರೀವಾಜ್ಞೆ ಮೂಲಕ ಮೀಸಲಾಗಿ ಘೋಷಿಸಿದೆ. ಹೀಗಾಗಿ ಪದೇ ಪದೇ ಹೋರಾಟದಲ್ಲಿ ಪಾಲ್ಗೊಳ್ಳುವುದು ಅರ್ಥವಿಲ್ಲ ಎಂದರು.

ಬಸವ ಜಯಮೃತ್ಯುಂಜಯ ಶ್ರೀಗಳ ಶಿಷ್ಯರೇ ಇದೀಗ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರದಲ್ಲಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ ಸೇರಿದ ಲಕ್ಷ್ಮೀ ಹೆಬ್ಬಾಳಕರ, ವಿಜಯಾನಂದ ಕಾಶಪ್ಪನವರ, ವಿನಯ ಕುಲಕರ್ಣಿ ಶಾಸಕ-ಸಚಿವರಿದ್ದು, ಅವರದೇ ಕಾಂಗ್ರೆಸ್ ಪಕ್ಷದ ಸರ್ಕಾರವಿದೆ. ಹೀಗಾಗಿ ನಮ್ಮ ಸರ್ಕಾರ ಎಲ್ಲ ಸಮಾಜಕ್ಕೆ ಘೋಷಿತ ಮೀಸಲಾತಿಯನ್ನು ಜಾರಿಗೆ ತರಬೇಕಷ್ಟೇ ಎಂದರು.

ಜಾತಿ ನಿಂದನೆ ಪ್ರಕರಣ ದಾಖಲಾಗಿರುವ ಹೀಗಾಗಿ ಕೂಡಲೇ ದಲಿತರ ಮೇಲೆ ದೌರ್ಜನ್ಯ ಎಸಗಿದ ಸಚಿವರನ್ನು ರಾಜೀನಾಮೆ ಪಡೆಯಬೇಕು, ಇಲ್ಲವೇ ವಜಾ ಮಾಡಬೇಕು. ಹಿನ್ನೆಲೆಯಲ್ಲಿ ಸಚಿವರಾಗಿ ಸಂವಿಧಾನ ವಿರೋಧಿ ಮನೋಭಾವದಿಂದ ದಲಿತರ ಮೇಲೆ ಜಾತಿ ನಿಂದನೆ ಮಾಡುವ ಮಟ್ಟಕ್ಕೆ ಹೋಗಿದ್ದು, ದಲಿತರ ಮೇಲೆ ಈ ಸರ್ಕಾರಕ್ಕೆ ಇರುವ ಗೌರವ ಏನು ಎಂಬುದನ್ನು ತೋರಿಸುತ್ತದೆ ಎಂದು ಟೀಕಿಸಿದರು.

Advertisement

ದೇಶ ವಿರೋಧಿ ಎಲ್‍ಟಿಟಿಇ ಪರ ಕೆಲಸ ಮಾಡಿದ ಕರುಣಾನಿಧಿ ತಳಿಯೇ ದೇಶದಲ್ಲಿ ಕೆಟ್ಟ ತಳಿ. ಜನರಲ್ಲಿ ವಿಷ ತುಂಬಿಸಿಯೇ ದ್ರಾವಿಡ ಪಕ್ಷದವರು ಧರ್ಮಕ್ಕೂ ನಿಷ್ಟರಲ್ಲ, ದೇಶಕ್ಕೂ ನಿಷ್ಟರಲ್ಲ ಎಂದು ಜರಿದ ಶಾಸಕ ಯತ್ನಾಳ, ಕರ್ನಾಟಕ, ಆಂಧ್ರ ಹಾಗೂ ತಮಿಳುನಾಡಿನಲ್ಲಿ ಪ್ರಕಾಶ ರೈ ಎಂಬ ವ್ಯಕ್ತಿಯೊಬ್ಬ ಅದೇ ರೀತಿ ವರ್ತಿಸುತ್ತಿದ್ದಾನೆ ಎಂದು ಟೀಕಾ ಪ್ರಹಾರ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next