Advertisement

Haryana ಚುನಾವಣೆ ನಾಳೆ ನಡೆದರೂ ನಾವು ಸಿದ್ಧ: ಕಾಂಗ್ರೆಸ್‌ಗೆ ಬಿಜೆಪಿ

01:55 AM Aug 26, 2024 | Team Udayavani |

ಚಂಡೀಗಢ: “ಹರಿಯಾಣದಲ್ಲಿ ನಾಳೆಯೇ ಚುನಾವಣೆ ನಡೆಸಿದರೂ ಅದನ್ನೆದುರಿಸಲು ಬಿಜೆಪಿ ತಯಾರಿದೆ’ ಎಂದು ಬಿಜೆಪಿ ಹಿರಿಯ ನಾಯಕ ಅನಿಲ್‌ ವಿಜ್‌ ರವಿವಾರ ಹೇಳಿದ್ದಾರೆ. ಅ.1ಕ್ಕೆ ನಿಗದಿ ಯಾಗಿರುವ ಚುನಾವಣೆಯನ್ನು ಮುಂದೂಡುವಂತೆ ಬಿಜೆಪಿ ಮನವಿಯನ್ನು ಕಾಂಗ್ರೆಸ್‌ ಟೀಕಿಸಿದ್ದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Advertisement

ಸೆ.28, 29 ಶನಿವಾರ- ರವಿವಾರವಾಗಿದ್ದು, ಜನ ಸೆ.30ಕ್ಕೆ ರಜೆ ಪಡೆದರೆ ಅ.1ರಂದು ಚುನಾವಣೆ ನಿಮಿತ್ತ ರಜೆ ಇರುತ್ತದೆ. ಅ.2 ಗಾಂಧಿ ಜಯಂತಿ. ಹೀಗೆ ಸಾಲು ರಜೆಗಳಿರುವ ಕಾರ ಣ ಮತದಾರರು ಪ್ರವಾಸಕ್ಕೆ ತೆರಳಿದರೆ ಮತ ಪ್ರಮಾಣ ಕಡಿಮೆಯಾಗುತ್ತದೆ ಹಾಗಾಗಿ ದಿನಾಂಕ ಬದಲಿಸ ಬೇಕೆಂದು ಬಿಜೆಪಿ ಮನವಿ ಮಾಡಿತ್ತು. ಬಿಜೆಪಿಗೆ ಸೋಲಿನ ಭಯ ಎಂದು ಕಾಂಗ್ರೆಸ್‌ ವ್ಯಂಗ್ಯ ಮಾಡಿತ್ತು. ಅದಕ್ಕೆ ಬಿಜೆಪಿ ಈಗ ತಿರುಗೇಟು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next