Advertisement

ಮಿತ್ರರಾಷ್ಟ್ರಗಳು ನಮ್ಮನ್ನು ಭಿಕ್ಷುಕರಂತೆ ನೋಡಲಾಗುತ್ತಿದೆ! ಪಾಕ್‌ ಪ್ರಧಾನಿ ಶೆಹಬಾಜ್‌

10:36 AM Sep 17, 2022 | Team Udayavani |

“ನಮ್ಮ ಸ್ಥಿತಿ ಎಲ್ಲಿಗೆ ತಲುಪಿದೆಯೆಂದರೆ, ನಮ್ಮ ಮಿತ್ರರಾಷ್ಟ್ರಗಳು ಕೂಡ ನಮ್ಮನ್ನು ಭಿಕ್ಷುಕರಂತೆ ನೋಡುತ್ತಿವೆ’ ಎಂದು ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್ ಹೇಳಿದ್ದಾರೆ.

Advertisement

ವಕೀಲರ ಸಮ್ಮೇಳನದಲ್ಲಿ ಮಾತನಾಡುತ್ತಾ ದೇಶದ ಹದಗೆಟ್ಟ ಆರ್ಥಿಕ ಸ್ಥಿತಿ ಬಗ್ಗೆ ಪ್ರಸ್ತಾಪಿಸಿದ ಅವರು, ನಾವು ಈಗ ಯಾವುದಾದರೂ ಮಿತ್ರರಾಷ್ಟ್ರದ ಬಳಿ ಹೋದರೆ ಅಥವಾ ಅವರಿಗೆ ಕರೆ ಮಾಡಿದರೆ, ನಾವು ಹಣವನ್ನು ಭಿಕ್ಷೆ ಬೇಡಲು ಬಂದಿದ್ದೇವೆ ಎಂದೇ ಭಾವಿಸುತ್ತಾರೆ.

ಸಣ್ಣಪುಟ್ಟ ಆರ್ಥಿಕತೆಗಳು ಕೂಡ ಪಾಕಿಸ್ತಾನವನ್ನು ಮೀರಿಸಿ ಮುಂದೆ ಹೋಗಿವೆ. ಆದರೆ, ನಾವು ಮಾತ್ರ ಇನ್ನೂ ಭಿಕ್ಷಾಪಾತ್ರೆ ಹಿಡಿದುಕೊಂಡು ಅಲೆದಾಡುತ್ತಿದ್ದೇವೆ ಎಂದೂ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next