Advertisement
ಇತ್ತೀಚೆಗಷ್ಟೇ ಮದುವೆಯಾದ ನೇಹಾಪಾಟೀಲ್, ಕ್ರಮೇಣ ಚಿತ್ರರಂಗಕ್ಕೆ ಗುಡ್‌ಬೈ ಹೇಳುತ್ತಾರೆ ಅಂತಾನೇ ಎಲ್ಲರೂ ಭಾವಿಸಿದ್ದರು. ಆದರೆ, ನೇಹಾಪಾಟೀಲ್ ಮಾತ್ರ, ಮದುವೆ ನಂತರವೂ ನಾನು ಸಿನಿಮಾಗಳಲ್ಲಿ ನಟಿಸಲು ಸಿದ್ಧ ಎಂದು ಸಾರಿದ್ದಾರೆ. ಬಹುತೇಕ ನಟಿಯರು ಮದುವೆ ನಂತರ ಬಣ್ಣದ ಬದುಕಿನಿಂದ ದೂರ ಸರಿಯುವುದು ಸಾಮಾನ್ಯ.
Related Articles
Advertisement
ಆದರೆ, ನಾನೇ ಕೆಲ ಅವಕಾಶಗಳನ್ನು ಕೈ ಬಿಟ್ಟೆ. ಕಾರಣ, ಮದುವೆ ಆಗಿದ್ದರಿಂದ ಸ್ವಲ್ಪ ಬ್ರೇಕ್ ಬೇಕಿತ್ತು. ಹಾಗಾಗಿ ಆಮೇಲೆ ಅವಕಾಶ ಬಂದೇ ಬರುತ್ತವೆ. ಆಗ ನೋಡೋಣ ಅಂದುಕೊಂಡಿದ್ದೆ. ಈಗ ಸಿನಿಮಾ ಅವಕಾಶಗಳು ಬರುತ್ತಿವೆ. ಒಳ್ಳೆಯ ಅವಕಾಶ ಬಂದರೆ ಖಂಡಿತವಾಗಿಯೂ ನಾನು ನಟಿಸುತ್ತೇನೆ. ನಾನು ಈಗಾಗಲೇ ಮರುಸುತ್ತುವ ಪಾತ್ರಗಳನ್ನು ಮಾಡಿದ್ದಾಗಿದೆ. ಪುನಃ ಅದೇ ರೀತಿಯ ಪಾತ್ರಗಳು ನನಗೆ ಇಷ್ಟವಿಲ್ಲ.
ನಾನೀಗ ಚಾಲೆಂಜ್ ಎನಿಸುವ ಪಾತ್ರಗಳನ್ನು ಎದುರು ನೋಡುತ್ತಿದ್ದೇನೆ. ನಿತ್ಯಾಮೆನನ್ ಅವರು ಈ ಹಿಂದೆ “ಮೈನಾ’ ಚಿತ್ರದಲ್ಲಿ ಮಾಡಿದ್ದ ಪಾತ್ರಗಳು ನನಗಿಷ್ಟ. ವಿಕಲಚೇತನ ಪಾತ್ರಗಳಲ್ಲಿ ಮುಗ್ಧತೆ ಇರುತ್ತೆ. ಎಲ್ಲರಿಗೂ ಬಹುಬೇಗ ರೀಚ್ ಆಗುತ್ತೆ. ಅಷ್ಟೇ ಅಲ್ಲ, ಅಲ್ಲಿ ಸಾಕಷ್ಟು ಚಾಲೆಂಜಿಂಗ್ ಅಂಶಗಳೂ ಇರುತ್ತವೆ. ಹಾಗಾಗಿ, ನಾನು ಮುಂದಿನ ದಿನಗಳಲ್ಲಿ ಆ ರೀತಿಯ ಪಾತ್ರ ನಿರೀಕ್ಷಿಸುತ್ತಿದ್ದೇನೆ. ಸದ್ಯಕ್ಕೆ ಅಂತಹ ಕಥೆ, ಪಾತ್ರ ಬಂದಿಲ್ಲ.
ಬಂದರೆ ಖಂಡಿತವಾಗಿಯೂ ಮಾಡ್ತೀನಿ’ ಎನ್ನುತ್ತಾರೆ ನೇಹಾ. ಹಾಗಾದರೆ, ಮನೆಯಲ್ಲಿ ಪ್ರೋತ್ಸಾಹ, ಸಹಕಾರಕ್ಕೇನೂ ಕೊರತೆ ಇಲ್ಲವೆನ್ನಿ? ಈ ಪ್ರಶ್ನೆಗೆ ಉತ್ತರವಾಗುವ ನೇಹಾ, “ಖಂಡಿತವಾಗಿಯೂ ಮನೆಯಲ್ಲಿ ಸಹಕಾರ ಇದೆ. ಮದುವೆ ನಂತರವೂ ನಿನಗೆ ಯಾವಾಗ ಬೇಕಾದರೂ ಸಿನಿಮಾ ಮಾಡು, ನಿನಗೆ ಕಂಫರ್ಟ್ ಎನಿಸಿದರೆ ಬಿಡಬೇಡ ಎಂಬ ಸಪೋರ್ಟ್ ಇದೆ. ಹಾಗಾಗಿ ನಾನೀನ ಸ್ವಲ್ಪ ಡಿಫರೆಂಟ್ ಆಗಿರುವ ಪಾತ್ರಗಳನ್ನು ಎದುರುನೋಡುತ್ತಿದ್ದೇನೆ’ ಎಂದಷ್ಟೇ ಹೇಳುತ್ತಾರೆ ನೇಹಾ.