Advertisement

ವರ್ಷ ಕಳೆದರೂ ಅಧ್ಯಕ್ಷ-ಉಪಾಧ್ಯಕ್ಷರಿಲ್ಲ! ಇದು 55 ನಗರ ಸ್ಥಳೀಯ ಸಂಸ್ಥೆಗಳ ಪಾಡು

09:38 PM Jan 08, 2023 | Team Udayavani |

ಬೆಂಗಳೂರು: ಚುನಾವಣೆ ನಡೆದು ವರ್ಷ ಕಳೆದರೂ ರಾಜ್ಯದ 55 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯೇ ನಡೆದಿಲ್ಲ. ಒಬಿಸಿ ಮೀಸಲಾತಿ ವಿಚಾರದಿಂದಾಗಿ ಈ ಹುದ್ದೆಗಳಿಗೆ ಮೀಸಲಾತಿ ನಿಗದಿ ನನೆಗುದಿಗೆ ಬಿದ್ದಿದೆ. ಇದರಿಂದ ಜನರಿಂದ ಗೆದ್ದು ಬಂದಿದ್ದರೂ ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರ ಭಾಗ್ಯ ಇಲ್ಲವಾಗಿದೆ.

Advertisement

ಈ ನಗರ ಸ್ಥಳೀಯ ಸಂಸ್ಥೆಗಳಿಗೆ 2021ರ ಡಿಸೆಂಬರ್‌ನಲ್ಲಿ ಚುನಾವಣೆ ನಡೆದಿತ್ತು. ಆದರೆ ಇನ್ನೂ ಅಧ್ಯಕ್ಷ-ಉಪಾಧ್ಯಕ್ಷರಿಲ್ಲ. ಮುಖ್ಯವಾಗಿ ಇವುಗಳ ಪೈಕಿ ಅನೇಕ ನಗರ ಸ್ಥಳೀಯ ಸಂಸ್ಥೆಗಳ ಅವಧಿ 2018ರಲ್ಲಿ ಪೂರ್ಣಗೊಂಡಿತ್ತು. ವಾರ್ಡ್‌ ಮೀಸಲಾತಿ ವಿಚಾರ ಹೈಕೋರ್ಟ್‌ ಮೆಟ್ಟಿಲೇರಿದ್ದರಿಂದ ಮತ್ತು ಕೊರೊನಾ ಕಾರಣಕ್ಕೆ ಚುನಾವಣೆ ನಡೆದಿರಲಿಲ್ಲ. ಕೊನೆಗೆ ಹೈಕೋರ್ಟ್‌ ಆದೇಶದ ಬಳಿಕ ಚುನಾವಣೆ ನಡೆಸಲಾಗಿತ್ತು. ಅದರಂತೆ 55 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಅನೇಕ ಕಡೆಗಳಲ್ಲಿ ನಾಲ್ಕೈದು ವರ್ಷಗಳಿಂದ ಚುನಾಯಿತ ಆಡಳಿತ ವ್ಯವಸ್ಥೆ ಇಲ್ಲದಂತಾಗಿದೆ. ಈ ನಡುವೆ ಈಗ ಒಬಿಸಿ ಮೀಸಲಾತಿ ವಿವಾದ ಸುಪ್ರೀಂಕೋರ್ಟ್‌ ಹಾಗೂ ಹೈಕೋರ್ಟ್‌ನಲ್ಲಿ ಬಾಕಿ ಇರುವುದರಿಂದ ಇದು ಇನ್ನಷ್ಟು ವಿಳಂಬವಾಗುವ ಸಾಧ್ಯತೆಯಿದೆ.

ಅಧ್ಯಕ್ಷ-ಉಪಾಧ್ಯಕರು ಇಲ್ಲದ 2 ನಗರಸಭೆ, 18 ಪುರಸಭೆ, 35 ಪಟ್ಟಣ ಪಂಚಾಯತ್‌ಗಳಲ್ಲಿ ಸದ್ಯ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ಚುನಾಯಿತ ಜನಪ್ರತಿನಿಧಿಗಳ ಪಾತ್ರ ಇಲ್ಲವಾಗಿದೆ. ತಮ್ಮ ಪ್ರತಿನಿಧಿಗಳಿಗೆ ಅಧಿಕಾರವಿಲ್ಲದ ಕಾರಣ ಜನಸಾಮಾನ್ಯರು ತಮ್ಮ ಕೆಲಸಗಳಿಗಾಗಿ ಅಧಿಕಾರಿಗಳ ಮುಂದೆ ಅಂಗಲಾಚುವ ಸ್ಥಿತಿ ಬಂದಿದೆ. ಕಾರ್ಯಕ್ರಮ ಮತ್ತು ಯೋಜನೆಗಳ ಅನುಷ್ಠಾನಕ್ಕೆ ಹಿನ್ನಡೆ ಉಂಟಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ವಿವಾದ ನ್ಯಾಯಾಲಯದಲ್ಲಿ ಇರುವುದರಿಂದ ಸರಕಾರವೂ ಕಾದು ನೋಡುವ ಸ್ಥಿತಿಯಲ್ಲಿದೆ.

ಆದದ್ದೇನು?
ಮೀಸ ಲಾತಿ ನಿಗದಿ ಸಂಬಂಧ ಕೆಲವು ರಾಜ್ಯ ಗ ಳಲ್ಲಿ ಕಾನೂನು ಹೋರಾಟ ನಡೆ ಯು ತ್ತಿದೆ. ರಾಜ್ಯ ದಲ್ಲೂ ಇಂಥದ್ದೇ ಸಂದಿ ಗ್ಧತೆ ಉಂಟಾ ಗಿದ್ದು, ನಿಗ ದಿ ಗಾಗಿ ನ್ಯಾ| ಭ ಕ್ತ ವ ತ್ಸಲ ಆಯೋಗ ರಚಿ ಸ ಲಾ ಗಿದ್ದು, ಇದು ವರದಿ ನೀಡಿದೆ. ಈ ವರ ದಿ ಯನ್ನು ಸರಕಾರ ಅನು ಮೋ ದಿ ಸಿದೆ. ಆದರೆ ಹೈಕೋ ರ್ಟ್‌ ನ ಲ್ಲಿಯೂ ಈ ಬಗ್ಗೆ ವಿಚಾ ರಣೆ ನಡೆ ಯು ತ್ತಿದೆ. ಇದರ ನಡು ವೆಯೇ ರಾಜ್ಯದ ಕೆಲವು ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಲಾಗಿದ್ದು, ಅದು ಈ ವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ.

ಕರಾವಳಿ: ಎಲ್ಲೆಲ್ಲಿ ಅಧ್ಯಕ್ಷ-ಉಪಾಧ್ಯಕ್ಷರಿಲ್ಲ:
ಪುರಸಭೆ: ಕಾಪು
ಪಟ್ಟಣ ಪಂಚಾಯತ್‌: ವಿಟ್ಲ, ಕೋಟೆಕಾರು

Advertisement
Advertisement

Udayavani is now on Telegram. Click here to join our channel and stay updated with the latest news.

Next