Advertisement

NDA; ಸಣ್ಣ ಕಂಪನವೂ ಕೇಂದ್ರ ಸರ್ಕಾರವನ್ನೇ ಉರುಳಿಸಬಲ್ಲದು: ರಾಹುಲ್‌

10:29 PM Jun 18, 2024 | Team Udayavani |

ನವದೆಹಲಿ: ಕೇಂದ್ರದಲ್ಲಿ ಸಂಭವಿಸುವ ಒಂದೇ ಒಂದು ಸಣ್ಣ ಕಂಪನ ಕೂಡ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವನ್ನೇ ಉರುಳಿಸಬಹುದು. ಎನ್‌ಡಿಎ ಸರ್ಕಾರ ಹೊಂದಿರುವ ಸಂಖ್ಯೆ ಅಷ್ಟು ದುರ್ಬಲವಾಗಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಾಗ್ಧಾಳಿ ನಡೆಸಿದ್ದಾರೆ.

Advertisement

ಇಂಗ್ಲೆಂಡ್‌ನ‌ ಪತ್ರಿಕೆಯೊಂದಕ್ಕೆ ನೀಡಿದ ನೀಡಿದ ಸಂದರ್ಶನದಲ್ಲಿ ರಾಹುಲ್‌ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಬಳಗದೊಳಗೇ ಭಿನ್ನಮತವಿದೆ. ಎನ್‌ಡಿಎನೊಳಗೇ ನಮ್ಮೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳಿದ್ದಾರೆ. ಮುಖ್ಯವಾಗಿ ಒಂದು ಅಂಗಪಕ್ಷ ಇನ್ನೊಂದು ದಾರಿಗೆ ಹೊರಳಿಕೊಳ್ಳಬಹುದು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಆದರೆ ಯಾವ ಪಕ್ಷ ಎನ್ನುವುದನ್ನು ಖಚಿತವಾಗಿ ಹೇಳಿಲ್ಲ. “ದ್ವೇಷವನ್ನು ಹರಡುವುದು, ಸಿಟ್ಟನ್ನು ಬಿತ್ತುವುದು, ಅದರಿಂದ ಲಾಭ ಪಡೆಯಬಹುದು ಎಂಬ ಉಪಾಯಗಳನ್ನೇ ಈ ಚುನಾವಣೆಯಲ್ಲಿ ಜನ ತಿರಸ್ಕರಿಸಿದ್ದಾರೆ’ ಎಂದು ರಾಹುಲ್‌ ಹೇಳಿದ್ದಾರೆ.ಯಾವ ಪಕ್ಷ ಕಳೆದ 10 ವರ್ಷದಿಂದ ಅಯೋಧ್ಯೆಯ ಬಗ್ಗೆ ಮಾತನಾಡುತ್ತಿತ್ತೋ, ಅಲ್ಲೇ ಜನ ಅದನ್ನು ತಿರಸ್ಕರಿಸಿದ್ದಾರೆ. ಬಿಜೆಪಿಯ ಮೂಲ ವಿನ್ಯಾಸದಲ್ಲೇ ಅಂದರೆ ಧಾರ್ಮಿಕ ದ್ವೇಷ ಹುಟ್ಟಿಸುವ ಉಪಾಯವೇ ಕುಸಿದುಬಿದ್ದಿದೆ ಎಂದು ರಾಹುಲ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next