Advertisement

ಐರೋಪ್ಯರ ಜೀವನ ತಲ್ಲಣ! ಬೇಸಿಗೆ, ಉಷ್ಣಹವೆಯಿಂದ ಜನರು ತತ್ತರ

11:34 PM Aug 01, 2022 | Team Udayavani |

ಲಂಡನ್‌: ಯೂರೋಪ್‌ ರಾಷ್ಟ್ರಗಳಲ್ಲಿ ಬೀಸುತ್ತಿರುವ ಉಷ್ಣಹವೆ ಅತ್ಯಧಿಕವಾಗಿದ್ದು ಅಲ್ಲಿನ ಜನಜೀವನವನ್ನು ತಲ್ಲಣಗೊಳಿಸಿದೆ. ಯೂರೋಪ್‌ ನೆಲ, ಫುಟ್ ಬಾಲ್ , ಕ್ರೀಡೆಗಳ ಆಶ್ರಯದಾಣ. ಅಲ್ಲಿನ ಜನರಿಗೆ, ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರವಾಸ, ಪ್ರಯಾಣ ಮುಂತಾದ ಶೋಕಿಗಳು ಇದ್ದೇ ಇರುತ್ತವೆ. ಆದರೆ, ಇವೆಲ್ಲವೂ ಅಲ್ಲಿ ಮಾಯವಾಗಿವೆ. ಎಲ್ಲರೂ ಸುಡುಬಿಸಿಲು ಹಾಗೂ ಉಷ್ಣ ವಾತಾವರಣಕ್ಕೆ ಹೆದರಿ ಮನೆ ಸೇರಿಕೊಂಡಿದ್ದಾರೆ.

Advertisement

ಬರೀ ಬೇಸಗೆಯಲ್ಲ, ನಿತ್ಯ ನರಕ!
ಯೂರೋಪ್‌ನಲ್ಲಿ ಈಗ ಬೇಸಗೆ ಕಾಲಿಟ್ಟಿದೆ. ಆದರೆ, ಈ ಬಾರಿಯ ಬೇಸಗೆ ಪ್ರತಿವರ್ಷದಂತೆ ಇಲ್ಲ. ಹೆಚ್ಚು ಶುಷ್ಕತೆಯ ಜೊತೆಗೆ ಶಾಖವೂ ಹೆಚ್ಚಾಗಿರುವುದರಿಂದ ಅದು ಬೇಸಗೆವನ್ನು ನರಕವನ್ನಾಗಿಸಿದೆ.

ಮನೆ ಸಾಕು, ಕಚೇರಿ ಬೇಕು!
ಮೊದಲೇ ತಂಪು ವಾತಾವರಣ ಇದ್ದಿದ್ದರಿಂದ ಯೂರೋಪ್‌ನಲ್ಲಿ ಮನೆಗಳಲ್ಲಿ ಸಾಮಾನ್ಯವಾಗಿ ಹವಾ ನಿಯಂತ್ರಣ ವ್ಯವಸ್ಥೆ ಇರುವುದಿಲ್ಲ. ಆದರೆ, ಈಗ ವಾತಾವರಣದ ಉಷ್ಣ ಏರಿಕೆಯಾಗಿರುವುದರಿಂದ ಅಲ್ಲಿ “ವರ್ಕ್‌-ಫ್ರಂ-ಹೋಂ’ನಲ್ಲಿದ್ದ ದುಡಿಯುವ ವರ್ಗ, ಈಗ ಕಚೇರಿಯತ್ತ ಮುಖ ಮಾಡಿದೆ. ಅದಕ್ಕೆ ಕಾರಣ, ಆಫೀಸ್‌ನಲ್ಲಿರುವ ಹವಾ ನಿಯಂತ್ರಿತ ವ್ಯವಸ್ಥೆ!

ಟೈ ಹಾಕ್ಕೋಬೇಡಿ: ಪ್ರಧಾನಿ ಕರೆ
ಸ್ಪೇನ್‌ನ ಪ್ರಧಾನಿ ಪೆಡ್ರೋ ಸ್ಯಾಚೆಝ್ ಅವರು, ಕಚೇರಿಗಳಲ್ಲಿ ಯಾರೂ ಟೈ ಕಟ್ಟಬಾರದು ಎಂದು ಅಲ್ಲಿನ ಎಲ್ಲಾ ಸರ್ಕಾರಿ ಸಿಬ್ಬಂದಿಗೆ ಕರೆಕೊಟ್ಟಿದ್ದಾರೆ. ಸ್ಪೇನ್‌ನಲ್ಲಿ ವಾತಾವರಣದ ಉಷ್ಣ ಅತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ರೀತಿ ಹೇಳಿದ್ದಾರೆ. ನಾನೂ ಸಹ ಟೈ ಕಟ್ಟುವುದಿಲ್ಲ. ಇದರಿಂದ ಕುತ್ತಿಗೆಯ ಭಾಗಕ್ಕೆ ಕೊಂಚ ಗಾಳಿಯಾಡಲು ಅನುಕೂಲವಾಗುತ್ತದೆ. ಆಗ ನಮಗೆ ಕಚೇರಿಗಳಲ್ಲಿ ಹವಾ ನಿಯಂತ್ರಿತ ವ್ಯವಸ್ಥೆ ಬೇಕೇಬೇಕು ಎಂಬುದರ ಸಮಸ್ಯೆಯೇ ಇರುವುದಿಲ್ಲ ಎಂದಿದ್ದಾರೆ.

ಲೋಳೆ ಮೀನುಗಳ ಮಹಾಮೇಳ!
ಇಸ್ರೇಲ್‌ನ ಕರಾವಳಿಯಲ್ಲಿ ಲೋಳೆ ಮೀನುಗಳ ಮಹಾಮೇಳವೇ ಆಯೋಜನೆಗೊಂಡಿದೆ. ಹಿಂದೂ ಮಹಾಸಾಗರದಿಂದ ಇಸ್ರೇಲ್‌ ಕಡೆಗೆ ಪ್ರತಿ ವರ್ಷದ ಮಧ್ಯಭಾಗದಲ್ಲಿ ಸಾಗಿಹೋಗುವ ಇವು ಅಲ್ಲಿ ವಾಸ್ತವ್ಯ ಹೂಡುತ್ತವೆ. ಈ ಬಾರಿ ಹಿಂದೆಂದೂ ಕಾಣದಂಥ ಲೋಳೆ ಮೀನುಗಳ ಸಂಗ್ರಹ ಅಲ್ಲಿ ಕಾಣತೊಡಗಿದೆ. ಇದಕ್ಕೂ ಜಾಗತಿಕ ತಾಪಮಾನ ಹೆಚ್ಚಳ, ಪರಿಸರ ಮಾಲಿನ್ಯವೇ ಕಾರಣ ಎನ್ನಲಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next