Advertisement

ರೋಮ್‌ನಲ್ಲಿ ಕೊಹ್ಲಿ-ಅನುಷ್ಕಾ ಮಧುಚಂದ್ರ

01:05 PM Dec 14, 2017 | Team Udayavani |

ನವದೆಹಲಿ: ಹಸಮಣೆಗೆ ಏರಿ ಸತಿಪತಿಗಳಾದ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಬಾಲಿವುಡ್‌ ನಟಿ ಅನುಷ್ಕಾ ಶರ್ಮ ಈಗ ಮಧುಚಂದ್ರಕ್ಕಾಗಿ ಇಟಲಿಯ ರೋಮ್‌ ನಗರಕ್ಕೆ ತೆರಳಿದ್ದಾರೆ. ಡಿಸೆಂಬರ್‌ 11ರಂದು ಇಟಲಿಯಲ್ಲಿ ಇವರಿಬ್ಬರು ಮದುವೆಯಾಗಿದ್ದರು. ಒಂದು ವಾರದ ಹನಿಮೂನ್‌ ಬಳಿಕ ಇವರಿಬ್ಬರು ಭಾರತಕ್ಕೆ ಆಗಮಿಸಲಿದ್ದಾರೆ. ಇವರ ಕುಟುಂಬ ವರ್ಗದವರು ಈಗಾಗಲೇ ಭಾರತಕ್ಕೆ ಮರಳಿದ್ದಾರೆ ಎನ್ನಲಾಗಿದೆ. ಡಿ.21ರಂದು ದಿಲ್ಲಿಯಲ್ಲಿ ಹಾಗೂ ಡಿ.26ರಂದು ಮುಂಬೈನಲ್ಲಿ ಪಾರ್ಟಿ ನಡೆಯಲಿದೆ. ಇದರಲ್ಲಿ ಹಾಲಿ, ಮಾಜಿ ಕ್ರಿಕೆಟಿಗರು, ಉದ್ಯಮಿಗಳು, ರಾಜಕಾರಣಿಗಳು ಸೇರಿದಂತೆ ಹಲವಾರು ಮಂದಿ ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

Advertisement

ಕೊಹ್ಲಿ ಅನುಷ್ಕಾಗೆ ಕಾಂಡೋಮ್‌ ಕಂಪನಿ ಶುಭಾಶಯ
ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮ ವಿವಾಹಕ್ಕೆ ಹಲವಾರು ಮಂದಿ ಗಣ್ಯರು ಶುಭಾಶಯ ಕೋರಿದ್ದಾರೆ. ಇದರಲ್ಲಿ ವಿಶ್ವದ ವಿವಿಧ ಕ್ರಿಕೆಟಿಗರು, ಮಾಜಿ ಕ್ರಿಕೆಟಿಗರೂ ಕೂಡ ಸೇರಿಕೊಂಡಿದ್ದಾರೆ. ಆದರೆ ಈಗ ಶುಭಾಶಯ ಕೋರಿರುವುದು ಅವರಿವರಲ್ಲ. ಡ್ಯುರೆಕ್ಸ್‌ ಕಾಂಡೋಮ್‌ ಕಂಪನಿ..!, “ಕೊಹ್ಲಿ ಅನುಷ್ಕಾ ನಿಮ್ಮಿಬ್ಬರ ನಡುವೆ ಡ್ಯುರೆಕ್ಸ್‌ ಹೊರತುಪಡಿಸಿ ಮತ್ಯಾರು ಇರದಿರಲಿ’ ಎಂದು ಟ್ವೀಟ್‌ ಮಾಡಿದೆ. ಅಷ್ಟೇ ಅಲ್ಲ ಇದನ್ನು ಫೇಸ್‌ಬುಕ್‌ ತನ್ನ ಅಧಿಕೃತ ಪುಟದಲ್ಲೂ ಪ್ರಕಟಿಸಿದೆ. ಡ್ಯುರೆಕ್ಸ್‌ ಆಲೋಚನೆಯನ್ನು ಕೆಲವರು ಸ್ವಾಗತಿಸಿದ್ದಾರೆ. ಇನ್ನೂ ಕೆಲವರು ಡ್ಯುರೆಕ್ಸ್‌ ಕಂಪನಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಟ್ವೀಟ್‌ ನ್ಯಾಯಸಮ್ಮತವಾಗಿಲ್ಲ. ಅವರೇನು ಮಕ್ಕಳನ್ನು ಪಡೆಯಬಾರಾದಾ? ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ಈ ರೀತಿ ಕಾಮೆಂಟ್‌ ಪ್ರಕಟಿಸಬಹುದಾ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next