ಮಂಗಳೂರು: ಸೈಂಟ್ ಮೇರೀಸ್ ಫೋರೆನ್ಸ್ ಚರ್ಚ್‌ನ ವಾರ್ಷಿಕ ಹಬ್ಬದ ಹಿನ್ನೆಲೆಯಲ್ಲಿ ಜ. 24 ಮತ್ತು 25ರಂದು ಕೇರಳದ ಕೊಟ್ಟಾಯಂ ಜಿಲ್ಲೆಯ ಏಟ್ಟುಮಾನೂರು ರೈಲು ನಿಲ್ದಾಣದಲ್ಲಿ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಗೆ ಅವಕಾಶ ನೀಡಲಾಗಿದೆ.
ನಂ.16630 ಮಂಗಳೂರು ಸೆಂಟ್ರಲ್-ತಿರುವನಂತಪುರ ಸೆಂಟ್ರಲ್ ಮಲಬಾರ್ ಎಕ್ಸ್‌ಪ್ರೆಸ್ ಏಟ್ಟುಮಾನೂರಿಗೆ ಜ. 24 ಮತ್ತು 25ರಂದು ಬೆಳಗ್ಗೆ 4.18ಕ್ಕೆ ಆಗಮಿಸಿ, 4.19ಕ್ಕೆ ತೆರಳಲಿದೆ. ನಂ.16629 ತಿರುವನಂತಪುರ ಸೆಂಟ್ರಲ್- ಮಂಗಳೂರು ಸೆಂಟ್ರಲ್ ಮಲಬಾರ್ ಎಕ್ಸ್‌ಪ್ರೆಸ್ ರಾತ್ರಿ 10.30ಕ್ಕೆ ಆಗಮಿಸಿ 10.31ಕ್ಕೆ ತೆರಳುವುದು. ನಂ. 16347 ತಿರುವನಂತಪುರ ಸೆಂಟ್ರಲ್- ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರಾತ್ರಿ 12.05ಕ್ಕೆ ಆಗಮಿಸಿ 12.06ಕ್ಕೆ ತೆರಳಲಿದೆ ಎಂದು ಪ್ರಕಟನೆ ತಿಳಿಸಿದೆ.