Advertisement

ನೈತಿಕ-ಆಧ್ಯಾತ್ಮಿಕ ವಿಕಸನದ ದ್ಯೋತಕ

04:10 AM May 05, 2019 | mahesh |

ಬೆಳ್ತಂಗಡಿ: ಶ್ರೀ ಧ. ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್‌ (ರಿ.), ಶ್ರೀಕ್ಷೇತ್ರ ಧರ್ಮಸ್ಥಳವು ನೈತಿಕ ಶಿಕ್ಷಣಕ್ಕೆ ಮಹತ್ವ ನೀಡುವಲ್ಲಿ ಹೆಸರುವಾಸಿಯಾಗಿದೆ. 1985ರಲ್ಲಿ ಶಾಂತಿವನ ಟ್ರಸ್ಟ್‌ ಧರ್ಮಸ್ಥಳ ಸ್ಥಾಪನೆಗೊಂಡಿದೆ.

Advertisement

ಕಾರ್ಯಕ್ರಮಗಳು ಮಾದರಿಯಾಗಬೇಕು ಎಂಬುದು ಶಾಂತಿವನ ಟ್ರಸ್ಟ್‌ನ ಅಧ್ಯಕ್ಷ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಕನಸು. ಹೇಮಾವತಿ ವೀ. ಹೆಗ್ಗಡೆಯವರು ಹಾಗೂ ಡಿ. ಹರ್ಷೇಂದ್ರ ಕುಮಾರ್‌ ಟ್ರಸ್ಟಿಗಳಾಗಿರುವ ಈ ವಿಶ್ವಸ್ಥ ಸಮಿತಿಯ ಮಾರ್ಗದರ್ಶನದಲ್ಲಿ ಶಾಂತಿವನ ಟ್ರಸ್ಟ್‌ ಅನ್ನು ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

ಯೋಗ ಮತ್ತು ನೈತಿಕ ಮೌಲ್ಯ ಶಿಕ್ಷಣ ಶಿಕ್ಷ­ಣ­ವನ್ನು ಶಾಲಾ ವಿದ್ಯಾ­ರ್ಥಿ­ಗಳಿಗೆ ದೊರ­ಕಿ­ಸಿ­ಕೊ­ಡುವ ನಿಟ್ಟಿನಲ್ಲಿ 1990ರ­ಲ್ಲಿ ತರಬೇತಿ ಯೋಜನೆ ಆರಂಭಿಸಲಾಯಿತು. ಇದಕ್ಕಾಗಿ 1999ರಿಂದ ಪ್ರತಿ ವರ್ಷ ಅಂಚೆ-ಕುಂಚ ಚಿತ್ರ­ಕಲಾ ಸ್ಪರ್ಧೆ­ಗ­ಳನ್ನು ನಡೆ­ಸ­ಲಾ­ಗು­ತ್ತಿದೆ. ನೀಡಿದ ವಿಷ­ಯದ ಬಗ್ಗೆ ಅಂಚೆ ಕಾರ್ಡ್‌ನಲ್ಲಿ ಚಿತ್ರ ಬಿಡಿಸಿ ಕಳುಹಿ­ಸುವ ಈ ಸ್ಪರ್ಧೆಯು 4 ವಿಭಾ­ಗ­ಗ­ಳಲ್ಲಿ ನಡೆ­ಯು­ತ್ತದೆ. ಈ ವರೆಗೆ ಅಂಚೆಕುಂಚ ಸ್ಪರ್ಧೆಗಳಲ್ಲಿ 2,09,685 ಮಂದಿ ಭಾಗವಹಿಸಿದ್ದಾರೆ.

ಮಕ್ಕ­ಳಿಗೆ ಪ್ರೋತ್ಸಾಹ ನೀಡಲು ಪ್ರಾಥ­ಮಿಕ ವಿಭಾಗ, ಪ್ರೌಢ­ಶಾಲಾ ವಿಭಾಗ ಹಾಗೂ ಕಾಲೇಜು ವಿಭಾಗ, ಸಾರ್ವ­ಜ­ನಿ­ಕ­ರಿ­ಗಾಗಿ ‘ಸಾ­ರ್ವ­ಜ­ನಿಕ ವಿಭಾಗ’ದಲ್ಲಿಯೇ ಪ್ರತ್ಯೇಕ ಸ್ಪರ್ಧೆ­ಯಿದೆ. ಶಾಂತಿವನ ಟ್ರಸ್ಟ್‌ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ನಿರ್ದೇಶಕ ಡಾ| ಐ. ಶಶಿಕಾಂತ ಜೈನ್‌ ಪ್ರತಿ­ವರ್ಷ ಮಕ್ಕಳ ಸಮಗ್ರ ಬೆಳ­ವ­ಣಿ­ಗೆ ದೃಷ್ಟಿ­ಯಿಂದ ಪಂಚ­ಮುಖೀ ವ್ಯಕ್ತಿತ್ವ ಶಿಬಿ­ರ­ವನ್ನು ನಡೆ­ಸಿ­ಕೊಂಡು ಬರ­ಲಾ­ಗು­ತ್ತಿದೆ. ಶಾರೀ­ರಿಕ, ಮಾನ­ಸಿಕ, ಬೌದಿ­್ಧಕ, ಭಾವ­ನಾ­ತ್ಮಕ, ನೈತಿಕ, ಆಧ್ಯಾ­ತ್ಮಿಕ ವಿಕ­ಸ­ನಕ್ಕೆ ಪೂರ­ಕ­ವಾದ ಚಟು­ವ­ಟಿ­ಕೆ­ಗ­ಳನ್ನು ಈ ಕಾರ್ಯ­ಕ್ರ­ಮ­ದಡಿ ನಡೆ­ಸಿ­ಕೊಂಡು ಬರ­ಲಾ­ಗು­ತ್ತಿದೆ.

ಸಾಧನೆಗೆ ಸಂದ ಗೌರವಗಳು
ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಜಿಂದಾಲ್ ರಾಷ್ಟ್ರೀಯ ಪ್ರಶಸ್ತಿ, ಗಿನ್ನೆಸ್‌ ಪುರಸ್ಕಾರ ಸಹಿತ ಹತ್ತು ಹಲವು ಪ್ರಶಸ್ತಿ- ಪುರಸ್ಕಾರಗಳನ್ನು ಸಂಸ್ಥೆ ಮುಡಿಗೇರಿಸಿಕೊಂಡಿದೆ.

Advertisement

ಶ್ರೀ ಧ. ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್‌ ಶ್ರೀಕ್ಷೇತ್ರ ಧರ್ಮಸ್ಥಳ ಇದರ ವತಿಯಿಂದ ಮೇ 5ರಂದು ಬೆಳಗ್ಗೆ 11ಕ್ಕೆ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ 17ನೇ ರಾಜ್ಯಮಟ್ಟದ ಅಂಚೆ – ಕುಂಚ ಸ್ಪರ್ಧೆಯ ವಿಜೇತರಿಗೆ ಪುರಸ್ಕಾರ ಸಮಾರಂಭ ನಡೆಯಲಿದೆ. ಬಳಿಕ ಹಿಂದಿನ ವರ್ಷದಲ್ಲಿ ಪುರಸ್ಕೃತರಾದ ಕುಂಚ ಕಲಾವಿದರ ಚಿತ್ರ ಸಂತೆ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದು, ಖ್ಯಾತ ಚಲನಚಿತ್ರ ಕಲಾವಿದ ಡಾ| ಮುಖ್ಯಮಂತ್ರಿ ಚಂದ್ರು ವಿಜೇತರನ್ನು ಪುರಸ್ಕರಿಸಲಿದ್ದಾರೆ. ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ಗಂಜೀಫ ರಘುಪತಿ ಭಟ್ ಶುಭಾಶಂಸನೆಗೈಯ್ಯಲಿದ್ದಾರೆ.

ವಿಶೇಷ ಆಕರ್ಷಣೆ: ಕುಂಚ-ಗಾನ- ನೃತ್ಯ ವೈಭವ
ಕುಂಚ-ಗಾನ- ನೃತ್ಯ ವೈಭವ ಜರಗಲಿದೆ. ಕುಂಚ: ಶ್ರೀ ಗಂಜೀಫ ರಘುಪತಿ ಭಟ್ ಮತ್ತು ವೇಗದ ಚಿತ್ರಕಲಾವಿದೆ ಶಬರಿ ಗಾಣಿಗ, ಯಕ್ಷ ಗಾಯನ: ಕಾವ್ಯಶ್ರೀ ಅಜೇರು, ಯಕ್ಷ ನೃತ್ಯ: ಯಕ್ಷಕಲಾ ತಂಡ, ಶ್ರೀ ಧ.ಮಂ. ಕಾಲೇಜು, ಉಜಿರೆ ಭಾಗವಹಿಸುವರು.

ಇಂದು ಅಂಚೆ-ಕುಂಚ ಸ್ಪರ್ಧೆ ಪುರಸ್ಕಾರ
ಶ್ರೀ ಧ. ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್‌ ಶ್ರೀಕ್ಷೇತ್ರ ಧರ್ಮಸ್ಥಳ ಇದರ ವತಿಯಿಂದ ಮೇ 5ರಂದು ಬೆಳಗ್ಗೆ 11ಕ್ಕೆ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ 17ನೇ ರಾಜ್ಯಮಟ್ಟದ ಅಂಚೆ – ಕುಂಚ ಸ್ಪರ್ಧೆಯ ವಿಜೇತರಿಗೆ ಪುರಸ್ಕಾರ ಸಮಾರಂಭ ನಡೆಯಲಿದೆ. ಬಳಿಕ ಹಿಂದಿನ ವರ್ಷದಲ್ಲಿ ಪುರಸ್ಕೃತರಾದ ಕುಂಚ ಕಲಾವಿದರ ಚಿತ್ರ ಸಂತೆ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದು, ಖ್ಯಾತ ಚಲನಚಿತ್ರ ಕಲಾವಿದ ಡಾ| ಮುಖ್ಯಮಂತ್ರಿ ಚಂದ್ರು ವಿಜೇತರನ್ನು ಪುರಸ್ಕರಿಸಲಿದ್ದಾರೆ. ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ಗಂಜೀಫ ರಘುಪತಿ ಭಟ್ ಶುಭಾಶಂಸನೆಗೈಯ್ಯಲಿದ್ದಾರೆ. ವಿಶೇಷ ಆಕರ್ಷಣೆ: ಕುಂಚ-ಗಾನ- ನೃತ್ಯ ವೈಭವ ಕುಂಚ-ಗಾನ- ನೃತ್ಯ ವೈಭವ ಜರಗಲಿದೆ. ಕುಂಚ: ಶ್ರೀ ಗಂಜೀಫ ರಘುಪತಿ ಭಟ್ ಮತ್ತು ವೇಗದ ಚಿತ್ರಕಲಾವಿದೆ ಶಬರಿ ಗಾಣಿಗ, ಯಕ್ಷ ಗಾಯನ: ಕಾವ್ಯಶ್ರೀ ಅಜೇರು, ಯಕ್ಷ ನೃತ್ಯ: ಯಕ್ಷಕಲಾ ತಂಡ, ಶ್ರೀ ಧ.ಮಂ. ಕಾಲೇಜು, ಉಜಿರೆ ಭಾಗವಹಿಸುವರು.

Advertisement

Udayavani is now on Telegram. Click here to join our channel and stay updated with the latest news.

Next