Advertisement

ಇಥೆನಾಲ್‌- ಪೆಟ್ರೋಲ್‌ ಮಿಶ್ರಣ ಪ್ರಮಾಣ ಹತ್ತು ಪಟ್ಟು ಹೆಚ್ಚಳ: ಪ್ರಧಾನಿ ಮೋದಿ

09:59 PM Jul 28, 2022 | Team Udayavani |

ಹಿಮ್ಮತ್‌ನಗರ: ಪೆಟ್ರೋಲ್‌ ಜತೆಗೆ ಇಥೆನಾಲ್‌ ಅನ್ನು ಮಿಶ್ರ ಮಾಡುವ ಪ್ರಮಾಣ ಎಂಟು ವರ್ಷಗಳ ಅವಧಿಯಲ್ಲಿ ಹತ್ತು ಪಟ್ಟು ಹೆಚ್ಚಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಉತ್ತರ ಗುಜರಾತ್‌ನ ಸಬರ್‌ಕಾಂತಾ ಜಿಲ್ಲೆಯ ಹಿಮ್ಮತ್‌ನಗರ ಎಂಬಲ್ಲಿ ಗುಜರಾತ್‌ ಸಹಕಾರ ಹಾಲು ಒಕ್ಕೂಟ ನಿಯಮಿತದ ಡೈರಿ ಹಾಗೂ ವಿವಿಧ ಯೋಜನೆಗಳಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದ್ದಾರೆ. 2014ರಲ್ಲಿ 40 ಕೋಟಿ ಲೀಟರ್‌ ಇಥೆನಾಲ್‌ ಮಿಶ್ರಣ ಪ್ರಮಾಣ ಸದ್ಯ 400 ಕೋಟಿ ಲೀಟರ್‌ಗಳಿಗೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.

Advertisement

ಕೇಂದ್ರ ಸರ್ಕಾರ ಕೈಗೊಂಡಿರುವ ಈ ನಿರ್ಧಾರದಿಂದಾಗಿ ರೈತರ ಆದಾಯ ಹೆಚ್ಚಿಸಲೂ ನೆರವಾಗಿದೆ. 2014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ರೈತರ ಆದಾಯ ಹೆಚ್ಚಿಸಲು ಕ್ರಮ ಕೈಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆಗ ಘೋಷಣೆ ಮಾಡಿದ ಕ್ರಮಗಳು ಈಗ ಫ‌ಲಿತಾಂಶ ತೋರಲು ಶುರುವಾಗಿವೆ ಎಂದರು.

ಕೃಷಿ ಜತೆಗೆ ಗೋ ಸಾಕಣೆ, ತೋಟಗಾರಿಕೆ, ಮೀನುಗಾರಿಕೆ, ಜೇನು ಸಾಕಣೆಯೂ ಕೂಡ ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ನೆರವಾಗಿದೆ ಎಂದು ಪ್ರತಿಪಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next