Advertisement

ದಾವಣಗೆರೆ-ಗದಗ ಸೇರಿ ವಿವಿಧೆಡೆ ಕೈಗಾರಿಕೆ ಸ್ಥಾಪನೆ

03:45 PM Jun 10, 2018 | |

ದಾವಣಗೆರೆ: ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ, ಉತ್ತರದ ಗದಗ ಒಳಗೊಂಡಂತೆ
ರಾಜ್ಯದ ವಿವಿಧ ಭಾಗದಲ್ಲಿ ಕೈಗಾರಿಕೆಗಳ ಪ್ರಾರಂಭಕ್ಕೆ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಶ್ರಮಿಸಲಿದೆ
ಎಂದು ಸಂಸ್ಥೆಯ ಚುನಾಯಿತ ಅಧ್ಯಕ್ಷ ಸುಧಾಕರಶೆಟ್ಟಿ ತಿಳಿಸಿದ್ದಾರೆ.

Advertisement

ಶನಿವಾರ ಬಾಪೂಜಿ ಎಂಬಿಎ ಸಭಾಂಗಣದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಯೋಜಿಸಿದ್ದ ಜಿಲ್ಲಾ
ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ರಾಜ್ಯಮಟ್ಟದ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಅವರು
ಮಾತನಾಡಿದರು. ಈ ಹಿಂದೆ ದಾವಣಗೆರೆ ಕರ್ನಾಟಕದ ಮ್ಯಾಂಚೆಸ್ಟರ್‌, ಗದಗ ಮುದ್ರಣ ಕಾಶಿ ಎಂದು
ಖ್ಯಾತವಾಗಿದ್ದವು. ಕಾಲಾನುಕ್ರಮೇಣ ಖ್ಯಾತಿಯೊಂದಿಗೆ ಕೈಗಾರಿಕೆಗಳು ಕಾಣೆಯಾದವು. ದಾವಣಗೆರೆ, ಗದಗ
ಒಳಗೊಂಡಂತೆ ರಾಜ್ಯದ ವಿವಿಧ ಭಾಗದಲ್ಲಿ ಕೈಗಾರಿಕೆಗಳ ಪ್ರಾರಂಭಕ್ಕೆ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಕೆಲಸ
ಮಾಡಲಿದೆ ಎಂದು ತಿಳಿಸಿದರು.

ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕೈಗಾರಿಕಾ ವಲಯ ಪ್ರಾರಂಭಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪೂರಕವಾಗಿ ಸ್ಪಂದಿಸಿದ್ದಾರೆ. ಕೇಂದ್ರ ಸರ್ಕಾರದ ಮುದ್ರಾ, ಸ್ಟಾÂಂಡ್‌ ಅಫ್‌ ಇಂಡಿಯಾ, ಸ್ಮಾರ್ಟ್‌ ಅಫ್‌ ಇಂಡಿಯಾ ಮುಂತಾದ ಯೋಜನೆಗಳು ಹೊರಗೆ ಬಂದಿಲ್ಲ. ತಿಜೋರಿಯಲ್ಲೇ
ಇರುವಂತಹ ಯೋಜನೆಗಳ ಜಾರಿಗೆ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಂತಹ ಬೇರೆ ಸಂಸ್ಥೆಗಳು
ಅಗತ್ಯವಾಗಿವೆ ಎಂದು ಅಭಿಪ್ರಾಯಪಟ್ಟರು.

ನಮ್ಮಲ್ಲಿ ಕೈಗಾರಿಕೆಗಳಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಬ್ಯಾಂಕ್‌ಗಳ ನೀಡುವ
ಸಾಲದ ಬಡ್ಡಿ ದರ ಶೇ. 12 ರಷ್ಟಿದೆ. ಇಂತಹ ವಾತಾವರಣದಲ್ಲಿ ಕೈಗಾರಿಕೆಗಳ ಸ್ಥಾಪನೆ ಮತ್ತು ಅಭಿವೃದ್ಧಿ ಕಷ್ಟವಾಗುತ್ತದೆ. ಚೀನಾದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳ ಜೊತೆಗೆ ಶೇ. 3 ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯದ ಜೊತೆಗೆ ಅತ್ಯಗತ್ಯ ಮೂಲಭೂತ ಸೌಲಭ್ಯಗಳಿದ್ದಲ್ಲಿ ಕೈಗಾರಿಕಾ ಬೆಳವಣಿಗೆ ಸಾಧ್ಯ ಎಂದು ಪ್ರತಿಪಾದಿಸಿದರು.

ಕೈಗಾರಿಕೆಯಲ್ಲಿ ಕೆಲಸ ಮಾಡುವಂತಹ ಕಾರ್ಮಿಕರಿಗೆ ಕೂಲಿ ನಿರ್ಧರಿಸುವಾಗ ಬೆಂಗಳೂರು, ಕಲಬುರುಗಿಯಂತಹ ಪ್ರದೇಶಗಳಿಗೆ ಪ್ರತ್ಯೇಕ ಮಾನದಂಡ ಇರಬೇಕು. ಬೆಂಗಳೂರು ಮತ್ತು ಕಲಬುರುಗಿಯನ್ನ ಒಂದೇ ಎಂದು
ಪರಿಗಣಿಸುವಂತಾಗಬಾರದು. ಆಂಧ್ರಪ್ರದೇಶದಲ್ಲಿ ಆಯಾಯ ಜಿಲ್ಲೆಗೆ ಅನುಗುಣವಾಗಿ ಕನಿಷ್ಠ ಕೂಲಿ ನಿಗದಿ ಮಾಡಲಾಗುತ್ತದೆ. ಅದೇ ಮಾದರಿಯನ್ನ ಕರ್ನಾಟಕದಲ್ಲೂ ಜಾರಿಗೆ ತರಬೇಕಿದೆ ಎಂದು ಆಶಿಸಿದರು.

Advertisement

ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ರವಿ ಮಾತನಾಡಿ, ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ಕೃಷಿಕರ ಬೆಳವಣಿಗೆಗೆ ವೇದಿಕೆ ಒದಗಿಸಲಾಗುತ್ತಿದೆ. ಹೈಟೆಕ್‌ ಅಗ್ರಿ ಸೆಲ್‌ ಪ್ರಾರಂಭಿಸುವ ಮೂಲಕ ರೈತರಿಗೆ ಒಳ್ಳೆಯ ವೇದಿಕೆ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ರೋಬೋಟೆಕ್ಸ್‌, ಕೃತಕ ಬುದ್ಧಿವಂತಿಕೆ, ಅಂತರ್ಜಾಲವನ್ನ ಸಮರ್ಪಕ ಮತ್ತು ಪರಿಣಾಮಕಾರಿಯಾಗಿ ಬಳಕೆ ಚಿಂತನೆ ಇದೆ ಎಂದು ತಿಳಿಸಿದರು.

ದಾವಣಗೆರೆಯ ಲೆಕ್ಕ ಪರಿಶೋಧಕ ಅಥಣಿ ಎಸ್‌. ವೀರಣ್ಣ ಮಾತನಾಡಿ, ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜವಳಿ ಕಾರ್ಮಿಕರ ಕನಿಷ್ಟ ವೇತನ ಹೆಚ್ಚಿಸುವ
ಮಾತುಗಳಾಡಿದ್ದಾರೆ. ಒಂದೊಮ್ಮೆ ಜವಳಿ ಮಿಲ್‌ ಕಾರ್ಮಿಕರ ಕನಿಷ್ಟ ವೇತನ ಹೆಚ್ಚಳ ಮಾಡಿದಲ್ಲಿ ಉದ್ದಿಮೆ ಮೇಲೆ ಏಳದಂತಾಗುತ್ತದೆ. ಈಗಾಗಲೇ ನೋಟು ಅಮಾನ್ಯ, ಜಿಎಸ್‌ಟಿಯಿಂದ ಉದ್ದಿಮೆ ಚೇತರಿಕೊಂಡಿಲ್ಲ, ಕನಿಷ್ಟ ವೇತನ ಇನ್ನಷ್ಟು ಹೊಡೆತ ನೀಡಲಿದೆ ಎಂದರು.

ಮೇಯರ್‌ ಶೋಭಾ ಪಲ್ಲಾಗಟ್ಟೆ, ಸಿ.ಆರ್‌. ಜನಾರ್ದನ್‌, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಜಿಲ್ಲಾ ಅಧ್ಯಕ್ಷ ಮೋತಿ ವೀರಣ್ಣ, ಎ.ಸಿ. ಜಯಣ್ಣ, ಯಶವಂತರಾಜ್‌, ಅಕ್ಕಿ ಮಲ್ಲಿಕಾರ್ಜುನ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next