Advertisement
ಶಿಕ್ಷಕ ಗೆಳೆಯರ ಬಳಗ, ಜಿಲ್ಲಾ ನೌಕರರ ಸಂಘ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ,ಮುಖ್ಯ ಶಿಕ್ಷಕರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಗರದ ಕುಂಬಾರ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ಶಿಕ್ಷಕರ ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕಾರ ನೀಡಿ ಅವರು ಮಾತನಾಡಿದರು.
Related Articles
Advertisement
ಕೇಂದ್ರದ ಮೋದಿ ಸರ್ಕಾರ ಪ್ರತ್ಯೇಕ ಜಲ ಸಚಿವಾಲಯವನ್ನೇ ಸ್ಥಾಪಿಸಿದ್ದು, ಜಲಸಚಿವರ ಮೂಲಕ ಪ್ರತಿಮನೆಗೂ ಶುದ್ದ ಕುಡಿಯುವ ನೀರು ಒದಗಿಸುವ ಸಂಕಲ್ಪ ಮಾಡಿದೆ ಎಂದು ತಿಳಿಸಿದರು.
ಪರಿಸರ ಉಳಿಸೋಣ: ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿನ ಸಮಸ್ಯೆಗಳನ್ನು ಶಿಕ್ಷಕರು ಪಟ್ಟಿ ಮಾಡಿಕೊಡಿ, ಕೈಲಾದಷ್ಟು ಪರಿಹರಿಸುವೆ, ಗ್ರಾಮಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸೋಣ, ಗಿಡ ಮರ ಬೆಳೆಸುವ ಮೂಲಕ ಪರಿಸರ ಉಳಿಸುವ ಕಾಯಕಕ್ಕೆ ಪ್ರತಿ ಯೊಬ್ಬರೂ ಕೈಜೋಡಿಸಬೇಕು, ಶಾಲೆಗಳ ಅಭಿವೃದ್ಧಿಗೆ ಕೈಗಾರಿಕೆಗಳ ಸಿಎಸ್‌ಆರ್ ನಿಧಿ ಬಳಸಲು ಕ್ರಮದ ಭರವಸೆ ನೀಡಿದರು.
ಭವನ ನನೆಗುದಿಗೆ: ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ, ಶಿಕ್ಷಕರ ಭವನ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿದ್ದು, ಹಾಲಿ ಸಂಸದರ ಅವಧಿಯಲ್ಲಿ ಪೂರ್ಣಗೊಳ್ಳಲಿ, ಗೆಳೆಯರ ಬಳಗ ಕೋಲಾರ ಜಿಲ್ಲೆಯ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಅವರೊಂದಿಗೆ ಸದಾ ನಿಲ್ಲುವುದಾಗಿ ತಿಳಿಸಿದರು.
ಕಡಿವಾಣ ಹಾಕಿ: ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್, ಪರಿಸರ ಸಂರಕ್ಷಣೆಯ ಮಹತ್ವದ ಕುರಿತಾದ ತಮ್ಮ ಹಾಡುಗಳೊಂದಿಗೆ ಗಮನ ಸೆಳೆದು, ಖಾಸಗಿ ಶಾಲೆಗಳವರು ಮಕ್ಕಳಿಂದ ಐತಿಹಾಸಿಕ ಹಿನ್ನೆಲೆಯ ಹಾಡು, ನೃತ್ಯ ಮಾಡಿಸಲಿ ಸಂಸ್ಕಾರಕ್ಕೆ ಮಾರಕವಾದ ಕೆಲವು ಚಿತ್ರಗೀತೆಗಳಿಗೆ ಅವಕಾಶ ನೀಡುವ ಮೂಲಕ ಮಕ್ಕಳ ಮನಸ್ಸು ಕಲುಷಿತಗೊಳಿಸುತ್ತಿದ್ದು, ಇದಕ್ಕೆ ಬಿಇಒ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ, ಬಿಆರ್‌ಸಿಯಲ್ಲಿನ ಶೌಚಾಲಯ ಮತ್ತಿತರ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಶಿಕ್ಷಕ ಗೆಳೆಯರ ಬಳಗ ಸಹಕಾರ ನೀಡಿದ್ದರಿಂದ ಶೌಚಾಲಯ ಸುಂದರ, ಸುಸಜ್ಜಿತವಾಗಿದೆ. ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ನೀಡುತ್ತಿರುವ ಸೌಲಭ್ಯಗಳು ಶ್ಲಾಘನೀಯ ಎಂದರು.
ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಕೆ.ಬಿ.ಅಶೋಕ್, ಶಿಕ್ಷಕ ಗೆಳೆಯರ ಬಳಗ ಸರ್ಕಾರಿಶಾಲೆಗಳ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಇದಕ್ಕೆ ಎಲ್ಲರ ಸಹಕಾರದ ಅಗತ್ಯವಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಗೆಳೆಯರ ಬಳಗದ ಕಾರ್ಯದರ್ಶಿ ವೀರಣ್ಣಗೌಡ, ಒಂದು ಕ್ಲಸ್ಟರ್ ಮೂಲಕ ಆರಂಭವಾದ ಕಾರ್ಯ ಇಂದು ಇಡೀ ಜಿಲ್ಲೆಗೆ ವಿಸ್ತರಿಸಿದ್ದು, 1.09 ಲಕ್ಷ ಮಕ್ಕಳಿಗೆ ವಿವಿಧ ಕಂಪನಿಗಳಿಂದ ನೋಟ್ ಪುಸ್ತಕ ವಿತರಿಸಲಾಗಿದೆ, 82 ಶಾಲೆಗಳಿಗೆ ತಲಾ 1.30 ಲಕ್ಷ ಮೌಲ್ಯದ ವಾಟರ್‌ಫಿಲ್ಟರ್, ಶಾಲಾ ಕಟ್ಟಡಗಳ ನಿರ್ಮಾಣ ಮತ್ತಿತರ ಅನೇಕ ಕಾರ್ಯಗಳನ್ನು ಶಿಕ್ಷಕ ಗೆಳೆಯರ ಬಳಗ ಮಾಡಿದೆ ಎಂದರು.
ಸನ್ಮಾನ, ಪ್ರತಿಭಾ ಪುರಸ್ಕಾರ: ಕಾರ್ಯಕ್ರಮದಲ್ಲಿ ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಆರ್.ಶ್ರೀನಿವಾಸನ್, ಜಿ.ಶ್ರೀನಿವಾಸ್ ಮಾತನಾಡಿದರು. ದಾನಿಗಳಾದ ಎಎನ್‌ಆರ್ ಮಂಡಿ ದೇವರಾಜ್, ಮಂಜುನಾಥರೆಡ್ಡಿ,ನಾಗೇಶ್‌ರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ 17 ಮಂದಿ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದ್ದು, ಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿದ್ದು, ಖಜಾಂಚಿ ಚಂದ್ರಪ್ಪ,ವೆಂಕಟಾಚಲಪತಿಗೌಡ, ಬೈರೇಗೌಡ, ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಮುರಳಿಮೋಹನ್, ಸೇವಾದಳದ ಅಪ್ಪಿನಾರಾಯಣಸ್ವಾಮಿ, ಗಾಂಧಿನಗರ ವೆಂಕಟೇಶ್, ಶಿಕ್ಷಕರ ಸಂಘದ ಪ್ರತಿನಿಧಿಗಳಾದ ಎಂ.ಎನ್.ಶ್ರೀನಿವಾಸಮೂರ್ತಿ,ಕೆ.ಟಿ.ನಾಗರಾಜ್, ಅಶ್ವಥ§ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.