Advertisement
2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲೇ ಪೂರ್ವ ಪ್ರಾಥಮಿಕ ಶಾಲಾ ತರಗತಿಗಳನ್ನು ನಡೆಸಲು ಎಲ್ಲ ರೀತಿಯ ಅಗತ್ಯ ಸಿದ್ಧತೆಗಳನ್ನು ಕೈಗೊಂಡು ಆಗಸ್ಟ್ ತಿಂಗಳಿನಿಂದಲೇ ಆರಂಭಿಸುವಂತೆ ಸೂಚಿಸಿದೆ.
ಪೂರ್ವ ಪ್ರಾಥಮಿಕ ಶಾಲೆಗಳನ್ನು ನಡೆಸಲು ಪ್ರಾಥಮಿಕ ಶಾಲೆಗಳಲ್ಲಿ ಒಂದು ಸುಸಜ್ಜಿತ ಕೊಠಡಿ ಸಿದ್ಧಪಡಿಸಿಕೊಳ್ಳಬೇಕು, ಅಗತ್ಯ ಸಾಧನ ಸಾಮಗ್ರಿಗಳನ್ನು ನಿಯಮಾನುಸಾರ ಖರೀದಿಸಬೇಕೆಂದು ಸೂಚಿಸಿರುವ ಸರಕಾರ, ಚಿತ್ರಕಲಾ ಶಿಕ್ಷಕರನ್ನು ಬಳಸಿಕೊಂಡು ಆಕರ್ಷಕವಾಗಿ ಚಿತ್ರಗಳನ್ನು ರಚಿಸುವ ಮೂಲಕ ಪೂರ್ವ ಪ್ರಾಥ ಮಿಕ ತರಗತಿ ನಡೆಸುವ ಕೊಠಡಿಗಳನ್ನು ಸಜ್ಜುಗೊಳಿಸುವಂತೆ ಸೂಚಿಸಿದೆ. ಅಲ್ಲದೆ, ಪೂರ್ವ ಪ್ರಾಥಮಿಕ ಶಾಲೆಗೆ ಅತಿಥಿ ಶಿಕ್ಷಕಿ ಅಥವಾ ಶಿಕ್ಷಕರೊಬ್ಬರನ್ನು ನೇಮಿಸಿಕೊಳ್ಳುವ ಹೊಣೆ ಯನ್ನು ಆಯಾ ಶಾಲೆಗಳ ಶಾಲಾ ಅಭಿವೃದ್ಧಿ ಸಮಿತಿಗೆ ವಹಿಸಲಾಗಿದೆ. ಅತಿಥಿ ಶಿಕ್ಷಕರಿಗೆ ಮಾಸಿಕ 7,500 ರೂ., ಹಾಗೂ ಆಯಾರನ್ನು ನೇಮಿಸಿ ಕೊಳ್ಳಲು 5 ಸಾವಿರ ರೂ. ಸಂಭಾವನೆ ನೀಡಲು ಸರಕಾರ ಸೂಚಿಸಿದೆ. ಪೂರ್ವ ಪ್ರಾಥಮಿಕ ಶಾಲೆಗಳು ಬೆಳಗ್ಗೆ 10ರಿಂದ ಮಧ್ಯಾಹ್ನ 3:30ರ ವರೆಗೆ ಕಾರ್ಯನಿರ್ವಹಿಸಬೇಕು, ಆಗಸ್ಟ್ ಅಂತ್ಯದೊಳಗೆ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಸರಕಾರವೇ ಪಠ್ಯ ಪುಸ್ತಕ, ಬೋಧನಾ ಸಾಮಗ್ರಿ ಗಳನ್ನು ಪೂರೈಸಲಿದೆ. ನೇಮಕಗೊಳ್ಳುವ ಅತಿಥಿ ಶಿಕ್ಷಕರಿಗೆ ಡಯಟ್ ಮೂಲಕ ತರಬೇತಿ ನೀಡ ಲಿರುವ ಇಲಾಖೆ, ಅಂಗನವಾಡಿಗಳಲ್ಲಿ ನೀಡುವ ಹಾಲು, ಊಟ, ಉಪಾಹಾರ ನೀಡುವಂತೆಯೂ ಸೂಚಿಸಿದೆ.
Related Articles
Advertisement