Advertisement

350 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಡೇರಿ ಸಂಘ ಸ್ಥಾಪನೆ

04:16 PM Nov 20, 2022 | Team Udayavani |

ಚನ್ನರಾಯಪಟ್ಟಣ: ತಾಲೂಕಿನ ರೈತರನ್ನು ಸ್ವಾವಲಂಬಿ ಗಳಾಗಿಸುವ ನಿಟ್ಟಿನಲ್ಲಿ ಹೈನುಗಾರಿಕೆಗೆ ಒತ್ತು ನೀಡಿ 350ಕ್ಕೂ ಹೆಚ್ಚು ಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ತೆರೆಯಲಾಗಿದೆ ಎಂದು ಶಾಸಕ ಸಿ.ಎನ್‌. ಬಾಲಕೃಷ್ಣ ತಿಳಿಸಿದರು.

Advertisement

ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಜಿಲ್ಲೆಯ ಸಹಕಾರಿ ಒಕ್ಕೂಟಗಳಿಂದ ನಡೆದ 69ನೇ ಅಖೀಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು, ಕಳೆದ ಆರು ವರ್ಷದಳ ಹಿಂದೆ ಬೆರಳೆಣಿಕೆಯಷ್ಟು ಇದ್ದ ಹಾಲು ಉತ್ಪಾ ದಕರ ಸಹಕಾರ ಸಂಘವನ್ನು ಪ್ರತಿ ಹಳ್ಳಿಯಲ್ಲಿ ತೆರೆಯಲಾಗಿದೆ ಎಂದು ಹೇಳಿದರು.

ಉಳಿದೆಡೆ ಸಂಘ ಸ್ಥಾಪನೆ ಭರವಸೆ: ಕೊರೊನಾ ವೇಳೆ ತಾಲೂಕಿನ ರೈತರು ನೆಮ್ಮದಿಯಾಗಿ ಬದುಕು ನಡೆಸಿದ್ದು ಹೈನುಗಾರಿಕೆಯಿಂದ ತಾಲೂಕಿನಲ್ಲಿ ಪ್ರತಿನಿತ್ಯ ಲಕ್ಷಾಂತರ ಲೀಟರ್‌ ಹಾಲು ಹಾಸನ ಹಾಲು ಒಕ್ಕೂಟಕ್ಕೆ ತಾಲೂಕಿ ನಿಂದ ಸರಬರಾಜು ಮಾಡಲಾಗುತ್ತಿದೆ. ತಾಲೂಕಿನ ಉಳಿದ ಹಳ್ಳಿಯಲ್ಲಿಯೂ ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು.

560 ಕೋಟಿ ರೂ. ಸಾಲಮನ್ನಾ: ಜಿಲ್ಲಾ ಸಹಕಾರ ಬ್ಯಾಂಕ್‌ ವತಿಯಿಂದ ತಾಲೂಕಿನ 42 ಸಾವಿರಕ್ಕೂ ಹೆಚ್ಚು ರೈತರಿಗೆ ಸಾಲ ನೀಡಿದ್ದು, ಸಾಲಮನ್ನ ಯೋಜನೆ ಯಿಂದ 560 ಕೋಟಿ ರೂ. ಸಾಲಮನ್ನಾ ಆಗಿದೆ. ಹೊಸ ಸಾಲವನ್ನು ರೈತರಿಗೆ ನೀಡುವ ಮೂಲಕ ಹೆಚ್ಚು ಅನುಕೂಲ ಮಾಡಲಾಗುತ್ತಿದೆ ಎಂದು ಭರವಸೆ ನೀಡಿದರು.

500 ಕೋಟಿ ರೂ.ವೆಚ್ಚದಲ್ಲಿ ಮೆಗಾ ಡೇರಿ: ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಎಚ್‌.ಡಿ.ರೇವಣ್ಣ ಮಾತನಾಡಿ, ಸರ್ಕಾರ ಹಾಸನ ಜಿಲ್ಲೆ ಅಭಿವೃದ್ಧಿ ಕಡೆಗಣಿಸಿದೆ. ಆದರೂ ಸರ್ಕಾರದಿಂದ ಯಾವುದೇ ನೆರವು ಪಡೆಯದೆ ರೈತರ ಅಭಿವೃದ್ಧಿಗಾಗಿ 500 ಕೋಟಿ ರೂ.ವೆಚ್ಚದಲ್ಲಿ ಮೆಗಾ ಡೇರಿ ಪ್ರಾರಂಭ ಮಾಡಲಾಗುತ್ತಿದೆ. ರಾಜ್ಯದಲ್ಲಿ ಹಾಸನ ಹಾಲು ಒಕ್ಕೂಟ ಮಾದರಿಯಾಗಿ ಮಾಡುವುದು ನನ್ನ ಉದ್ದೇಶವಾಗಿದೆ ಎಂದು ತಿಳಿಸಿದರು.

Advertisement

ಹೈನುಗಾರಿಕೆಗೆ ಉತ್ತೇಜನ: ಹಾಸನದಿಂದ ಅಂಡಮಾನ್‌ಗೆ ಐಸ್‌ಕ್ರೀಂ ಮತ್ತು ಸೇನೆಗೆ ಹಾಲು ಪೂರೈಸುವ ಮೂಲಕ ಹಾಲು ಮತ್ತು ಹಾಲಿನ ಉತ್ಪನ್ನಗಳ ಗುಣ ಮಟ್ಟ ಕಾಯ್ದುಕೊಳ್ಳಲಾಗಿದೆ. ಹಾಲಿನ ಒಕ್ಕೂಟದಿಂದ ರೈತರಿಗೆ ಅನೇಕ ಕೊಡುಗೆ ನೀಡುವ ಮೂಲಕ ಹೈನು ಗಾರಿಕೆ ಯನ್ನು ಉತ್ತೇಜಿಸಲಾಗುತ್ತಿದೆ. ಜಿಲ್ಲೆಯ ರೈತರು ನೆಮ್ಮದಿಯಾಗಿ ಬದುಕುತ್ತಿರುವುದು ಹೈನುಗಾರಿಕೆ ಯಿಂದ ಎನ್ನುವುದು ಸರ್ಕಾರ ಮನಗಾಣಬೇಕು ಎಂದರು.

30 ಕೋಟಿ ಮಂದಿ ಸದಸ್ಯರಾಗಿದ್ದಾರೆ: ಸಹಕಾರ ಸಂಘಗಳ ಉಪ ನಿಬಂಧಕ ಶಂಕರ್‌ ಮಾತನಾಡಿ, ವಿಶ್ವದಲ್ಲಿ ಅತಿ ಹೆಚ್ಚು ಸಹಕಾರ ಸಂಘ ಹೊಂದಿರುವ ದೇಶ ಎಂಬ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಸಹಕಾರ ರಂಗದ ಕೊಡುಗೆ ಶೇ.40ರಷ್ಟು, 8.5 ಲಕ್ಷ ಸಹಕಾರ ಸಂಘಗಳಿಂದ 30 ಕೋಟಿ ಮಂದಿ ಸಹಕಾರ ವ್ಯವಸ್ಥೆ ಸದಸ್ಯರಾಗಿದ್ದಾರೆ. ಇದಕ್ಕೆ ದೇಶದಲ್ಲಿ ಪ್ರತ್ಯೇಕ ಸಚೀವಾಲಯವಿದ್ದು ಕೇಂದ್ರ ಮಂತ್ರಿಯಾಗಿ ಅಮಿತ್‌ ಶಾ ಉತ್ತಮವಾಗಿ ನಿಭಾಯಿಸುತ್ತಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಪುಟ್ಟಸ್ವಾಮಿಗೌಡ, ರಾಜ್ಯ ಮಾರಟ ಮಹಾಮಂಡಳ ನಿರ್ದೇಶಕ ಸಿ.ಎನ್‌.ಪುಟ್ಟಸ್ವಾಮಿಗೌಡ, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ನಾಗರಾಜೇಗೌಡ, ನಿರ್ದೇಶಕ ಸತೀಶ್‌, ಪುರಸಭೆ ಅಧ್ಯಕ್ಷೆ ರಾಧ, ಎಚ್‌ಎಸ್‌ಎಸ್‌ಕೆ ಅಧ್ಯಕ್ಷ ಸಿ.ಎನ್‌.ವೆಂಕಟೇಶ್‌, ಟಿಎಪಿಸಿಎಂಎಸ್‌ ಅಧ್ಯಕ್ಷ ರಮೇಶ್‌, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಖಾಸಗೀಕರಣದಿಂದ ಸಕ್ಕರೆ ಕಾರ್ಖಾ ನೆಗೆ ಲಾಭ ಸಕ್ಕರೆ ಕಾರ್ಖಾನೆ ಖಾಸಗೀಕರಣದಿಂದ ರೈತರನ್ನು, ಕಾರ್ಖಾನೆ ಯನ್ನು ಮತ್ತು ನೌಕರರನ್ನು ಉಳಿಸುವ ಕೆಲಸ ಮಾಡಲಾಗಿದೆ. ಖಾಸಗೀತನದ ವಿರುದ್ಧ ಹೋರಾಟ, ಟೀಕೆಗಳಿಗೆ ಹೆದರಿದ್ದರೇ ಇವತ್ತು ಕಾರ್ಖಾನೆ ಮುಚ್ಚಬೇಕಾಗಿತ್ತು. ಕಾರ್ಖಾನೆ ಲಾಭದಲ್ಲಿ ನಡೆಯುತ್ತಿದ್ದು ಸರ್ಕಾರದ ಸಾಲ ತೀರಿಸಿ, ಜಿಲ್ಲಾ ಸಹಕಾರಿ ಬ್ಯಾಂಕ್‌ನಲ್ಲಿ 25 ಕೋಟಿ ರೂ.ಠೇವಣಿ ಇಡಲಾಗಿದೆ. ಲಾಭದ ಹಣದಲ್ಲಿ ಷೇರುದಾದರಿಗೆ ಪ್ರತಿ ವರ್ಷವೂ ಸಕ್ಕರೆ ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ಬಾಲಕೃಷ್ಣ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next