Advertisement
ಮತ್ಸ್ಯದರ್ಶಿನಿ ಕೇಂದ್ರಗಳು ಈಗಾಗಲೇ ಕೆಲವೆಡೆ ಕಾರ್ಯಾಚರಿಸುತ್ತಿದ್ದು, ಬೆಂಗಳೂರು, ತುಮಕೂರು, ಶಿವಮೊಗ್ಗ, ಕೋಲಾರ, ಬಳ್ಳಾರಿ ಯಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಮುಂದಿನ ದಿನಗಳಲ್ಲಿ ಬೆಳಗಾವಿ, ವಿಜಯಪುರ, ಕಲಬುರಗಿ, ರಾಯಚೂರು, ಶಿವಮೊಗ್ಗ, ಹುಬ್ಬಳ್ಳಿ, ಬೆಂಗಳೂರು, ತುಮಕೂರು, ಮೈಸೂರು, ಮಂಗಳೂರು, ಉಡುಪಿ ಜಿಲ್ಲೆಗಳಿಗೆ ಈ ಕೇಂದ್ರ ವನ್ನು ವಿಸ್ತರಿಸಲು ಇಲಾಖೆ ಸಕಲ ಸಿದ್ಧತೆ ನಡೆಸಿದೆ.
ಮತ್ಸ್ಯದರ್ಶಿನಿ ಕೇಂದ್ರಗಳಲ್ಲಿ ಖಾಸಗಿ ಹೊಟೇಲ್‌ಗಳಿಗಿಂತ ಅರ್ಧದಷ್ಟು ಕಡಿಮೆ ಬೆಲೆಗೆ ಮೀನೂಟ ದೊರೆಯುತ್ತದೆ. ಎಲ್ಲ ಜಿಲ್ಲಾ ಕೇಂದ್ರಗಳಿಗೂ ಮಲ್ಪೆ ಮತ್ತು ಮಂಗಳೂರಿನಿಂದ ಶುಚಿ- ರುಚಿ ಯಾದ ಮೀನು ರವಾನೆಯಾಗುತ್ತದೆ. ತುಮಕೂರಿನ ಹೊಟೇಲೊಂದ ರಲ್ಲಿ ಮೀನೂಟದ ರುಚಿ ಸವಿದ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೆಚ್ಚುಗೆ ವ್ಯಕ್ತ ಪಡಿಸಿದ್ದರು ಹಾಗೂ ಎಲ್ಲ ಕಡೆಗಳಿಗೆ ವಿಸ್ತರಿಸುವ ಚಿಂತನೆ ನಡೆಸಿದ್ದರು. ಮತ್ಸ್ಯ ದರ್ಶಿನಿಯ ಹಲವು ಕೇಂದ್ರಗಳು ರಾಜ್ಯದಲ್ಲಿ ಖಾಸಗಿ ಏಜೆನ್ಸಿಗಳ ಮೂಲಕವೂ ನಡೆಯುತ್ತಿವೆ.ಆದರೆ ಇದೀಗ ಹೊಸದಾಗಿ ಆರಂಭಗೊಳ್ಳಲಿರುವ 11 ಕೇಂದ್ರಗಳ ಸಂಪೂರ್ಣ ನಿರ್ವಹಣೆಯನ್ನು ನೇರವಾಗಿ ಕೆಎಫ್‌ಡಿಸಿಯೇ ನೋಡಿ ಕೊಳ್ಳಲಿದೆ. ಸ್ಥಳ ಗುರುತಿಸುವಂತೆ ಸೂಚನೆ
ಹೊಸದಾಗಿ ಆರಂಭಗೊಳ್ಳಲಿರುವ ಮತ್ಸ್ಯದರ್ಶಿನಿ ಕೇಂದ್ರಗಳಿಗೆ ಸೂಕ್ತ ಸ್ಥಳವನ್ನು ಕಾದಿರಿಸುವಂತೆ ಈಗಾಗಲೇ ಆಯಾಯ ಜಿಲ್ಲಾಧಿಕಾರಿಗಳಿಗೆ ಕೆಎಫ್‌ಡಿಸಿ ಮನವಿ ಮಾಡಿದ್ದು ಹಲವು ಜಿಲ್ಲೆಗಳು ಸ್ಥಳ ಗುರುತಿಸಿ ಕಾದಿರಿಸಿವೆ. ಎಲ್ಲ ಕೇಂದ್ರಗಳಿಗೂ ಕರಾವಳಿಯಿಂದ ಮೀನು ಸರಬ ರಾಜು ಮಾಡಲು ಹೊಸ ಇನ್ಸುಲೇಟರ್ ವಾಹನ ಖರೀದಿಗೂ ಪ್ರಸ್ತಾವನೆ ಸಲ್ಲಿಕೆಯಾಗಿದೆ.
Related Articles
ಮತ್ಸ್ಯದರ್ಶಿನಿ ಕೇಂದ್ರದ ಜತೆಗೆ ಮೊಬೈಲ್ ಕ್ಯಾಂಟೀನ್ ಮಾದರಿಯ 20 ಹೊಸ ಮೊಬೈಲ್ ದರ್ಶಿನಿಗಳು, ಖಾಸಗಿ ಏಜೆನ್ಸಿಗಳಿಗೆ ಹೆಚ್ಚುವರಿ ಮತ್ಸ್ಯದರ್ಶಿನಿ ಕೇಂದ್ರ ಹಾಗೂ ಹೊಸದಾಗಿ 25 ಸಂಚಾರಿ ಮೀನು ಮಾರಾಟ ಮಳಿಗೆ ಸ್ಥಾಪಿಸಲು ಕೆಎಫ್‌ಡಿಸಿ ತಯಾರಿ ನಡೆಸಿದೆ.
Advertisement
ಶೀಘ್ರದಲ್ಲೇ ಆರಂಭರಾಜ್ಯದ ಎಲ್ಲ ಜಿಲ್ಲೆಗಳ ಜನರು ಕಡಿಮೆ ಬೆಲೆಗೆ ಕರಾವಳಿಯ ಶುಚಿ-ರುಚಿಯಾದ ಮೀನಿನ ಊಟ ಸವಿಯಬೇಕು ಎನ್ನುವ ನಿಟ್ಟಿನಲ್ಲಿ 11 ಜಿಲ್ಲೆಗಳಲ್ಲಿ ಮತ್ಸ್ಯದರ್ಶಿನಿ ಕೇಂದ್ರಗಳನ್ನು ತೆರೆಯಲು ಆದೇಶ ನೀಡಲಾಗಿದೆ. ಕೆಎಫ್‌ಡಿಸಿ ಎಲ್ಲ ತಯಾರಿಗಳನ್ನು ನಡೆಸಿದ್ದು ಶೀಘ್ರದಲ್ಲಿ ಈ ಕೇಂದ್ರಗಳು ಆರಂಭಗೊಳ್ಳಲಿವೆ.
– ಕೋಟ ಶ್ರೀನಿವಾಸ ಪೂಜಾರಿ,
ಮೀನುಗಾರಿಕೆ ಸಚಿವರು ಅನುಮೋದನೆಗೆ ಕಾಯಲಾಗುತ್ತದೆ
ಮತ್ಸ್ಯದರ್ಶಿನಿ ಕೇಂದ್ರಕ್ಕೆ ಎಲ್ಲ ತಯಾರಿ ಮುಗಿದಿದೆ. ಹೆಚ್ಚುವರಿ ಅನುದಾನಕ್ಕಾಗಿ ಆರ್‌ಕೆವಿವೈಗೆ ಪ್ರಸ್ತಾವನೆ ಸಲ್ಲಿಸ ಲಾಗಿದ್ದು ಅನುಮೋದನೆಗಾಗಿ ಕಾಯ ಲಾಗು ತ್ತಿದೆ. ಜತೆಗೆ ಹೊಸದಾಗಿ ಮೊಬೈಲ್ ದರ್ಶಿನಿ, ಖಾಸಗಿ ಏಜೆನ್ಸಿಗಳಿಗೆ ಮತ್ಸ್ಯ ದರ್ಶಿನಿ ಕೇಂದ್ರ, ಸಂಚಾರಿ ಮೀನು ಮಾರಾಟ ಮಳಿಗೆ ಮುಂತಾದ ಯೋಜನೆ ಗಳನ್ನು ಜಾರಿ ಗೊಳಿಸುವ ಯೋಜನೆ ಇದೆ.
– ಎಂ.ಎಲ್. ದೊಡ್ಮನೆ,
ಮುಖ್ಯ ವ್ಯವಸ್ಥಾಪಕ ನಿರ್ದೇಶಕರು ಕೆಎಫ್‌ಡಿಸಿ -ರಾಜೇಶ್ ಗಾಣಿಗ ಅಚ್ಲಾಡಿ