Advertisement
ಹಿಂದಿನ ಕಾಲದಲ್ಲಿ ಜನರು ಮನೆಯಲ್ಲಿ ಸುಲಭವಾಗಿ ಸಿಗಬಹುದಾದ ವಸ್ತುಗಳನ್ನು ಉಪಯೋಗಿಸಿ ಚರ್ಮವನ್ನು ಕಾಪಾಡಿಕೊಳ್ಳುತ್ತಿದ್ದರು. ಆದರೆ ಈಗ ಇಂತಹ ಪದಾರ್ಥಗಳ ಉಪಯೋಗ ಹೇಗೆ ಮಾಡಬಹುದೆಂಬುದೇ ಹೆಚ್ಚಿನವರಿಗೆ ಗೊತ್ತಿಲ್ಲ. ಮನೆಯಲ್ಲಿರುವ ವಸ್ತುಗಳನ್ನೇ ಉಪಯೋಗಿಸಿ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ನಾವು ದಿನನಿತ್ಯ ಉಪಯೋಗಿಸುವ ತರಕಾರಿ ಹಾಗೂ ಹಣ್ಣುಗಳ ಬಳಕೆಯಿಂದ ಯಾವುದೇ ರೀತಿಯ ದುಷ್ಟರಿಣಾಮ ಬೀರುವುದಿಲ್ಲ.
Related Articles
Advertisement
ಪಪ್ಪಾಯಿ: ಪಪ್ಪಾಯಿಯ ತಿರುಳನ್ನು ಜೇನಿನೊಂದಿಗೆ ಬೆರಸಿ, ಫೇಸ್ ಪ್ಯಾಕ್ ಮಾಡಿ 15 ನಿಮಷದ ಬಳಿಕ ಮುಖ ತೊಳೆದರೆ ಚರ್ಮ ಮೃದು ಮತ್ತು ಹೊಳಪು ಪಡೆಯುತ್ತದೆ.
– ಪಪ್ಪಾಯಿ ರಸಕ್ಕೆ ನಿಂಬೆರಸ ಹಾಗೂ ಜೇನು ಬೆರಸಿ ಲೇಪಿಸಿದರೆ ಮುಖದ ಕಾಂತಿ ಹೆಚ್ಚುತ್ತದೆ ಅಲ್ಲದೇ ಮೊಡವೆಯೂ ನಿವಾರಣೆಯಾಗುತ್ತದೆ.
ಕಿತ್ತಳೆ ಹಣ್ಣು: ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಮುಖಕ್ಕೆ ತಿಕ್ಕಿದರೆ ಮೊಡವೆ ಕಲೆ ನಿವಾರಣೆ.
– ನಿತ್ಯ ಕಿತ್ತಳೆ ರಸಕ್ಕೆ ಜೇನು ಬೆರಸಿ ಹಚ್ಚಿದರೆ ಚರ್ಮ ಬೆಳ್ಳಗಾಗುತ್ತದೆ.
– ಕಿತ್ತಳೆ ಸಿಪ್ಪೆ ಒಣಗಿಸಿ ಪುಡಿ ಮಾಡಿ ಅದನ್ನು ಸೀಗೆ ಪುಡಿಯೊಂದಿಗೆ ಬೆರೆಸಿ ಕೂದಲು ತೊಳೆಯಲು ಬಳಸಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ.
ಸೇಬು ಹಣ್ಣು: ಸೇಬು ಹಣ್ಣು ಹಾಲು ಮತ್ತು ಜೇನು ಬೆರಸಿ, ಸೇವಿಸಿದರೆ ನಿಯಮಿತ ಸೇವನೆಯಿಂದ ಕಣ್ಣು, ಕೂದಲು ಹಾಗೂ ಚರ್ಮದ ಸೌಂದರ್ಯ ವರ್ಧಿಸುತ್ತದೆ.
ಅನಾನಸ್: ಅನಾನಸ್ ತುಂಡಿನಿಂದ ಹಿಮ್ಮಡಿಯನ್ನು ತಿಕ್ಕಿದರೆ ಒಡಕು ನಿವಾರಣೆಯಾಗಿ ಚರ್ಮ ಮೃದುವಾಗುತ್ತದೆ.
ಮಾವಿನ ಹಣ್ಣು: ಮಾವಿನ ಸಿಪ್ಪೆಯನ್ನು ಮುಖಕ್ಕೆ 5 ನಿಮಿಷ ಮಸಾಜ್ ಮಾಡಿ ಆದ ಮೇಲೆ ಮುಖ ತೊಳೆಯಿರಿ.ಇದರಿಂದ ಚರ್ಮದ ಕಾಂತಿ ಹಾಗೂ ಹೊಳಪು ಹೆಚ್ಚುತ್ತದೆ.
ಹಲಸಿನ ಹಣ್ಣು: ಹಲಸಿನ ಹಣ್ಣನ್ನು ಹಾಲಿನಲ್ಲಿ ಅರೆದು,ಹಾಲಿನ ತೆನೆ ಬೆರಸಿ ಲೇಪಿಸಿದ ಪರಿಣಾಮ ಚರ್ಮ ಮೃದುವಾಗುವುದು.
ಕಲ್ಲಂಗಡಿ ಹಣ್ಣು:ಕಲ್ಲಂಗಡಿ ಹಣ್ಣಿನ ರಸದಿಂದ ಮೊಡವೆಯ ಕಲೆಗಳನ್ನು ತಿಕ್ಕಿದರೆ ಕಲೆಗಳು ನಿವಾರಣೆಯಾಗುವುದು.
ಕಲ್ಲಂಗಡಿ ಹಣ್ಣಿನ ಬೀಜವನ್ನು ಅರೆದು ಹಾಲಿನೊಂದಿಗೆ ಬೆರಸಿ ಮುಖಕ್ಕೆ ಲೇಪಿಸಿದರೆ ಗೌರವರ್ಣ ಹೆಚ್ಚುತ್ತದೆ.
ದ್ರಾಕ್ಷಿ ಹಣ್ಣು: ಒಂದು ಕಪ್ ದ್ರಾಕ್ಷಿ ಹಣ್ಣುಗಳನ್ನು ಚೆನ್ನಾಗಿ ರುಬ್ಬಿ ರಸ ತೆಗೆಯಿರಿ.ಇದಕ್ಕೆ ಗೋಧಿ ಹಿಟ್ಟು ಅಥವಾ ಕಡ್ಲೆಹಿಟ್ಟನ್ನು ಬೆರಸಿ ಮುಖಕ್ಕೆ ಹಚ್ಚಿಕೊಳ್ಳಿ.15 ನಿಮಿಷದ ನಂತರ ಮುಖ ತೊಳೆಯಿರಿ ಇದರಿಂದ ಮುಖದಲ್ಲಿರುವ ಜಿಡ್ಡಿನಂಶ ಕಡಿಮೆಯಾಗುತ್ತದೆ.
ಲಿಂಬೆ ಹಣ್ಣು: ಕೂದಲಿನ ಬುಡಕ್ಕೆ ನಿಂಬೆರಸ ಹಚ್ಚಿದರೆ ತಲೆ ಹೊಟ್ಟು ನಿವಾರಣೆ.
-ನಿಂಬೆ ರಸ, ಜೇನು, ಅರಸಿನ ಪುಡಿ ಬೆರಸಿ ಹಚ್ಚಿದರೆ ಮೊಡವೆ, ಕಲೆ ನಿವಾರಣೆಯಾಗುತ್ತದೆ.
-ಕೊಬ್ಬರಿ ಎಣ್ಣೆಯಲ್ಲಿ ನಿಂಬೆರಸ ಹಾಕಿ ಕುದಿಸಿ ಆ ತೈಲ ನಿತ್ಯ ಕೂದಲಿಗೆ ಲೇಪಿಸಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ.
-ಒಡೆದ ಪಾದಗಳಿಗೆ ನಿಂಬೆ ಸಿಪ್ಪೆ ತಿಕ್ಕಿ 15 ನಿಮಿಷಗಳ ಬಳಿಕ ಕಾಲು ತೊಳೆದರೆ ಒಡಕು ನಿವಾರಣೆಯಾಗುತ್ತದೆ.
– ನಿಂಬೆ ಸಿಪ್ಪೆಯಿಂದ ಮುಖ ತಿಕ್ಕಿ ತೊಳೆದರೆ ಜಿಡ್ಡು ನಿವಾರಣೆಯಾಗಿ ಮುಖ ಮೃದುವಾಗಿ ಹೊಳೆಯುತ್ತದೆ.