Advertisement

ಲೈವ್ ಕಾರ್ಯಕ್ರಮ: ಟಿವಿ ನಿರೂಪಕನ ಮೇಲೆ ಕಳಚಿ ಬಿದ್ದ ಸ್ಟುಡಿಯೋ ಸೆಟ್; ವಿಡಿಯೋ ವೈರಲ್

02:15 PM Mar 12, 2021 | Team Udayavani |

ಕೊಲಂಬಿಯಾ: ಇಲ್ಲಿನ ESPN ಚಾನೆಲ್ ನಲ್ಲಿ ಲೈವ್ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಟಿವಿ ನಿರೂಪಕನ ಮೇಲೆ ಸ್ಟುಡಿಯೋದ ಒಂದು ಭಾಗ ಕಳಚಿ ಬಿದ್ದ ಘಟನೆ ನಡೆದಿದೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಒಂದು ಮಿಲಯನ್ ಗಿಂತಲೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.

Advertisement

ESPN ಚಾನೆಲ್ ನಲ್ಲಿ ಕ್ರಿಕೆಟ್ ಗೆ ಸಂಬಂಧಿಸಿದಂತೆ ಲೈವ್ ಕಾರ್ಯಕ್ರಮ ನಡೆಯುತ್ತಿತ್ತು. ಈ ಸಮಯದಲ್ಲಿ, ಕ್ರೀಡಾ ವಿಶ್ಲೇಷಣೆಯನ್ನು ಮಾಡುತ್ತಿದ್ದ ನಿರೂಪಕನ ಮೇಲೆ ಇದ್ದಕ್ಕಿದ್ದಂತೆ ಸ್ಟುಡಿಯೋದ ಭಾಗವೊಂದು ಕಳಚಿ ಬಿದ್ದಿದೆ. ಪರಿಣಾಮ ಕ್ರೀಡಾ ವಿಶ್ಲೇಷಕನ ಮುಖದ ಹತ್ತಿರದಲ್ಲಿಯೇ ಇದ್ದ ಬೆಂಚ್ ಒಂದಕ್ಕೆ ತಾಗಿದೆ, ಅದೃಷ್ಟವಶಾತ್ ಆತ ಭಾರಿ ಪ್ರಮಾಣದ ಅನಾಹುತದಿಂದ ತಪ್ಪಿಸಿಕೊಂಡಿದ್ದು, ಸಣ್ಣ ಪುಟ್ಟ ಗಾಯಗಳಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಬೆಳ್ತಂಗಡಿ: ಶಿವರಾತ್ರಿಯಂದೇ ರಸ್ತೆ ಬದಿ ಸಾಲು ಸಾಲು ಮರ ಕಡಿದು ವಿಕೃತಿ !

ಘಟನೆ ನಡೆದ ಸಮಯದಲ್ಲಿ ಲೈವ್ ಕಾರ್ಯಕ್ರಮ ನಡೆಯುತ್ತಿದ್ದ ಕಾರಣ ಆ ಕ್ಷಣದಲ್ಲಿಯೇ ನೆರವಿಗೆ ವಿಶ್ಲೇಷಕನ ಬಳಿ ಹೋಗಲು ಸಾಧ್ಯವಾಗಿಲ್ಲ.  ಆದರೆ ತಕ್ಷಣವೇ ಕಾರ್ಯಕ್ರಮ ನಿರೂಪಕರು ಬ್ರೇಕ್ ತೆಗೆದುಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಮೊಟಕುಗೊಳಿಸಿದ್ದಾರೆ. ನಂತರ  ಆ ಕೂಡಲೇ ಕ್ರೀಡಾ ವಿಶ್ಲೇಷಕರಿಗೆ ಚಿಕಿತ್ಸೆಯನ್ನು ನೀಡಲಾಗಿದ್ದು,  ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.

Shocking video. ESPN anchor crushed live on the air by falling set piece. Thankfully he was uninjured. pic.twitter.com/CeFxy8AksY

Advertisement

— Mike Sington (@MikeSington)

ಘಟನೆ ಬಳಿಕ ಪ್ರತಿಕ್ರಿಯೆ ನೀಡಿರುವ ಕ್ರೀಡಾ ವಿಶ್ಲೇಷಕ ನನ್ನ ಮೂಗಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಅದನ್ನು ಹೊರತುಪಡಿಸಿದರೆ ನಾನು ಸುರಕ್ಷಿತವಾಗಿದ್ದೇನೆ. ನನಗೆ ಈ ರೀತಿ ಅಪಘಾತ ಸಂಭವಿಸಿದೆ ಎಂದು ತಿಳಿದ ತಕ್ಷಣ ನನ್ನ ಕುರಿತಾಗಿ ಕಾಳಜಿ ವಹಿಸಿ, ಸಂದೇಶಗಳನ್ನು ಕಳುಹಿಸಿದ ಎಲ್ಲರಿಗೂ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು  ಅವರು ತಮ್ಮ ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next