ಬೆಳಗಾವಿ: ಈಶ್ವರಪ್ಪ ಅವರು ಹಗಲು ಹೊತ್ತಿನಲ್ಲಿ ಮುಸ್ಲಿಮರ ಮತಗಳು ಬೇಡ ಅನ್ನುತ್ತಾರೆ ಆದರೆ ರಾತ್ರಿ ಮುಸ್ಲಿಂ ಮತಗಳನ್ನು ಕೇಳುತ್ತಾರೆ. ಈ ಬಗ್ಗೆ ನೀವೇ ಈಶ್ವರಪ್ಪ ಅವರನ್ನು ಕೇಳಿ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ನೀಡಿದ ಹೇಳಿಕೆಗೆ ತಿರುಗೇಟು ನೀಡಿ, ಇಬ್ರಾಹಿಂ ಸಾಹೇಬ್ರು ಸೋತು ಸುಣ್ಣವಾಗಿದ್ದಾರೆ. ಅದೇ ರೀತಿ ಎಲ್ಲವೂ ವೈರ್ನ್ಫ್ಯೂ ತಿಳಿದುಕೊಂಡಿದ್ದಾರೆ ಎಂದು ವ್ಯಂಗವಾಡಿದರು.
೨೦೧೩ರ ಚುನಾವಣೆಯಲ್ಲಿ ಇಬ್ರಾಹಿಂ ಅವರ ತವರು ಕ್ಷೇತ್ರ ಭದ್ರಾವತಿಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸೋತಿದ್ದಾರೆ. ಸಿದ್ಧರಾಮಯ್ಯ ನಿಯಮ ಉಲ್ಲಂಘಿಸಿ ಹಾಲಿ ಶಾಸಕರಿಗೆ ಟಿಕೆಟ್ ತಪ್ಪಿಸಿ ಇಬ್ರಾಹಿಂಗೆ ಟಿಕೆಟ್ ಕೊಡಿಸಿದ್ದರು. ಆದರೆ ಮೂರನೇ ಸ್ಥಾನಕ್ಕೆ ಕುಸಿದು ಸೋಲು ಕಂಡರು ಎಂದರು.
ಸಿದ್ದರಾಮಯ್ಯಗೆ ಚಾಮರಾಜಪೇಟೆಯಿಂದ ಸ್ಪರ್ಧೆ ಮಾಡಿ ಅಂತ ನಾನೇ ಒತ್ತಡ ಹಾಕುತ್ತಿದ್ದೇನೆ. ಅವರು ಎಂದಿಗೂ ಯಾರನ್ನೂ ಸ್ಪರ್ಧೆ ಮಾಡುವ ಬಗ್ಗೆ ಒತ್ತಡ ಹೇರಿಲ್ಲ. ಸಿದ್ಧರಾಮಯ್ಯ ಸ್ಪರ್ಧೆಗೆ ಎಲ್ಲ ಕಡೆಯಿಂದ ಒತ್ತಡ ಬರುತ್ತಿದೆ. ಹರಿಹರ,ಕೊಲಾರ, ಚಿಕ್ಕಪೇಟೆ ಸೇರಿ ರಾಜ್ಯದ ಎಲ್ಲ ಮೂಲೆಗಳಿಂದ ಸ್ಪರ್ಧಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದರು.
ಇದನ್ನೂ ಓದಿ : ಕಾಂಗ್ರೆಸ್ ಮುಗಿಸಲು ಜಮೀರ್ ಮಾತ್ರವಲ್ಲ ಬಹಳ ಜನಕ್ಕೆ ಸುಪಾರಿ ಕೊಟ್ಟಿದ್ದೇವೆ: ಆರ್.ಅಶೋಕ್