Advertisement

ಯೋಗ್ಯತೆ ಇಲ್ಲದ ಸಿದ್ದರಾಮಯ್ಯ ಬಿಜೆಪಿಗೆ ಸವಾಲ್ ಹಾಕುವ ನೈತಿಕತೆ ಇಲ್ಲ : ಈಶ‍್ವರಪ್ಪ

02:43 PM Jul 23, 2021 | Team Udayavani |

ಚಿತ್ರದುರ್ಗ : ಕಟೀಲ್ ದಲಿತರನ್ನ ಸಿಎಂ ಮಾಡಲಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕೆ ಎಸ್ ಈಶ್ವರಪ್ಪ, ಕರ್ನಾಟಕದಲ್ಲಿ ಕಾಂಗ್ರೆಸ್ ಎಷ್ಟು ಮಂದಿ ದಲಿತರನ್ನ ಸಿಎಂ ಮಾಡಿದ್ದಾರೆ. ಸ್ವತಂತ್ರ ಬಂದು ಇಷ್ಟು ವರ್ಷ ಆಡಳಿತ ನಡೆಸಿದ್ದಾರೆ. ಯೋಗ್ಯತೆ ಇಲ್ಲದ ಸಿದ್ದರಾಮಯ್ಯ ಬಿಜೆಪಿಗೆ ಸವಾಲ್ ಹಾಕುವ ನೈತಿಕತೆ ಇಲ್ಲ ಎಂದು ಗುಡುಗಿದ್ದಾರೆ.

Advertisement

ರಾಜ್ಯದಲ್ಲಿ ಕಾಂಗ್ರೆಸ್ ನವರು ದಲಿತರನ್ನ ಸಿಎಂ ಮಾಡಲು ಆಗಿಲ್ಲ ತುಳಿದಿದ್ದೇವೆ ಎಂದು ಒಪ್ಪಿಕೊಳ್ಳಲಿ ಸಿದ್ದರಾಮಯ್ಯ. ನಾವು ತುಳಿದಿದ್ದೇವೆ, ನೀವು ಉದ್ದಾರ ಮಾಡಿ ಎಂದರೆ ಬೆಲೆ ಇದೆ. ಮುಂದೆಯೂ ನಾನೇ ಸಿಎಂ ಎಂದು ಹೇಳುವ ನಿಮಗೆ ಕಟೀಲ್ ಬಗ್ಗೆ ಮಾತನಾಡುವ ನೈತಿಕತೆ ಏನಿದೆ? ಜನ್ಮದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಅವರು ದಲಿತರನ್ನ ಸಿಎಂ ಮಾಡಲ್ಲ. ಸಿದ್ದರಾಮಯ್ಯ ಬೆಂಬಲಿಗರ ಮೂಲಕ ಸಿಎಂ ಎಂದು ಕೂಗಿಸುತ್ತಾರೆ.

ಒಂದು ಕಡೆ ಡಿಕೆಶಿ ಅಭಿಮಾನಿಗಳ ಮೂಲಕ ಘೋಷಣೆ ಹಾಕಿಸುತ್ತಾರೆ. ಇಂಥವರಿಗೆ ಬಿಜೆಪಿ ಬಗ್ಗೆ ಸವಾಲ್ ಹಾಕಲು ಯೋಗ್ಯತೆ ಇದ್ಯಾ ಇವರು ಅಯೋಗ್ಯರು. ದಲಿತ ರಾಷ್ಟ್ರ ಪತಿ ಮಾಡಿದ್ದು ನಾವು. ದಲಿತರನ್ನ ರಾಷ್ಟ್ರದಲ್ಲಿ ಎಷ್ಟು ಮಂದಿ ನಾವು CM ಮಾಡಿದ್ದೇವೆ. ರಾಜ್ಯದಲ್ಲಿರುವ ರಾಜ್ಯಪಾಲರು ಯಾರು ಅವರು ದಲಿತರು. BJP ರಾಷ್ಟ್ರ ಭಕ್ತಿ ಇರುವವರನ್ನ ಮಾಡುತ್ತೇವೆ, ಜಾತಿ ನೋಡಿಯಲ್ಲ.

ಸಾಮಾಜಿಕ ನ್ಯಾಯ ಎಂದು ಧರ್ಮಸಿಂಗ್ ಅವರನ್ನ ಉದ್ದಾರ ಆಗಲು ಬಿಡಲಿಲ್ಲ. ಡಾ.ಜಿ. ಪರಮೇಶ್ವರ ಅವರನ್ನ ಸಿದ್ದರಾಮಯ್ಯ ಸೋಲಿಸಿದರು. ಈಗ BJP ಅಧ್ಯಕ್ಷರಿಗೆ ಸವಾಲ್ ಹಾಕುವ ನೈತಿಕತೆ ಇಲ್ಲವೇ ಇಲ್ಲ ಬಿಡಿ ಎಂದು ಈಶ್ವರಪ್ಪ ಕಿಡಿ ಕಾಡಿದ್ದಾರೆ.

ಮುಂದೆ ಬಿಜೆಪಿಯಲ್ಲಿ ಯಾರೇ CM ಆದರು ಭ್ರಷ್ಟರೇ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಈಶ್ವರಪ್ಪ, ಭ್ರಷ್ಟರ ಬಾಯಲ್ಲಿ ಎಂಥ ಮಾತು ಬರುತ್ತೆ. ಭ್ರಷ್ಟ ಆಗಿದ್ದ CM ಯಾಕೆ ಸರ್ಕಾರ ಕೆಡವಿಕೊಂಡರು. ಸಿದ್ದರಾಮಯ್ಯ ಯಾಕೆ ಚಾಮುಂಡೇಶ್ವರಿಯಲ್ಲಿ ಸೋತರು. ಕಾಂಗ್ರೆಸ್ ಸರ್ಕಾರ ಯಾಕೆ ರಾಜ್ಯದಲ್ಲಿ ಹೋಯ್ತು. ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದಕ್ಕಾಗಿ ರಾಜ್ಯದಲ್ಲಿ ಕಾಂಗ್ರೆಸ್ ಹೋಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next