Advertisement

ಈಶ್ವರನಗರ ಕೆಸರು ರಸ್ತೆ: ನಿತ್ಯ ಅಪಘಾತ

01:55 AM Jun 21, 2019 | sudhir |

ಉಡುಪಿ: ಚತುಷ್ಪಥ ಕಾಮಗಾರಿ ಪ್ರಗತಿಯಲ್ಲಿರುವ(ಸದ್ಯ ಸ್ಥಗಿತಗೊಂಡಿರುವ) ಉಡುಪಿ-ಪರ್ಕಳ ಹೆದ್ದಾರಿಯ ಮಣಿಪಾಲ ಈಶ್ವರನಗರ ಇಳಿಜಾರಿನಲ್ಲಿ ಭಾರೀ ಕೆಸರು ಹರಡಿಕೊಂಡಿರುವ ಪರಿಣಾಮ ಇಲ್ಲಿ ದಿನನಿತ್ಯವೆಂಬಂತೆ ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗುತ್ತಿವೆ.

Advertisement

ಕಾಮಗಾರಿಗಾಗಿ ರಸ್ತೆಯನ್ನು ಅಗೆಯಲಾಗಿದೆ. ಮಳೆ ನೀರು ಹರಿಯುವ ಚರಂಡಿಯಲ್ಲಿಯೂ ಮಣ್ಣು ತುಂಬಿದೆ. ಇದರಿಂದಾಗಿ ಮಳೆನೀರು ಮತ್ತು ಕೆಸರಿನಿಂದಾಗಿ ರಸ್ತೆ ಭಾರೀ ಅಪಾಯಕಾರಿಯಾಗಿ ಪರಿಣಮಿಸಿದೆ. ಈಶ್ವರನಗರಿಂದ ಪರ್ಕಳ ಕಡೆ ಹೋಗುವಾಗ ಸಿಗುವ ಈ ಇಳಿಜಾರಿನಲ್ಲಿ ವಾಹನಗಳನ್ನು ಎಷ್ಟು ನಿಧಾನಕ್ಕೆ ಓಡಿಸಿದರೂ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಇದು ವಾಹನ ನಿಬಿಢ ರಸ್ತೆ ಮಾತ್ರವಲ್ಲದೆ ಈ ಭಾಗದಲ್ಲಿ ವಾಹನಗಳ ವೇಗವೂ ಹೆಚ್ಚು. ಇದರಿಂದಾಗಿ ಮುಖ್ಯವಾಗಿ ದ್ವಿಚಕ್ರ ವಾಹನ ಚಾಲಕರು ಅಪಾಯಕ್ಕೆ ಸಿಲುಕುತ್ತಿದ್ದಾರೆ.

ವಾರದ ಹಿಂದೆ ಶಾಸಕ ಕೆ.ರಘುಪತಿ ಭಟ್ ಅವರು ಈ ರಸ್ತೆಯ ಹಲವೆಡೆ ಪರಿವೀಕ್ಷಣೆ ನಡೆಸಿ ಮಳೆಗಾಲದ ಹಿನ್ನೆಲೆಯಲ್ಲಿ ಸೂಕ್ತ ತುರ್ತು ಕಾಮಗಾರಿ ನಡೆಸಿ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದರು. ಅನಂತರ ಕೆಲವು ಕಡೆ ಮಾತ್ರ ತುರ್ತು ಕಾಮಗಾರಿ ನಡೆಸಿ ಮಳೆ ನೀರು ಹರಿಯಲು ತಾತ್ಕಾಲಿಕ ಚರಂಡಿ ಮಾಡಿಕೊಡಲಾಗಿದೆ. ಇನ್ನು ಕೆಲವೆಡೆ ಕೆಸರುಮಯ ರಸ್ತೆಗೆ ಜಲ್ಲಿಪುಡಿ ಮಿಶ್ರಿತ ತಾತ್ಕಾಲಿಕ ಕಾಂಕ್ರೀಟ್ ಹಾಕಲಾಗಿದೆ. ಆದರೆ ಈಶ್ವರನಗರದಲ್ಲಿ ಕೆಸರು ರಸ್ತೆ ಹಾಗೆಯೇ ಇದೆ.

Advertisement

Udayavani is now on Telegram. Click here to join our channel and stay updated with the latest news.

Next