Advertisement

15 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದ ಕಾರು ಚಾಲಕನ ಬಂಧನ

07:13 PM Jun 14, 2022 | Team Udayavani |

ಕೊರಟಗೆರೆ: ಬೆಂಗಳೂರು ಮೂಲದ ವ್ಯಕ್ತಿಯೋಬ್ಬರು ಜಮೀನು ಖರೀದಿಸಲೆಂದು ಕಾರಿನಲ್ಲಿ ಇಟ್ಟಿದ್ದ15 ಲಕ್ಷ ಹಣವನ್ನು ಕದ್ದು ಪರಾರಿಯಾಗಿದ್ದ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಕೊರಟಗೆರೆ ಪೋಲೀಸರ ತಂಡ ಯಶಸ್ವಿಯಾಗಿದೆ.

Advertisement

ಬಂಧಿತ ಆರೋಪಿ ಬಿಹಾರ ಮೂಲದ ಡ್ರೈವರ್ ಬಿಪಿನ್ ಎನ್ನುವವನಾಗಿದ್ದಾನೆ

ಬೆಂಗಳೂರು ಮೂಲದ ಸತೀಶ್ ಎನ್ನುವವರು ಕೊರಟಗೆರೆ ಪಟ್ಟಣದ ಊರ್ಡಿಗೆರೆ ಕ್ರಾಸ್ ನ ಬಳಿ ಜಮೀನು ಕೊಳ್ಳಲು ಅಡ್ವಾನ್ಸ್ ನೀಡುವುದಕ್ಕಾಗಿ ತಂದಿದ್ದ 15 ಲಕ್ಷ ರೂ ಹಣದೊಂದಿಗೆ  ಡ್ರೈವರ್ ಬಿಪಿನ್ ಪರಾರಿಯಾಗಿದ್ದ. ಆತನನ್ನು ಕೊರಟಗೆರೆ ಪೊಲೀಸರ ತಂಡ ಸೆರೆ ಹಿಡಿದು ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ.

ಸತೀಶ್ ಅವರು ಹಣ ಇದೆ ಕಾರಿನಲ್ಲಿಯೇ ಕುಳಿತುಕೋ ಎಂದು ಹೇಳಿ ಪರಿಚಯಸ್ಥರ ಜತೆ ಜಮೀನು ನೋಡಲು ಹೋದಂತಹ ಸಂದರ್ಭ ಬಿಪಿನ್ ಕಾರನ್ನು ಅಲ್ಲಿಯೇ ಬಿಟ್ಟು 15 ಲಕ್ಷ ರೂಪಗಳನ್ನು ತೆಗೆದುಕೊಂಡು ಪರಾರಿಯಾಗಿದ್ದ. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್, ಅಡಿಷನಲ್ ಎಸ್ಪಿ ಉದೇಶ್, ಡಿವೈಎಸ್ಪಿ ರಾಮಕೃಷ್ಣಯ್ಯ ಮಾರ್ಗದರ್ಶನದಂತೆ ಸಿಪಿಐ ಸಿದ್ದರಾಮೇಶ್ವರ ಹಾಗೂ ಅವರ ತಂಡ ಮೋಹನ್ ಕುಮಾರ್ ,ಸಿದ್ದಲಿಂಗ ಪ್ರಸನ್ನ, ಸೈಯದ್ ಅರ್ಪತ್ ಅಲಿ, ಗಂಗಾಧರ್, ರಂಗನಾಥ್, ಶಶಿಧರ್ ಆರೋಪಿ ಬಿಪಿನ್ ನನ್ನು ತಮಿಳುನಾಡಿನಲ್ಲಿ ಸೆರೆಹಿಡಿದಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next