ಜಕಾರ್ತ: ಭಾರತದ ಶಟ್ಲರ್ ಎಚ್. ಎಸ್. ಪ್ರಣಯ್ ಇಂಡೋನೇಶ್ಯ ಓಪನ್ ಸೂಪರ್ 1,000 ಬ್ಯಾಡ್ಮಿಂಟನ್ ಕೂಟದ ಸೆಮಿಫೈನಲ್‌ನಲ್ಲಿ ನೇರ ಗೇಮ್‌ನಿಂದ ಸೋತು ನಿರ್ಗಮಿಸಿದ್ದಾರೆ.
Advertisement
ವಿಶ್ವದ 23ನೇ ರ್‍ಯಾಂಕಿನ ಪ್ರಣಯ್ ಚೀನದ ಝಾವೊ ಜುನ್ ಪೆಂಗ್ ಅವರೆದುರು 16-21, 15-21 ಗೇಮ್‌ಗಳಿಂದ ಸೋತರು. ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಅವರಿಬ್ಬರು ಮುಖಾಮುಖಿಯಾಗಿರುವುದು ಇದೇ ಮೊದಲ ಸಲ. ಪೆಂಗ್ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಕಂಚಿನ ಪದಕ ಗೆದ್ದ ಸಾಧಕರಾಗಿದ್ದಾರೆ.
ಮುಂದಿನ ತಿಂಗಳು 30ರ ಹರೆಯಕ್ಕೆ ಕಾಲಿಡಲಿರುವ ಪ್ರಣಯ್ ಇಲ್ಲಿ ಎರಡನೇ ಬಾರಿ ಸೆಮಿಫೈನಲ್‌ನಲ್ಲಿ ಆಡಿದರು.