Advertisement

ಏರ್‌ಪೋರ್ಟ್‌ಗಳಿಗಿನ್ನು ನಗರಗಳ ಹೆಸರು ಮಾತ್ರ!

03:45 AM Feb 10, 2017 | Team Udayavani |

ನವದೆಹಲಿ: ವಿಮಾನ ನಿಲ್ದಾಣಗಳಿಗೆ ಖ್ಯಾತನಾಮರ ಹೆಸರಿಡಬೇಕು ಎಂಬ ಕಿತ್ತಾಟಗಳಿಗೆ ಬ್ರೇಕ್‌ ಬೀಳಬಹುದು. ಇನ್ನು  ದೇಶದಲ್ಲಿ ನಿರ್ಮಾಣವಾಗಿರುವ ಏರ್‌ಪೋರ್ಟ್‌ಗಳ ಮರುನಾಮಕರಣ ಅಥವಾ ನಿರ್ಮಾಣವಾಗಲಿರುವ ವಿಮಾನನಿಲ್ದಾಣಗಳಿಗೆ ಹೆಸರಿಡುವಾಗ ಆಯಾ ನಗರಗಳ ಹೆಸರನ್ನು ಇಡಲಾಗುತ್ತದೆಯೇ ಹೊರತು ವ್ಯಕ್ತಿಗಳ ಹೆಸರನ್ನಲ್ಲ ಎಂದು ನಾಗರಿಕ ವಿಮಾನಯಾನ ಸಹಾಯಕ ಸಚಿವ ಜಯಂತ್‌ ಸಿನ್ಹಾ ಹೇಳಿದ್ದಾರೆ. ಇಂತಹ ಪ್ರಸ್ತಾಪವಿದ್ದು  ಸರ್ಕಾರ ಅದರ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಆದಷ್ಟು ಬೇಗ ಈ ಕುರಿತು ಅಂತಿಮ ನಿರ್ಧಾರ ಹೊರಬೀಳಲಿದೆ ಎಂದು ಸಿನ್ಹಾ ತಿಳಿಸಿದ್ದಾರೆ. ಈ ವಿಚಾರದಲ್ಲಿ ಈಗಾಗಲೇ ಆಂತರಿಕ ಚರ್ಚೆಯನ್ನು ನಡೆಸಲಾಗಿದೆ. ನಗರಗಳ ಹೆಸರನ್ನೇ ಇಡೋಣ ಎಂದು ಹೆಚ್ಚಿನವರು ಅಭಿಪ್ರಾಯಪಟ್ಟಿದ್ದಾರೆ ಎಂದರು. ಭಾರತೀಯ ಗಣ್ಯರು, ಸಾಧಕರ ಹೆಸರುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದೇ ಇರುವಂಥ ವಿದೇಶಿಯರಿಗೆ ನಿಲ್ದಾಣಗಳ ಹೆಸರನ್ನು ಗುರುತಿಸಲು ಕಷ್ಟವಾಗುತ್ತಿದ್ದ ಹಿನ್ನೆಲೆಯಲ್ಲಿ ಇಂತಹ ಪ್ರಸ್ತಾಪ ಸಲ್ಲಿಸಲಾಗಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next