Advertisement

ಪ್ರಿಯಕರನ ಮೇಲೆ ಆ್ಯಸಿಡ್‌ ಎರಚಿದ್ದ ಯುವತಿಗೆ 15 ದಿನ ನ್ಯಾಯಾಂಗ ಬಂಧನ

12:02 PM Jan 21, 2017 | |

ಬೆಂಗಳೂರು: ಪ್ರಿಯಕರನ ಮೇಲೆ ಆ್ಯಸಿಡ್‌ ದಾಳಿ ನಡೆಸಿದ್ದ ಪ್ರಕರಣದ ಆರೋಪಿ ಲಿಡಿಯಾಳನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ಯುವತಿ ಜ.16ರಂದು ಜಯಕುಮಾರ್‌ ಮೇಲೆ ಆ್ಯಸಿಡ್‌ ದಾಳಿ ನಡೆಸಿ, ಬ್ಲೇಡ್‌ನಿಂದ ಮುಖಕ್ಕೆ ಹಲ್ಲೆ ನಡೆಸಿದ್ದಳು.

Advertisement

ಈ ವೇಳೆ ಜಯಕುಮಾರ್‌ ಮತ್ತು ಆತನ ಸ್ನೇಹಿತ ಪದ್ಮನಾಭ ಆಕೆಯನ್ನು ಪೊಲೀಸರಿಗೆ ಒಪ್ಪಿಸಿದ್ದರು. ಆಕೆಯ ವಿರುದ್ಧ ಪ್ರಕರಣ ದಾಖಲಿಸಿದ್ದ ವಿಜಯನಗರ ಪೊಲೀಸರು, ಆರೋಪಿಯನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ 3 ದಿನಗಳ ಕಾಲ ವಶಕ್ಕೆ ಪಡೆದಿದ್ದರು.

ಕಸ್ಟಡಿ ಅವಧಿ ಶುಕ್ರವಾರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಆಕೆಯನ್ನು ನ್ಯಾಯಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ. ಇನ್ನು ಪ್ರಿಯಕರನ ಮೇಲೆ ಉದ್ದೇಶ ಪೂರ್ವಕವಾಗಿ ಆ್ಯಸಿಡ್‌ ಹಾಕಲು ಯತ್ನಿಸಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಲಿಡಿಯಾ ಮತ್ತು ಜಯಕುಮಾರ್‌ ಸುಮಾರು 8 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆರು ತಿಂಗಳ ಹಿಂದೆ ಮದುವೆಯಾಗುವಂತೆ ಆತನನ್ನು ಕೇಳಿದಾಗ ಆತನ ನಿರಾಕರಿಸಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಈ ದ್ವೇಷದಿಂದ ಲಿಡಿಯಾ, ಪ್ರಿಯಕರ ಜಯಕುಮಾರ್‌ ಮೇಲೆ ಜ.16ರಂದು ಆ್ಯಸಿಡ್‌ ದಾಳಿ ನಡೆಸಿದ್ದಳು.

Advertisement

Udayavani is now on Telegram. Click here to join our channel and stay updated with the latest news.

Next