Advertisement

ಹಿಂಸಾಚಾರ ನಡೆಸಲು ಡೇರಾದಿಂದ 5 ಕೋಟಿ ರೂಪಾಯಿ ಸಂದಾಯವಾಗಿತ್ತಂತೆ!

03:58 PM Sep 07, 2017 | Sharanya Alva |

ಪಂಚಕುಲಾ: ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಬಾಬಾ ರಾಮ್ ರಹೀಂ ಗುರ್ಮಿತ್ ಸಿಂಗ್ ದೋಷಿ ಎಂದು ಪಂಚಕುಲಾದ ಸಿಬಿಐ ವಿಶೇಷ ಸಿಬಿಐ ನ್ಯಾಯಾಲಯ ತೀರ್ಪು ಪ್ರಕಟಿಸುವ ಮೊದಲೇ ಹಿಂಸಾಚಾರ ನಡೆಸಲು ಡೇರಾ ಸಚ್ಚಾ ಸೌದಾ 5 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಲಾಗಿತ್ತು ಎಂಬ ವಿಷಯ ಬಯಲಾಗಿದೆ.

Advertisement

ಎಸ್ ಐಟಿ (ವಿಶೇಷ ತನಿಖಾ ತಂಡ) ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಡೇರಾ ಸಚ್ಚಾ ಸೌದಾದ ಸದಸ್ಯರಾದ ಆದಿತ್ಯಾ ಇನ್ಸಾನ್, ಹನಿಪ್ರೀತ್ ಇನ್ಸಾನ್ ಹಾಗೂ ಸುರೀಂದರ್ ಧಿಮನ್ ಇನ್ಸಾನ್ ಅವರನ್ನು ವಿಚಾರಣೆಗೊಳಪಡಿಸಿದಾಗ ಈ ಸ್ಫೋಟಕ ಮಾಹಿತಿ ಹೊರಬಂದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಡೇರಾ ಮ್ಯಾನೇಜ್ ಮೆಂಟ್ ನಿಂದ ಪಂಚಕುಲಾ ಡೇರಾ ಶಾಖೆಯ ಮುಖ್ಯಸ್ಥ ಚಮ್ ಕೌರ್ ಸಿಂಗ್ ಹಣವನ್ನು ಪಡೆದಿದ್ದು, ತೀರ್ಪು ಬರುವ ಮುನ್ನ ಹಿಂಸಾಚಾರ, ದೊಂಬಿ ಎಬ್ಬಿಸುವ ಹೊಣೆಗಾರಿಕೆ ಹೊತ್ತಿರುವುದಾಗಿ ಎಸ್ಐಟಿ ತನಿಖಾಧಿಕಾರಿಗಳ ಮುಂದೆ ತಿಳಿಸಿರುವುದಾಗಿ ವರದಿ ಹೇಳಿದೆ.

ಆಗಸ್ಟ್ 28ರಂದು ಹೈಕೋರ್ಟ್ ಆದೇಶದ ಮೇರೆಗೆ ಚಮ್ ಕೌರ್ ಸಿಂಗ್ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸುವಂತೆ ನಿರ್ದೇಶನ ನೀಡಿದ ನಂತರ ಮೋಹಾಲಿ ನಿವಾಸಿ ಚಮ್ ಕೌರ್ ತನ್ನ ಕುಟುಂಬ ಸಮೇತ ನಾಪತ್ತೆಯಾಗಿದ್ದಾನೆ ಎಂದು ವರದಿ ವಿವರಿಸಿದೆ.

ಅಜ್ಞಾತ ಸ್ಥಳದಲ್ಲಿದ್ದ ಚಮ್ ಕೌರ್ ಹಣವನ್ನು ಪಡೆದು ಗುರ್ಮೀತ್ ದೋಷಿ ಎಂದು ತೀರ್ಪು ಹೊರಬಿದ್ದ ಕೂಡಲೇ ಹಿಂಸಾಚಾರ ನಡೆಸುವಂತೆ ಪಂಜಾಬ್ ನ ವಿವಿಧೆಡೆ ಹಣವನ್ನು ಕಳುಹಿಸಿ ಕೊಟ್ಟಿದ್ದ. ಒಂದು ವೇಳೆ ಹಿಂಸಾಚಾರದಲ್ಲಿ ಯಾರು ಸಾವನ್ನಪ್ಪುತ್ತಾರೆ ಆ ಕುಟುಂಬದವರಿಗೆ ಪರಿಹಾರ ಕೊಡುವುದಾಗಿಯೂ ಭರವಸೆ ನೀಡಿರುವುದಾಗಿ ಡೇರಾ ಭಕ್ತರು ಕೂಡಾ ಹೇಳಿಕೆ ನೀಡಿರುವುದಾಗಿ ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next