Advertisement

ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿ, ಶಿಕ್ಷಕ, ಸಂಸ್ಥೆಗಳ ಸಮಾನ ಜವಾಬ್ದಾರಿ: ಪ್ರೊ|ರಂಗಪ್ಪ

12:34 AM May 31, 2022 | Team Udayavani |

ಉಳ್ಳಾಲ: ಶಿಕ್ಷಣದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಂಸ್ಥೆಗಳ ನಡುವಿನ ವಿಚಾರ ವಿನಿಮಯವಾಗಬೇಕು. ಉನ್ನತ ಶಿಕ್ಷಣದಲ್ಲಿ ಈ ಮೂರೂ ವಿಭಾಗಗಳಿಗೂ ಸಮಾನ ಜವಾಬ್ದಾರಿಯಿದೆ. ಇದನ್ನು ನಾವು ಸ್ವೀಕರಿಸಬೇಕಷ್ಟೇ, ಎಂದು ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ವಿಶ್ರಾಂತ ಉಪಕುಲಪತಿಗಳ ವೇದಿಕೆ (ಎಫ್‌ವಿಸಿಕೆ) ಅಧ್ಯಕ್ಷ ಮತ್ತು ಮೈಸೂರು ವಿ.ವಿ.ಯ ಮಾಜಿ ಕುಲಪತಿ ಪ್ರೊ| ಕೆ.ಎಸ್‌. ರಂಗಪ್ಪ ಹೇಳಿದರು.

Advertisement

ಮಂಗಳೂರು ವಿ.ವಿ., ಎಫ್‌ವಿಸಿಕೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ “ಉನ್ನತ ಶಿಕ್ಷಣ ಮತ್ತು ವಿಶ್ವವಿದ್ಯಾನಿಲಯಗಳ ಆಡಳಿತದ ಸುಧಾರಣೆಗೆ ಕಾರ್ಯತಂತ್ರಗಳು’ ಎಂಬ ಒಂದು ದಿನದ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿ.ವಿ.ಗಳಲ್ಲಿ ಖಾಲಿ ಇರುವ ಪ್ರಾಧ್ಯಾಪಕರ ಹುದ್ದೆಗಳನ್ನು ಸರಕಾರ ಕೂಡಲೇ ಭರ್ತಿ ಮಾಡಬೇಕು. ಹಳೆಯ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಬೇಕು. ಆಡಳಿತ ಮಂಡಳಿ (ಬಿಒಜಿ) ವಿಶ್ವವಿದ್ಯಾನಿಲಯಗಳ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೇ ಹೊರತು, ರಾಜಕಾರಣಿಗಳಲ್ಲ, ಎಂದು ಅವರು ಹೇಳಿದರು.

ಎಫ್‌ವಿಸಿಕೆೆ ಕಾರ್ಯನಿರ್ವಾಹಕ ಉಪಾಧ್ಯಕ್ಷ ಹಾಗೂ ಮಾಹೆಯ ಮಾಜಿ ಉಪಕುಲಪತಿ ಡಾ| ವಿನೋದ್‌ ಭಟ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಂಸ್ಥೆಯೊಂದರ ಸುಧಾರಣೆಗೆ ನ್ಯಾಕ್‌ ಮಾನ್ಯತೆ ಕಡ್ಡಾಯಗೊಳಿಸಬೇಕು. ಇದು ಅಸ್ತಿತ್ವದ ಪ್ರಶ್ನೆಯಾಗಬೇಕು. ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಪ್ರತಿಯೊಬ್ಬ ಸಿಬಂದಿಯ ಕೊಡುಗೆಯ ಅಗತ್ಯವಿದೆ ಎಂದರು.ಮಂಗಳೂರು ವಿ.ವಿ. ಉಪಕುಲಪತಿ ಪ್ರೊ| ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು.

ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿ.ವಿ.ಯ ಉಪಕುಲಪತಿ ಮತ್ತು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಅಭಿವೃದ್ಧಿ ರಾಷ್ಟ್ರೀಯ ಚಾಲನ ಸಮಿತಿಯ ಸದಸ್ಯ ಡಾ| ಟಿ.ವಿ. ಕಟ್ಟಿಮನಿ, ಹಣಕಾಸು ಅಧಿಕಾರಿ ಪ್ರೊ| ಕೆ.ಎಸ್‌.ಜಯಪ್ಪ, ಸಂಚಾಲಕ ಪ್ರೊ| ಜಯರಾಜ್‌ ಅಮೀನ್‌, ವಿ.ವಿ.ಗಳ ಮಾಜಿ ಕುಲಪತಿಗಳು, ಪ್ರಾಧ್ಯಾಪಕರು, ಮಂಗಳೂರು ವಿ.ವಿ.ಯ ಸಂಯೋಜಿತ ಕಾಲೇಜುಗಳ ಪ್ರಾಂಶುಪಾಲರು ಮತ್ತು ಐಕ್ಯೂಎಸಿ ಸಂಯೋಜಕರು ಮತ್ತು ಸದಸ್ಯರು ಉಪಸ್ಥಿತರಿದ್ದರು. ಕುಲಸಚಿವ ಪ್ರೊ| ಕಿಶೋರ್‌ ಕುಮಾರ್‌ ಸಿ ಕೆ ಸ್ವಾಗತಿಸಿದರು. ಕುಲಸಚಿವ (ಮೌಲ್ಯಮಾಪನ) ಪ್ರೊ| ಪಿ.ಎಲ್‌.ಧರ್ಮ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next