Advertisement
ದೇಶಾದ್ಯಂತ ಕಾರ್ಯಾಚರಣೆಇಪಿಎಫ್ಒನ ಎಲ್ಲ 138 ಪ್ರಾದೇಶಿಕ ಕಚೇರಿಗಳು ಈಗ ತಮ್ಮದೇ ಆದ ವಾಟ್ಸ್‌ಆ್ಯಪ್ ಸಹಾಯವಾಣಿ ಸಂಖ್ಯೆಯನ್ನು ಹೊಂದಿವೆ. ಎಲ್ಲ ಪ್ರಾದೇಶಿಕ ಕಚೇರಿಗಳ ಮೀಸಲಾದ ಸಹಾಯವಾಣಿ ಸಂಖ್ಯೆಗಳ ಪಟ್ಟಿಯನ್ನು ಪಡೆಯಲು, ಇಪಿಎಫ್ಒ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: https://www.epfindia.gov.in/site‰docs/PDFs/Downloads‰PDFs/WhatsApp‰Helpline.pdfa
ಪಿಎಫ್ ಖಾತೆಯನ್ನು ನಿರ್ವಹಿಸುವ ಸಂಬಂಧಪಟ್ಟ ಪ್ರಾದೇಶಿಕ ಕಚೇರಿಯ ಸಹಾಯವಾಣಿ ಸಂಖ್ಯೆಗೆ ವಾಟ್ಸ್‌ಆ್ಯಪ್ ಸಂದೇಶವನ್ನು ಕಳುಹಿಸುವ ಮೂಲಕ ಯಾವುದೇ ಚಂದಾದಾರರು ಇಪಿಎಫ್ಒ ಒದಗಿಸುವ ಸೇವೆಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗಳನ್ನು ಕೇಳಬಹುದು. ಜತೆಗೆ ಮಾರ್ಗ ದರ್ಶನವನ್ನು ಪಡೆಯಬಹುದು. ಚಂದಾದಾರರ ಕುಂದು ಕೊರತೆಗಳಿಗೆ ತ್ವರಿತ ಪರಿಹಾರವನ್ನು ಒದಗಿಸಿಕೊಡಲು ಮತ್ತು ವಾಟ್ಸ್ ಆ್ಯಪ್‌ನಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಲು ಪ್ರತೀ ಪ್ರಾದೇಶಿಕ ಕಚೇರಿಯಲ್ಲೂ ಇದಕ್ಕೆಂದೇ ತಜ್ಞರ ತಂಡವನ್ನು ನೇಮಿಸಲಾಗಿದೆ. ಇತರ ವ್ಯವಸ್ಥೆಗಳು
ವಾಟ್ಸ್‌ಆ್ಯಪ್ ಸೌಲಭ್ಯದ ಹೊರತಾಗಿ ಇಪಿಎಫ್ಒನ ಕುಂದುಕೊರತೆ ಪರಿಹಾರ ವೇದಿಕೆಗಳಲ್ಲಿ ವೆಬ್ ಆಧಾರಿತ ಇಪಿಎಫ್ಐಜಿಎಂಎಸ್ ಪೋರ್ಟಲ್ (EPFiGMS), ಸಿಪಿಜಿಆರ್‌ಎಎಂಎಸ್(CPGRAMS), ಸೋಷಿಯಲ್ ಮೀಡಿಯಾ (ಫೇಸ್‌ಬುಕ್ ಮತ್ತು ಟ್ವಿಟರ್) ಮತ್ತು ಮೀಸಲಾದ 24/7 ಕಾಲ್ ಸೆಂಟರ್‌ಗಳನ್ನು ಸಂಪರ್ಕಿಸಬಹುದಾಗಿದೆ.
Related Articles
ವಾಟ್ಸ್ ಆ್ಯಪ್‌ನಲ್ಲಿ ಪ್ರಶ್ನೆಯನ್ನು ಕೇಳುವ ಸಂದರ್ಭದಲ್ಲಿ ಚಂದಾದಾರರು ತಮ್ಮ ಯುನಿವರ್ಸಲ್ ಖಾತೆ ಸಂಖ್ಯೆ (ಯುಎಎನ್)ಅನ್ನು ನಮೂದಿಸುವುದು ಕಡ್ಡಾಯವಾಗಿದೆ.
Advertisement