ಹೊಸದಿಲ್ಲಿ: 2021- 22ನೇ ವಿತ್ತ ವರ್ಷಕ್ಕೆ ಸಂಬಂಧಿಸಿ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಬಡ್ಡಿದರವನ್ನು ಶೇ.8.1 ಎಂದು ನಿಗದಿಪಡಿಸಲು ಕೇಂದ್ರ ಸರಕಾರ ಒಪ್ಪಿದೆ.
ಗಮನಾರ್ಹ ಅಂಶ ವೆಂದರೆ ನಾಲ್ಕು ದಶಕಗಳಿಗೆ ಹೋಲಿಕೆ ಮಾಡಿದರೆ ಇಪಿಎಫ್ ಗೆ ವಿಧಿಸ ಲಾಗುತ್ತಿರುವ ಕನಿಷ್ಠ ಬಡ್ಡಿ ದರ ಇದಾಗಿದೆ. ಪ್ರಸಕ್ತ ವರ್ಷದ ಮಾರ್ಚ್ ನಲ್ಲಿ ನಡೆದಿದ್ದ ಭವಿಷ್ಯ ನಿಧಿ ಮಂಡಳಿ ಟ್ರಸ್ಟಿ ಸಭೆಯಲ್ಲಿ ಬಡ್ಡಿದರ ಇಳಿಸಲು ತೀರ್ಮಾನಿಸಲಾಗಿತ್ತು.
ಕೇಂದ್ರದ ವತಿಯಿಂದ ಬಡ್ಡಿದರ ನಿಗದಿ ಯಾಗಿರುವ ಹಿನ್ನೆಲೆಯಲ್ಲಿ ಇಪಿಎಫ್ ಮಂಡಳಿ ಶೀಘ್ರವೇ 5 ಕೋಟಿ ಮಂದಿ ಬಳಕೆದಾರರಿಗೆ ಅದನ್ನು ನೀಡಲು ಶುರು ಮಾಡಲಿದೆ.
1977-78ನೇ ಸಾಲಿನಲ್ಲಿ ಬಡ್ಡಿದರ ಶೇ.8 ಎಂದು ನಿರ್ಧರಿಸಿದ್ದು ಇದುವರಿಗಿನ ಕಡಿಮೆ ಪ್ರಮಾಣ ದ್ದಾಗಿತ್ತು. 2020-21ನೇ ಸಾಲಿ ನಲ್ಲಿ ಶೇ.8.5 ಎಂದು ನಿಗದಿ ಮಾಡಿತ್ತು.