ಪಟ್ಟಿಯಲ್ಲಿವೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಸೋಮೇಶ್ವರ ಅಭಯಾರಣ್ಯ
Advertisement
ಕುಂದಾಪುರ: ಕೊಲ್ಲೂರು ಮೂಕಾಂಬಿಕಾ ಅಭಯಾರಣ್ಯ ಪ್ರದೇಶ ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆಯಾಗಿ ಎರಡು ವರ್ಷಗಳಾಗುತ್ತಾ ಬಂದಿದ್ದು, ಒಂದೆರಡು ತಿಂಗಳುಗಳಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಮತ್ತು ಸೋಮೇಶ್ವರ ಅಭಯಾರಣ್ಯ ಕೂಡ ಇದೇ ಪಟ್ಟಿಗೆ ಸೇರಲಿವೆ.
ಕೊಲ್ಲೂರಿನ ಮೂಕಾಂಬಿಕಾ ಅಭಯಾರಣ್ಯವನ್ನು 2015ರಲ್ಲಿ ಪ್ರಕ್ರಿಯೆ ಆರಂಭಿಸಿ 2017ರ ಎಪ್ರಿಲ್‌ನಲ್ಲಿ ಪ.ಸೂ. ವಲಯವಾಗಿ ಘೋಷಿಸಲಾಗಿದೆ. ಶಿವಮೊಗ್ಗ, ಉಡುಪಿ ಜಿಲ್ಲೆಯ ಒಟ್ಟು 37 ಗ್ರಾಮಗಳು ಇದರ ವ್ಯಾಪ್ತಿಯಲ್ಲಿವೆ. ಕುಂದಾಪುರ ತಾಲೂಕಿನ ಹೊಸಂಗಡಿ, ಮಚ್ಚಟ್ಟು, ಉಳ್ಳೂರು, ಸಿದ್ದಾಪುರ, ಯಡಮೊಗೆ, ಹಳ್ಳಿಹೊಳೆ, ಬೆಳ್ಳಾಲ, ಆಜ್ರಿ, ಕೊಡ್ಲಾಡಿ, ಕರ್ಕುಂಜೆ, ಚಿತ್ತೂರು, ವಂಡ್ಸೆ, ನೂಜಾಡಿ, ಹಕೂìರು, ಆಲೂರು, ಕಾಲೊ¤àಡು, ನಾವುಂದ, ಗೋಳಿಹೊಳೆ, ಜಡ್ಕಲ್, ಕೊಲ್ಲೂರು, ಯಳಜಿತ್, ನುಕ್ಯಾಡಿ, ಹೊಸೂರು, ಮೂಡಿನಗದ್ದೆ ಗ್ರಾಮಗಳು ಸೇರಿವೆ.
Related Articles
ಅರಣ್ಯ ಸಂರಕ್ಷಣೆಗೆ, ಅರಣ್ಯದ ಸುತ್ತ ನಡೆಯುವ ಅನಪೇಕ್ಷಿತ ಚಟುವಟಿಕೆಗಳ ತಡೆಗಾಗಿ
ಕೇಂದ್ರ ಸರಕಾರದ ಪರಿಸರ, ಅರಣ್ಯ ಇಲಾಖೆಯಿಂದ ಸೂಕ್ಷ್ಮ ವಲಯ ಘೋಷಣೆಯಾಗುತ್ತದೆ. ಅರಣ್ಯ ಪ್ರದೇಶದ 10 ಕಿ.ಮೀ. ಸುತ್ತಳತೆಯ ಪ್ರದೇಶಗಳ ಚಟುವಟಿಕೆಗಳು ಅರಣ್ಯ ಇಲಾಖೆ ನಿಯಂತ್ರಣಕ್ಕೆ ಒಳಪಡುತ್ತವೆ.
Advertisement
ಏನೆಲ್ಲ ನಿರ್ಬಂಧಗಳು?ಘೋಷಿತ ಪ್ರದೇಶದ 10 ಕಿ.ಮೀ. ವ್ಯಾಪ್ತಿಯಲ್ಲಿ ರೆಸಾರ್ಟ್, ಹೊಟೇಲ್ ತೆರೆಯುವಂತಿಲ್ಲ. ಗಣಿಗಾರಿಕೆ, ಕೈಗಾರಿಕೆ, ಬೃಹತ್ ಜಲವಿದ್ಯುತ್ ಸ್ಥಾವರ, ಅಪಾಯಕಾರಿ ವಸ್ತುಗಳ ಉತ್ಪಾದನ ಘಟಕ, ಘನ, ದ್ರವ ತ್ಯಾಜ್ಯ ಘಟಕ, ಬೃಹತ್ ಪ್ರಮಾಣದ ಆಹಾರ ತಯಾರಿ ಘಟಕ, ಕೋಳಿಫಾರಂ ಘಟಕ, ಮರದ ಮಿಲ್ಲು, ಗಾಳಿಯಂತ್ರ ಸ್ಥಾಪನೆ, ಇಟ್ಟಿಗೆ ಶೋಧನೆ, ಕಟ್ಟಡ ನಿರ್ಮಾಣ ನಿಷೇಧವಾಗುತ್ತದೆ. ಕಾಡುತ್ಪತ್ತಿ ಸಂಗ್ರಹ, ವಿದ್ಯುದೀಕರಣ, ರಸ್ತೆ ಅಭಿವೃದ್ಧಿ ಇತ್ಯಾದಿ ಶರತ್ತಿನಲ್ಲಿ ಮಾಡಬಹುದಾಗಿದೆ. ಶಬ್ದ ಮಾಲಿನ್ಯ, ವಾಯು ಮಾಲಿನ್ಯದ ಚಟುವಟಿಕೆ ನಡೆಸುವಂತಿಲ್ಲ. ಆತಂಕ
ಮನೆಗಳಿಗೆ, ಕೃಷಿ ಪಂಪ್‌ಸೆಟ್‌ಗೆ ವಿದ್ಯುದೀ ಕರಣವಾಗಬೇಕಾದರೆ ಭೂಮಿಯಡಿ ಕೇಬಲ್ ಹಾಕಿದರೆ ಮಾತ್ರ ಅವಕಾಶ. ಕೃಷಿ ಚಟುವಟಿಕೆಗೆ ರಾಸಾಯನಿಕ ಬಳಕೆಗೂ ನಿಷೇಧವಿದೆ. ಸಾವಯವ ಕೃಷಿಗೆ ಮಾತ್ರ ಅವಕಾಶ. ರಸ್ತೆ ಡಾಮರೀಕರಣ ಕಷ್ಟ. ಕೃಷಿಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿಸುವಂತಿಲ್ಲ. ಪರಿಣಾಮವಾಗಿ ಭೂಮಿಯ ಬೆಲೆ ಇಳಿಯುತ್ತದೆ. ಈ ಭಾಗದ ಅನೇಕ ಪ್ರದೇಶಗಳಲ್ಲಿ ಕಸ್ತೂರಿರಂಗನ್ ವರದಿ ಪರಿಣಾಮವೂ ಇರಲಿದ್ದು, ಅದು ಜಾರಿಯಾದಾಗಲೂ ಇಂಥವೇ ಪರಿಣಾಮಗಳು ಆಗಲಿವೆ. ಅಭಿವೃದ್ಧಿಯ ಮೇಲೆ ಪರಿಣಾಮ
ಇದು ಅಭಿವೃದ್ಧಿಯ ಮೇಲೆ ಪರಿಣಾಮ ಬೀರಲಿದೆ. ಕೃಷಿ ಮಾಡದ, ನಿರುಪಯುಕ್ತ ಭೂಮಿಯಲ್ಲಿ ಅರಣ್ಯ ಬೆಳೆಸಬೇಕಾಗುತ್ತದೆ. ಇದರಿಂದಾಗಿ ವಲಯದ ವ್ಯಾಪ್ತಿಯನ್ನು ಒಂದು ಕಿ.ಮೀ.ಗೆ ಇಳಿಸಬೇಕು ಎಂದು ಬಲವಾದ ಕೂಗು ಇದೆ. ಕೊಲ್ಲೂರಿನಲ್ಲಿ 10.8 ಕಿ.ಮೀ. ವಿಸ್ತಾರಕ್ಕೆ ನಿಷೇಧ ಜಾರಿಯಾಗಿದೆ. ಹೊಟೇಲ್, ರೆಸಾರ್ಟ್‌ನಂತಹ ಸ್ಥಾಪನೆಗೆ 1 ಕಿ.ಮೀ. ಮಿತಿ ಹೇರಲಾಗಿದೆ. ವಾಹನಗಳ ಓಡಾಟಕ್ಕೆ ನಿಯಂತ್ರಣ ಬೀಳಲಿದೆ. ಆಕ್ಷೇಪಣೆಗೆ ಕಾಲಾವಕಾಶ ನೀಡಿದ್ದು, ಅವಧಿ ಮುಗಿದ ಬಳಿಕ ಸಮಿತಿ ಸಭೆ ನಡೆಸಿ ಅನಂತರ ಘೋಷಣೆ ಜಾರಿಯಾಗಲಿದೆ. 10 ಕಿ.ಮೀ. ಮಿತಿಯನ್ನು 1 ಕಿ.ಮೀ.ಗೆ
ಇಳಿಸಬೇಕು ಎಂದು ಜನರ ಬೇಡಿಕೆಯಿದೆ.
– ಜಯಪ್ರಕಾಶ್ ಹೆಗ್ಡೆ, ಮಾಜಿ ಸಂಸದರು ಮುಖ್ಯಮಂತ್ರಿಗಳು, ಸಂಸದರ ಜತೆ ಸೇರಿ 10 ಕಿ.ಮೀ. ಮಿತಿಯನ್ನು 1 ಕಿ.ಮೀ.ಗೆ ಇಳಿಸಲು ಪ್ರಯತ್ನಿಸಲಾಗುವುದು.
-ಬಿ.ಎಂ. ಸುಕುಮಾರ ಶೆಟ್ಟಿ, ಬೈಂದೂರು ಶಾಸಕರು ಲಕ್ಷ್ಮೀ ಮಚ್ಚಿನ