Advertisement

ಪ್ರವಾಸಿಗರಿಗೆ ಪರಿಸರಸ್ನೇಹಿ ಬಟ್ಟೆ ಬ್ಯಾಗ್‌ ವಿತರಣೆ

02:41 PM Jun 06, 2018 | |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಒಳ ಮತ್ತು ಹೊರ ಭಾಗದ ಸುತ್ತಲಿನಲ್ಲಿ ಪ್ಲಾಸ್ಟಿಕ್‌ ಮುಕ್ತ ಸ್ವತ್ಛ ಉದ್ಯಾನವನಕ್ಕಾಗಿ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ಆರ್‌.ರವಿಶಂಕರ್‌ ತಿಳಿಸಿದರು.

Advertisement

ಉದ್ಯಾನದ ವಿವಿಧ ವಲಯಗಳಲ್ಲಿ ವಿಶ್ವ ಪರಿಸರ ಪ್ರಯುಕ್ತ ಪರಿಸರಕ್ಕೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದರೊಟ್ಟಿಗೆ ವೀರನಹೊಸಹಳ್ಳಿ, ಮತ್ತಿಗೋಡು, ನಾಣಚ್ಚಿಗೇಟ್‌, ಸುಂಕದಕಟ್ಟೆ ಗೇಟ್‌ಗಳಲ್ಲಿ ಸಫಾರಿ ಹಾಗೂ ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ಇಲಾಖೆ ವತಿಯಿಂದ ಪರಿಸರಸ್ನೇಹಿ ಬಟ್ಟೆ ಬ್ಯಾಗ್‌ಗಳನ್ನು ವಿತರಿಸಲಾಗುವುದು.

ಪ್ರವಾಸಿಗರು ಬಳಸುವ ಪ್ಲಾಸ್ಟಿಕ್‌ ಮತ್ತಿತರ ವಸ್ತುಗಳನ್ನು  ಉದ್ಯಾನದೊಳಗೆ ಹಾಗೂ ಹೊರಗೆ ಎಸೆಯದೆ ವಾಪಾಸ್‌ ಚೀಲದಲ್ಲಿ ಕೊಂಡೊಯ್ಯಬೇಕಿದೆ. ಈ ಬ್ಯಾಗ್‌ಗೆ ನಿಗಧಿತ ಶುಲ್ಕ ವಿತರಿಸಲಾಗುವುದು. ಇದನ್ನು ಪ್ರಾಯೋಗಿಕವಾಗಿ ಸುಂಕದಕಟ್ಟೆ, ವೀರನಹೊಸಳ್ಳಿ, ನಾಣಚ್ಚಿಗೇಟ್‌ಗಳಲ್ಲಿ ಜಾರಿಗೆ ತರಲಾಗುವುದು. ಮುಂದಿನ ದಿನಗಳಲ್ಲಿ ಎಲ್ಲೆಡೆಗೆ ವಿಸ್ತರಿಸಲಾಗುವುದೆಂದರು. 

Advertisement

Udayavani is now on Telegram. Click here to join our channel and stay updated with the latest news.

Next