Advertisement

ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ

10:30 AM Jul 25, 2021 | Team Udayavani |

ಮಾನವನು ಪ್ರಕೃತಿಯಿಂದ ಎಲ್ಲವನ್ನು ವರದಾನವಾಗಿ ಪಡೆದಿದ್ದಾನೆ. ಗಿಡ-ಮರ, ನೀರು-ಗಾಳಿ, ಮಣ್ಣು ಎಲ್ಲವೂ ಇಂದು  ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿಯನ್ನು ನಾಶಮಾಡುವತ್ತ ನಮ್ಮ ಆಧುನೀಕರಣದ ತೇರು ಹೊರಟಿದೆ. ಇದರಿಂದ ಪ್ರಾಕೃತಿಕ ಸಂಪನ್ಮೂಲ ನಾಶವಾಗುವುದು ಮಾತ್ರವಲ್ಲದೆ ಸಕಲ ಚರಾಚರ ಜೀವರಾಶಿಗಳ ಪ್ರಾಣಕ್ಕೂ ತೊಂದರೆ ಉಂಟಾಗುತ್ತದೆ. ಅರಣ್ಯ ನಾಶದಿಂದಾಗಿ ಪ್ರಾಣಿಗಳೆಲ್ಲ ನಗರದತ್ತ ಲಗ್ಗೆ ಇಟ್ಟಿವೆ. ಹಿಂದೆ ಇದ್ದ ಅರಣ್ಯ, ಹೊಲ ಗದ್ದೆಗಳು ಇಂದು ಕಣ್ಮರೆಯಾಗಲು ಮೂಲ ಕಾರಣ ಅತಿಯಾದ ನಗರೀಕರಣ. ಹಾಗೆಂದು ನಗರೀಕರಣ ತಪ್ಪೆಂದಲ್ಲ. ಬದಲಾಗಿ ಪ್ರಾಕೃತಿಕ ಸಂಪನ್ಮೂಲ ಉಳಿಸುವ ಜತೆ ಸಹ್ಯ ಅಭಿವೃದ್ಧಿಗೆ ಒತ್ತು ನೀಡಬೇಕು.

Advertisement

ಪರಿಸರವನ್ನು ಸಂರಕ್ಷಿಸುವ ಕಾರ್ಯ ಪ್ರತಿಯೊಬ್ಬ ಮನುಷ್ಯನ ಆದ್ಯ ಕರ್ತವ್ಯವಾಗಿದೆ. ನಾವು ಸಾಮಾಜಿಕ ಜಾಲತಾಣದಲ್ಲಿ ಸಂರಕ್ಷಣೆ ಕುರಿತಾಗಿ ಬರೆವಣಿಗೆ ಪೋಸ್ಟ್‌ ಮಾಡುವ ಮೂಲಕ ಸಂರಕ್ಷಣೆ ಮಾಡುವುದಲ್ಲ ಅಥವಾ ವರ್ಷಕ್ಕೆ ಒಂದು ದಿನ ಪರಿಸರ ದಿನಾಚರಣೆ ಆಚರಿಸಿ ಗಿಡ ನಡುವುದೂ ಅಲ್ಲ ಪ್ರತೀ ದಿನವೂ ಆ ಕಾಳಜಿ ಇರಬೇಕು, ದಿನಾಲೂ ಉಸಿರಾಡಲು ಇಷ್ಟು ಆಮ್ಲಜನಕ ಕೊಟ್ಟಿರುವ ಪ್ರಕೃತಿಗೆ ನಾವೇನಾದರೂ ಕೊಡುಗೆ ಕೊಡಲೇಬೇಕು, ನಾವು ಪರಿಸರ ದಿನದಂದು ಮಾತ್ರ ಉಸಿರಾಡುವುದಿಲ್ಲ , ಪ್ರತೀ ದಿನ ನಮಗೆ ಆಮ್ಲಜನಕ ಪೂರೈಕೆ ಆಗಬೇಕು. ಪ್ರಸ್ತುತ ಆಮ್ಲಜನಕದ ಮಹತ್ವ ನಮಗೆ ಅರಿವಾಗುವ ಕಾಲಬಂದಿದೆ. ಇಂದು ಆಮ್ಲಜನಕಕ್ಕಾಗಿ ಹಣ ನೀಡುತ್ತೇವೆ. ಆದರೆ ಪರಿಸರದಲ್ಲಿ ಅದೆಷ್ಟೋ ವರ್ಷಗಳಿಂದ ಬೇರೂರಿ ಉಚಿತ ಗಾಳಿ, ತಂಪು, ಹಣ್ಣು, ಹೂ ನೀಡುವ ಮರವನ್ನು ಕ್ಷಣಮಾತ್ರದಲ್ಲಿ ಧರೆಗುರುಳಿಸಿ ಬಿಡುತ್ತೇವೆ. ಇಂದು ನಮ್ಮ ಸ್ವಾರ್ಥಕ್ಕೆ ತಕ್ಕ ಪಾಠ ಪ್ರಕೃತಿಯೇ ಕಲಿಸಿದಂತಿದೆ.

ಕಾಡು ಬೆಳೆಸಿ, ನಾಡು ಉಳಿಸಿ, ಪರಿಸರ ಸಂರಕ್ಷಣೆ,ಅರಣ್ಯ ಸಂಪತ್ತು ಉಳಿಸಿ, ಎಂಬುದು ಕೇವಲ ಘೋಷಣೆಗೆ ಸೀಮಿತವಾಗಬಾರದು, ಈ ಹಸುರು ಸಸಿಗಳ ಹಸುರೀಕರಣಕ್ಕೆ ಪ್ರತಿಯೊಬ್ಬರು ಕೈ ಜೋಡಿಸಿ, ಈ ಮಳೆಯ ತಂಪಾದ ಪ್ರದೇಶದಲ್ಲಿ,ನಿಮ್ಮ ಮನೆಯ ಸುತ್ತಮುತ್ತಲಿನಲ್ಲಿ ಒಂದೊಂದು ಗಿಡಗಳನ್ನು ಬೆಳೆಸಿ,ಸಂರಕ್ಷಿಸಿ , ಇದು ಕೇವಲ ಮಾತಿಗೆ ಅಥವಾ ಬರೆದ ಪದಗಳಿಗೆ ಸೀಮಿತವಾಗಬಾರದು, ಕರ್ತವ್ಯಗಳನ್ನು ಪಾಲಿಸಿ, ನಾಶವಾಗುತ್ತಿರುವ ಪರಿಸರ ಗಿಡ – ಮರ ,ಪ್ರಾಣಿ,ಪಕ್ಷಿಗಳ ಉಳಿವಿಗಾಗಿ ಎಲ್ಲರೂ ಕೈ ಜೋಡಿಸೋಣ, ಹಸುರು ಪ್ರಕೃತಿಯ ಜತೆಗೆ, ಉತ್ತಮವಾಗಿ ಉಸಿರಾಡುತ್ತ ಹೋಗೋಣ ಮುಂದಿನ ದಿನಕ್ಕೆ……!

 

ಶರತ್‌ ಎಂ. ಸಿ. ಎಲ್‌.

Advertisement

ಮುದೂರು

Advertisement

Udayavani is now on Telegram. Click here to join our channel and stay updated with the latest news.

Next