Advertisement

ಪರಿಸರ ಸಂರಕ್ಷಣೆ ನಾಗರೀಕರ ಕರ್ತವ್ಯ

05:12 AM Jun 07, 2020 | Lakshmi GovindaRaj |

ಪಿರಿಯಾಪಟ್ಟಣ: ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ, ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶಾಸಕ ಕೆ.ಮಹದೇವ್‌ ತಿಳಿಸಿದರು. ಪುರಸಭೆ ಆಯೋಜಿಸಿದ್ದ ವಿಶ್ವ  ಪರಿಸರ ದಿನಾ ಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

Advertisement

ಜಾಗತಿಕ ತಾಪಮಾನ ವನ್ನು ನಿಯಂತ್ರಿಸಬೇಕಾದರೆ ಮನೆಗೊಂದು ಮರದಂತೆ ನೆಟ್ಟಿರೆ ಊರಿಗೊಂದು ವನವಾಗಿ ಮಾರ್ಪಡಿಸಬೇಕು. ಪ್ರಸುತ  ಜಗತ್ತಿನಲ್ಲಿ ಆಧುನಿಕತೆ, ನಗರೀಕರಣ, ಕೈಗಾರೀಕರಣ, ವಿಜ್ಞಾನ, ತಂತ್ರಜ್ಞಾನದ ಅಭಿ ವೃದಿ ನೆಪದಲ್ಲಿ ಪರಿಸರಕ್ಕೆ ಧಕ್ಕೆ ಉಂಟಾಗಿದೆ ಎಂದು ವಿಷಾದಿಸಿದರು.

ಪರಿಸರ ರಕ್ಷಣೆಯಾಗಲಿ: ವಾಯುಮಾಲಿನ್ಯ, ಜಲ ಮಾಲಿನ್ಯ, ಅಧಿಕ ಉಷ್ಣಾಂಶ, ಅರಣ್ಯನಾಶ, ಮಣ್ಣಿನ ಮಾಲಿನ್ಯಗಳಿಂದ ಪರಿಸರದಲ್ಲಿ ಏರುಪೇರುಗಳಿಗೆ  ಮನುಷ್ಯನ ದುರಾಸೆಯೇ ಕಾರಣ. ಪ್ರತಿಯೊಬ್ಬರಲ್ಲೂ ಪರಿಸರ ಜಾಗೃತಿ  ಮೂಡಿಸುವ ಕೆಲಸ ಆಗಬೇಕು. ಕೇವಲ ವರ್ಷದ ಒಂದು ದಿನಕ್ಕೆ ಪರಿಸರ ರಕ್ಷಣೆ ಸೀಮಿ ತವಾಗಬಾರದು. ದಿನವೂ ಕಾಳಜಿ ವಹಿಸಬೇಕು.

ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ, ತಹ ಶೀಲ್ದಾರ್‌ ಶ್ವೇತಾ, ತಾಪಂ ಇಒ ಶೃತಿ, ಜಿಪಂ ಸದಸ್ಯೆ ಕೌಶಲ್ಯ,  ಪುರ ಸಭಾ ಮುಖ್ಯಾಧಿಕಾರಿ ಚಂದ್ರ ಕುಮಾರ್‌, ಸದಸ್ಯ ರಾದ ಪ್ರಕಾಶ್‌ ಸಿಂಗ್‌, ಕೃಷ್ಣ, ರವಿ, ಭಾರತಿ, ಡಿಸಿಸಿ ಬ್ಯಾಂಕ್ನ ನಿರ್ದೇಶಕ ರವಿ, ಗ್ರಾಪಂ ಅಧ್ಯಕ್ಷ ಸಯ್ಯದ್‌ ಅಬ್ರಾಕ್‌ ವಿಎಸ್ಸೆಸ್ಸೆನ್‌ ಅಧ್ಯಕ್ಷ ಶಿವಣ್ಣ, ನಿರ್ದೇಶಕ ಬಸವ ರಾಜೇಅರಸ್‌, ಶುಂಠಿ ಸುರೇಶ್‌, ಮುಸೀರ್‌ ಖಾನ್‌, ಸತೀಶ್‌, ಎಇಇಗಳಾದ ಪ್ರಭು, ನಾಗರಾಜ್‌, ಬಿಸಿಎಂ ವಿಸ್ತ ರಣಾಧಿಕಾರಿ ಮೋಹನ್‌ ಕುಮಾರ್‌, ವಲಯ ಅರ ಣ್ಯಾಧಿಕಾರಿ ರತನ್‌, ಸಮಾಜ ಕಲ್ಯಾಣಾ ಧಿಕಾರಿ ಸಿದ್ದೇಗೌಡ, ಪಿಡಿಒ ರವಿಕುಮಾರ್‌  ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next